ಅನುಶ್ರೀ ಮುಖವಾಡ ಕಳಚಿದೆ, ಜೈಲಿಗೆ ಹೋಗೋದು ಪಕ್ಕಾ | ಪ್ರಶಾಂತ್ ಸಂಬರ್ಗಿ
ಬೆಂಗಳೂರು: ಡ್ರಗ್ಸ್ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ಆ್ಯಂಕರ್ ಅನುಶ್ರೀ ಹೆಸರು ಉಲ್ಲೇಖ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ, ಅನುಶ್ರೀ ಮುಖವಾಡ ಕಳಚಿದೆ. ಜೈಲಿಗೆ ಹೋಗುವುದು ಪಕ್ಕಾ ಎಂದು ಹೇಳಿದ್ದಾರೆ.
2020ರಲ್ಲಿ ಶುಗರ್ ಡ್ಯಾಡಿ ಎಂದು ಟ್ವೀಟ್ ಮಾಡಿದ್ದೆ. ಆಗ ಮಾಜಿ ಸಿಎಂ ಒಬ್ಬರು ಊಹಾಪೋಹಕ್ಕೆ ನಾಂದಿ ಹಾಡಿದ್ದರು. ಮುಂದಿನ ದಿನಗಳಲ್ಲಿ ಈ ಕುರಿತ ಆಡಿಯೋ ರಿಲೀಸ್ ಮಾಡುತ್ತೇನೆ. ಡ್ರಗ್ಸ್ ಪ್ರಕರಣದಲ್ಲಿ ಅನುಶ್ರೀಯನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಅವರು ಆರೋಪಿಸಿದರು.
ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಸಿಸಿಬಿ ಪೊಲೀಸ್ ಅಧಿಕಾರಿ ಶಿವಪ್ರಕಾಶ್ ನಾಯಕ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ಕೇಸ್ ನಲ್ಲಿ ಮಂಗಳೂರು ಪೊಲೀಸರು ವೀಕ್ ಆಗಿದ್ದಾರೆ. ಪ್ರಕರಣದ ಮರು ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಡ್ರಗ್ಸ್ ಪ್ರಕರಣದಲ್ಲಿ ಕಿಶೋರ್ ಶೆಟ್ಟಿ, ತರುಣ್ ಬಂಧನವಾದಾಗಲೇ, ತರುಣ್, ಅನುಶ್ರೀ ಡ್ರಗ್ಸ್ ಸೇವನೆ ಹಾಗೂ ಪೆಡ್ಲಿಂಗ್ ಬಗ್ಗೆ ಬಾಯ್ಬಿಟ್ಟಿದ್ದ. ಅನುಶ್ರೀಯನ್ನು ಬಚಾವ್ ಮಾಡಲು ತರುಣ್ ನನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಅನುಶ್ರೀ ಮಂಗಳೂರಿನಲ್ಲಿ 12 ಕೋಟಿ ರೂಪಾಯಿಯ ಮನೆ ಕಟ್ಟಿಸಿದ್ದಾರೆ. ಬೆಂಗಳೂರಿನಲ್ಲಿ 4 ಕೋಟಿ ಮೌಲ್ಯದ ಮನೆ ನಿರ್ಮಿಸಿದ್ದಾರೆ. ಇದಕ್ಕೆಲ್ಲ ಹಣ ಟಿವಿ ಶೋದಿಂದಲೇ ಬಂದಿದ್ದರೆ, ಒಳ್ಳೆಯದು ಆದರೆ, ಅನುಶ್ರೀ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.
ಇನ್ನಷ್ಟು ಸುದ್ದಿಗಳು…
ರವಿಶಂಕರ್ ಗುರೂಜಿ ಆಶ್ರಮದವರಿಗೇ ಮಂಕುಬೂದಿ ಎರಚಿ ವಂಚಿಸಿದ ನಕಲಿ ಐಎಎಸ್ ಅಧಿಕಾರಿ!
ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಲಾರಿ | ಕಾರಿನಲ್ಲಿದ್ದ ಇಬ್ಬರ ದುರಂತ ಸಾವು
ನಿಶ್ಚಿತಾರ್ಥವಾದ ಬೆನ್ನಲ್ಲೇ ಗಂಡಿಗೆ ಶಾಕ್ ನೀಡಿದ ಯುವತಿ | ಚಿನ್ನಾಭರಣದೊಂದಿಗೆ ಪರಾರಿ, ತಾಯಿಗೂ ಟೋಪಿ ಹಾಕಿದ ಮಗಳು!
ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಹೆಚ್ಚಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈಅಲಾರ್ಟ್
ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: 7ನೇ ಆರೋಪಿ ತಮಿಳುನಾಡಿನಲ್ಲಿ ಅರೆಸ್ಟ್
ಬ್ರಾಹ್ಮಣರು ಹಾಗೂ ದಲಿತರು ಒಂದಾಗಬೇಕು | ಬಿಎಸ್ ಪಿ ವರಿಷ್ಠೆ ಮಾಯಾವತಿ ಕರೆ