ಮಹಿಳೆಯನ್ನು ಕೊಂದು ಅಡುಗೆ ಮನೆಯಲ್ಲಿಯೇ ಸುಟ್ಟ ಲಿವ್ ಇನ್ ಪಾಟ್ನರ್! - Mahanayaka
5:05 PM Wednesday 11 - December 2024

ಮಹಿಳೆಯನ್ನು ಕೊಂದು ಅಡುಗೆ ಮನೆಯಲ್ಲಿಯೇ ಸುಟ್ಟ ಲಿವ್ ಇನ್ ಪಾಟ್ನರ್!

kerala news
07/09/2021

ಇಡುಕ್ಕಿ: ಲಿವ್ ಇನ್ ಪಾಟ್ನರ್ ನನ್ನು ವ್ಯಕ್ತಿಯೋರ್ವ ಹತ್ಯೆ ಮಾಡಿದ್ದಲ್ಲದೇ ಅಡುಗೆ ಮನೆಯಲ್ಲಿಯೇ ಶವವನ್ನು ಸುಟ್ಟ ಆಘಾತಕಾರಿ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದ್ದು,  ಕೃತ್ಯದ ಬಳಿಕ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಿನೋಯ್ ಬಂಧಿತ ಆರೋಪಿಯಾಗಿದ್ದು, ಈತ ತನ್ನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ 45 ವರ್ಷ ವಯಸ್ಸಿನ ಸಿಂಧು ಬಾಬು ಎಂಬವರನ್ನು  ಹತ್ಯೆ ಮಾಡಿದ್ದು ಬಳಿಕ 26 ದಿನಗಳಿಂದ ಪೊಲೀಸರು ಕಣ್ತಪ್ಪಿಸಿ  ಓಡಾಡುತ್ತಿದ್ದ ಎಂದು ತಿಳಿದು ಬಂದಿದೆ.

ಹತ್ಯೆಗೀಡಾದ ಮಹಿಳೆ ಬಿನೋಯ್ ನ ಮನೆಯಲ್ಲಿ ತನ್ನ ಪುತ್ರ ಅಖಿಲ್ ಜೊತೆಗೆ ವಾಸವಿದ್ದಳು ಎನ್ನಲಾಗಿದೆ. ಪತಿಯಿಂದ ದೂರವಾಗಿದ್ದ ಸಿಂಧು ಅವರನ್ನು ಬಿನೋಯ್ ಸೆಳೆದಿದ್ದ. ಹೀಗಾಗಿ ಇವರಿಬ್ಬರ ನಡುವೆ ಪ್ರೇಮ ಸಂಬಂಧವಿತ್ತು ಎಂದು ಹೇಳಲಾಗಿದೆ.

ಪ್ರೇಮ ಸಂಬಂಧದ ನಡುವೆಯೇ ಸಿಂಧು ತನ್ನ ಮೊದಲ ಪತಿಯ ಬಗ್ಗೆ ಸಹಾನುಭೂತಿ ಹೊಂದಿದ್ದಳು. ಇದು ಬಿನೋಯ್ ನಿಂದ ಸಹಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಬಿನೋಯ್ ಸಿಂಧುವನ್ನು ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಸಿಂಧು ನಾಪತ್ತೆಯಾಗಿರುವ ಬಗ್ಗೆ ಆಗಸ್ಟ್ 12ರಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹುಡುಕಾಟ ನಡೆಸಿ ಮೃತದೇಹವನ್ನು ಕೊನೆಗೂ ಪತ್ತೆ ಹಚ್ಚಿದ್ದಾರೆ.  ಬಳಿಕ ಆರೋಪಿ ಬಿನೋಯ್ ಗಾಗಿ  ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಆರೋಪಿಯು ಇಡುಕ್ಕಿ ಜಿಲ್ಲೆಯ ಪ್ಲಾಂಟೇಷನ್ ಪ್ರದೇಶವೊಂದರಲ್ಲಿ ಅಡಗಿರುವ ಮಾಹಿತಿ ಲಭ್ಯವಾಗಿದ್ದು, ಈ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನಷ್ಟು ಸುದ್ದಿಗಳು…

 

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: 7ನೇ ಆರೋಪಿ ತಮಿಳುನಾಡಿನಲ್ಲಿ ಅರೆಸ್ಟ್

ಬ್ರಾಹ್ಮಣರು ಹಾಗೂ ದಲಿತರು ಒಂದಾಗಬೇಕು | ಬಿಎಸ್ ಪಿ ವರಿಷ್ಠೆ ಮಾಯಾವತಿ ಕರೆ

ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಹೆಚ್ಚಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈಅಲಾರ್ಟ್

ತರಗತಿ ಆರಂಭವಾದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ 10 ದಿನ ದಸರ ರಜೆ!

ಮಳೆಗಾಗಿ 6 ವರ್ಷ ವಯಸ್ಸಿನ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಗ್ರಾಮದ ಹಿರಿಯರು!

ಕೃಷಿ ಇಲಾಖೆಯಲ್ಲಿ 210 ಕೋಟಿ ರೂ. ಭ್ರಷ್ಟಾಚಾರ: ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಗೆ ದೂರು

ಸೆಪ್ಟಂಬರ್ 27ರಂದು ಭಾರತ್ ಬಂದ್: ಕೇಂದ್ರ ಸರ್ಕಾರದ ವಿರುದ್ಧ ತೀವ್ರತೆ ಪಡೆದ ರೈತರ ಹೋರಾಟ

ಇತ್ತೀಚಿನ ಸುದ್ದಿ