ಬಂಧನದ ಬಳಿಕ ಕೊವಿಡ್ 19 ಕೇಂದ್ರದಲ್ಲಿ ಕಾಲ ಕಳೆದ ಆರೋಪಿ ಅರ್ನಬ್ ಗೋಸ್ವಾಮಿ
05/11/2020
ಅಲಿಬೌಗ್: ಇಂಟೀರಿಯರ್ ಡಿಸೈನರ್ ನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತನಾಗಿರುವ ಆರೋಪಿ, ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಬ್ ಗೋಸ್ವಾಮಿಯನ್ನು ಕೊವಿಡ್ 19 ಕೇಂದ್ರದಲ್ಲಿ ನಿನ್ನೆ ಇರಿಸಲಾಗಿತ್ತು ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದ ರಾಯ್ ಗಢ್ ಜಿಲ್ಲೆಯಲ್ಲಿರುವ ಅಲಿಬೌಗ್ ನ ಕೋರ್ಟ್ ನಿನ್ನೆ ಅರ್ನಬ್ ಗೋಸ್ವಾಮಿ ಮತ್ತು ಇತರ ಇಬ್ಬರನ್ನು ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. ನ್ಯಾಯಾಂಗ ಬಂಧನಕ್ಕೊಳಗಾದ ಅರ್ನಬ್ ಕಳೆದ ರಾತ್ರಿ ಕೋವಿಡ್-19 ಕೇಂದ್ರಕ್ಕೆ ಮೀಸಲಾಗಿದ್ದ ಸ್ಧಳೀಯ ಶಾಲೆಯೊಂದರಲ್ಲಿ ರಾತ್ರಿ ಕಳೆದಿದ್ದಾರೆ.
ಬಂಧನದ ಬಳಿಕ ಅರ್ನಬ್ ನನ್ನು ರಾತ್ರಿ ವೈದ್ಯಕೀಯ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಪರೀಕ್ಷೆಯ ಬಳಿಕ ಅಲಿಬೌಗ್ ನಗರ ಪರಿಷತ್ ಶಾಲೆಗೆ ಕೊಂಡೊಯ್ಯಲಾಯಿತು. ಅರ್ನಬ್ ಗೋಸ್ವಾಮಿ ಮತ್ತು ಇತರ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ಮತ್ತು 34ರಡಿ ಕೇಸು ದಾಖಲಾಗಿದೆ.