ನಿಶ್ಚಿತಾರ್ಥವಾದ ಬೆನ್ನಲ್ಲೇ ಗಂಡಿಗೆ ಶಾಕ್ ನೀಡಿದ ಯುವತಿ | ಚಿನ್ನಾಭರಣದೊಂದಿಗೆ ಪರಾರಿ, ತಾಯಿಗೂ ಟೋಪಿ ಹಾಕಿದ ಮಗಳು!
ಮಂಗಳೂರು: ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿಯೋರ್ವಳು, ಗಂಡಿನ ಕಡೆಯವರು ನೀಡಿದ್ದ ಚಿನ್ನಾಭರಣ ಹಾಗೂ ಹಣದೊಂದಿಗೆ ನಾಪತ್ತೆಯಾಗಿರುವ ಘಟನೆ ಬರ್ಕೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪರಾರಿಯಾಗುವುದಕ್ಕೂ ಮೊದಲು ಸುಮಾರು 90 ಸಾವಿರ ರೂಪಾಯಿಗಳನ್ನು ವ್ಯಕ್ತಿಯೋರ್ವನ ಖಾತೆಗೆ ವರ್ಗಾಯಿಸಿರುವ ಆರೋಪ ಕೇಳಿ ಬಂದಿದೆ.
ಮೂಲತಃ ಗದಗ ನಿವಾಸಿಯಾಗಿರುವ, ಅಪಾರ್ಟ್ ಮೆಂಟ್ ವೊಂದರಲ್ಲಿ ವಾಚ್ ಮೇನ್ ಆಗಿರುವ ಯಶೋಧಾ ಎಂಬವರ ಪುತ್ರಿ 21 ವರ್ಷ ವಯಸ್ಸಿನ ರೇಷ್ಮಾ ಎಂಬಾಕೆಯ ನಿಶ್ಚಿತಾರ್ಥ ಆ.21ರಂದು ನಡೆದಿತ್ತು. ನಿಶ್ಚಿತಾರ್ಥದ ವೇಳೆ ಗಂಡಿನ ಮನೆಯವರು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಹಾಗೂ 50 ಸಾವಿರ ರೂಪಾಯಿ ಮೌಲ್ಯದ ಉಂಗೂರ, 60 ಸಾವಿರ ರೂಪಾಯಿ ಮೌಲ್ಯದ ಕಿವಿಯೋಲೆ, ಕಾಲು ಗೆಜ್ಜೆ ನೀಡಿದ್ದರು ಎನ್ನಲಾಗಿದೆ.
ಗಂಡಿನ ಕಡೆಯವರು ನೀಡಿದ ಚಿನ್ನಾಭರಣಗಳು ಸೇರಿದಂತೆ ಕೂಲಿ ಕೆಲಸ ಮಾಡಿ ಬ್ಯಾಂಕ್ ಖಾತೆಯಲ್ಲಿ ಉಳಿತಾಯ ಮಾಡಿದ್ದ 90 ಸಾವಿರ ರೂಪಾಯಿಯನ್ನೂ ಅಕ್ಬರ್ ಅಲಿ ಎಂಬಾತನ ಖಾತೆ ವರ್ಗಾಯಿಸಿದ್ದಾಳೆ ಎಂದು ತಾಯಿಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಾಯಿ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಪ್ರೀತಿಸಿ ವಿವಾಹವಾಗಿದ್ದವರನ್ನು ಜಾತಿಗಾಗಿ ಬೇರ್ಪಡಿಸಿದರು! | ಫೇಸ್ ಬುಕ್ ಲೈವ್ ಗೆ ಬಂದು ಯುವಕ ಆತ್ಮಹತ್ಯೆ
ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಪಿಎಸ್ ಐ ಅರ್ಜುನ್ ಗೆ ಜೈಲೇ ಗತಿ
ಮಹಿಳೆಯನ್ನು ಕೊಂದು ಅಡುಗೆ ಮನೆಯಲ್ಲಿಯೇ ಸುಟ್ಟ ಲಿವ್ ಇನ್ ಪಾಟ್ನರ್!
ಬ್ರಾಹ್ಮಣರು ಹಾಗೂ ದಲಿತರು ಒಂದಾಗಬೇಕು | ಬಿಎಸ್ ಪಿ ವರಿಷ್ಠೆ ಮಾಯಾವತಿ ಕರೆ
ನಿಫಾ ವೈರಸ್ ನ ರೋಗ ಲಕ್ಷಣಗಳೇನು ಗೊತ್ತಾ? | ರೋಗಿ ಕೋಮಾಕ್ಕೆ ಹೋಗುವ ಸಾಧ್ಯತೆ ಹೆಚ್ಚು!
ಕೃಷಿ ಇಲಾಖೆಯಲ್ಲಿ 210 ಕೋಟಿ ರೂ. ಭ್ರಷ್ಟಾಚಾರ: ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಗೆ ದೂರು