ಡ್ರಗ್ಸ್ ಕಂಟಕ: ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು? | ರೂಮ್ ಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದಳು ಎಂದ ಕಿಶೋರ್ ಶೆಟ್ಟಿ? - Mahanayaka
10:49 PM Wednesday 11 - December 2024

ಡ್ರಗ್ಸ್ ಕಂಟಕ: ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು? | ರೂಮ್ ಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದಳು ಎಂದ ಕಿಶೋರ್ ಶೆಟ್ಟಿ?

anushree
08/09/2021

ಬೆಂಗಳೂರು: ನಟಿ, ಆ್ಯಂಕರ್ ಅನುಶ್ರೀಗೆ ಮತ್ತೆ ಡ್ರಗ್ಸ್ ಕಂಟಕ ಆರಂಭವಾಗಿದ್ದು, ಎ2 ಆರೋಪಿ ಕಿಶೋರ್ ಅಮನ್ ಶೆಟ್ಟಿ ನೀಡಿರುವ ಹೇಳಿಕೆಯಲ್ಲಿ ಅನುಶ್ರೀ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಲಾಗಿದೆ ಎಂದು ಹೇಳಲಾಗಿದ್ದು, ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಆರೋಪಿ ಕಿಶೋರ್ ಅಮನ್ ಶೆಟ್ಟಿ ಹೇಳಿಕೆಯ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ವಿಚಾರ ಪ್ರಸ್ತಾಪಿಸಲಾಗಿದೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಕಿಶೋರ್ ಹಾಗೂ ತರುಣ್ ರೂಮ್ ಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದರು. ಕಿಶೋರ್ ಜೊತೆಗೆ ಸಾಕಷ್ಟು ಬಾರಿ ಅನುಶ್ರೀ ಕೂಡ ಡ್ರಗ್ಸ್ ಸೇವನೆ ಮಾಡಿದ್ದರು ಎಂದು ಕಿಶೋರ್ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. ರಿಯಾಲಿಟಿ ಶೋನ ಕೊರಿಯೋಗ್ರಾಫರ್ ಆಗಿದ್ದ ತರುಣ್ ಮೂಲಕ ತನಗೆ ಅನುಶ್ರೀ ಪರಿಚಯವಾಗಿತ್ತು. ತರುಣ್ ರೂಮ್ ನಲ್ಲಿ ತಡರಾತ್ರಿಯವರೆಗೂ ಅನುಶ್ರೀಗೆ ಡಾನ್ಸ್ ಪ್ರಾಕ್ಟೀಸ್ ಮಾಡಿಸುತ್ತಿದ್ದೆವು. ಅನುಶ್ರೀ ಎಕ್ಸ್ ಟಸಿ ಡ್ರಗ್ಸ್ ಖರೀದಿಸಿ ತರುತ್ತಿದ್ದಳು ಎಂದು ಕಿಶೋರ್ ಹೇಳಿಕೆ ನೀಡಿದ್ದಾನೆ ಎಂದು ಹೇಳಲಾಗಿದೆ.

ಅನುಶ್ರೀಗೆ ಡ್ರಗ್ಸ್ ಪೆಡ್ಲರ್ ಗಳ ಪರಿಚಯವಿದೆ. ಡ್ರಗ್ಸ್ ಎಲ್ಲಿ ಸಿಗುತ್ತದೆ. ಯಾರು ಪೂರೈಸುತ್ತಾರೆಂದು ಆಕೆಗೆ ಗೊತ್ತಿತ್ತು. ಡ್ರಗ್ಸ್ ಅಷ್ಟು ಸುಲಣವಾಗಿ ಅನುಶ್ರೀಗೆ ಹೇಗೆ ಸಿಗುತ್ತಿತ್ತು ಗೊತ್ತಿಲ್ಲ ಎಂದು ಎ2 ಆರೋಪಿ ಕಿಶೋರ್ ಶೆಟ್ಟಿ ನೀಡಿರುವ ಹೇಳಿಕೆಯನ್ನು ಜಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನೂ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ನಟಿಯರ ಹಾಗೂ ಆ್ಯಂಕರ್ ಗಳ ಹೆಸರು ಕೂಡ ಕೇಳಿ ಬಂದಿತ್ತು. ನಟಿ ರಾಗಿಣಿ, ಸಂಜನಾ ಈ ಸಂಬಂಧ ಜೈಲಿನಲ್ಲಿಯೂ ದಿನ ಕಳೆದಿದ್ದರು. ದೊಡ್ಡ ಡೊಡ್ಡ ತಿಮಿಂಗಿಲಗಳನ್ನು ಬಿಟ್ಟು, ಸಣ್ಣ ಮೀನಗಳನ್ನು ಬೇಟೆಯಾಡಲಾಗುತ್ತಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿತ್ತು. ಸದ್ಯ ಡ್ರಗ್ಸ್ ಯಾರು ಹಂಚುತ್ತಿದ್ದಾರೆ ಮತ್ತು ಯಾರು ಸೇವಿಸುತ್ತಿದ್ದಾರೆ ಎಂಬ ವಿಚಾರಕ್ಕೆ ಹೆಚ್ಚಿನ ಒತ್ತು ನೀಡಿದಂತಿದೆ. ಆದರೆ, ಈ ಡ್ರಗ್ಸ್ ಎಲ್ಲಿಂದ ಬರುತ್ತಿದೆ? ಡ್ರಗ್ಸ್ ನ್ನು ಯಾರು ಆಮದು ಮಾಡಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ದೊಡ್ಡಮಟ್ಟದಲ್ಲಿ ತನಿಖೆ ಆರಂಭವಾಗಬೇಕು. ಇದರಲ್ಲಿ ರಾಜಕಾರಣಿಗಳ ಪಾತ್ರ ಕೂಡ ಇರಬಹುದು ಎನ್ನುವ ಅಭಿಪ್ರಾಯಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಇನ್ನಷ್ಟು ಸುದ್ದಿಗಳು…

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಪಿಎಸ್ ಐ ಅರ್ಜುನ್ ಗೆ ಜೈಲೇ ಗತಿ

ಮಹಿಳೆಯನ್ನು ಕೊಂದು ಅಡುಗೆ ಮನೆಯಲ್ಲಿಯೇ ಸುಟ್ಟ ಲಿವ್ ಇನ್ ಪಾಟ್ನರ್!

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: 7ನೇ ಆರೋಪಿ ತಮಿಳುನಾಡಿನಲ್ಲಿ ಅರೆಸ್ಟ್

ಬ್ರಾಹ್ಮಣರು ಹಾಗೂ ದಲಿತರು ಒಂದಾಗಬೇಕು | ಬಿಎಸ್ ಪಿ ವರಿಷ್ಠೆ ಮಾಯಾವತಿ ಕರೆ

ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಹೆಚ್ಚಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈಅಲಾರ್ಟ್

ಕೃಷಿ ಇಲಾಖೆಯಲ್ಲಿ 210 ಕೋಟಿ ರೂ. ಭ್ರಷ್ಟಾಚಾರ: ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಗೆ ದೂರು

ಇತ್ತೀಚಿನ ಸುದ್ದಿ