ತಾಲಿಬಾನ್ ಉಗ್ರನ ಬಂದೂಕಿಗೆ ಎದೆಯೊಡ್ಡಿದ ಅಫ್ಘಾನಿಸ್ತಾನದ ಮಹಿಳೆಯ ಧೈರ್ಯಕ್ಕೆ ಭೇಷ್ ಎಂದ ನೆಟ್ಟಿಗರು! - Mahanayaka
10:58 PM Wednesday 11 - December 2024

ತಾಲಿಬಾನ್ ಉಗ್ರನ ಬಂದೂಕಿಗೆ ಎದೆಯೊಡ್ಡಿದ ಅಫ್ಘಾನಿಸ್ತಾನದ ಮಹಿಳೆಯ ಧೈರ್ಯಕ್ಕೆ ಭೇಷ್ ಎಂದ ನೆಟ್ಟಿಗರು!

afghanistan women
08/09/2021

ಕಾಬುಲ್: ಅಫ್ಘಾನ್ ನ ಮಹಿಳೆಯೊಬ್ಬರು ತಾಲಿಬಾನ್ ಉಗ್ರನ ಬಂದೂಕಿಗೆ ಎದೆ ಒಡ್ಡಿ ಧೈರ್ಯದಿಂದ ನಿಂತ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದಾಸ್ಯದ ವಿರುದ್ಧ ನಿಂತ ಮಹಿಳೆಯ ದಿಟ್ಟತನಕ್ಕೆ ನೆಟ್ಟಿಗರು ಶಹಬ್ಬಾಷ್ ಹೇಳಿದ್ದಾರೆ.

ಈ ಚಿತ್ರವನ್ನು ರಾಯಿಟರ್ಸ್ ಸುದ್ದಿ ಸಂಸ್ಥೆ ಪ್ರಕಟಿಸಿದ್ದು, ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಗಳವಾರ ಪಾಕಿಸ್ತಾನದ ರಾಯಭಾರಿ ಕಚೇರಿ ಎದುರು ಅಫ್ಘಾನ್ ಮಹಿಳೆಯರ ಗುಂಪೊಂದು ಪ್ರತಿಭಟನೆ ನಡೆಸುತ್ತಿತ್ತು. ಈ ವೇಳೆ ತಾಲಿಬಾನ್ ಉಗ್ರನೋರ್ವ ಬಂದೂಕನ್ನು ಗುರಿಯಿಟ್ಟು ಬೆದರಿಕೆ ಹಾಕಿದ್ದಾನೆ. ಆದರೆ ಆತನ ಬೆದರಿಕೆಗೆ ಬಗ್ಗದೇ ಮಹಿಳೆ ಬಂದೂಕಿಗೆ ಎದೆಯೊಡ್ಡುವ ಮೂಲಕ ನೆಲದ ಸ್ವಾಭಿಮಾನವನ್ನು ಮೆರೆದಿದ್ದಾರೆ.

ಈ ಚಿತ್ರದ ಬಗ್ಗೆ ಇನ್ನಷ್ಟು ವಿವರಗಳು ತಿಳಿದು ಬಂದಿಲ್ಲ. ಆದರೆ, ಈ ಚಿತ್ರವನ್ನು ಲಕ್ಷಾಂತರ ಮಂದಿ ಹಂಚಿಕೊಂಡಿದ್ದು, ದೇಶ ಬಿಟ್ಟು ಓಡಿ ಹೋದ ಅಫ್ಘಾನಿಸ್ತಾನದ ನಾಯಕರು, ಈ ಮಹಿಳೆಯ ಧೈರ್ಯದ ಮುಂದೆ ನಾಚಿಕೆ ಪಡಬೇಕು ಎಂದು ಹೇಳಿದ್ದಾರೆ.

ಇನ್ನಷ್ಟು ಸುದ್ದಿಗಳು…

ಲಿಫ್ಟ್ ನೀಡುವ ನೆಪದಲ್ಲಿ ಆಹಾರದಲ್ಲಿ ಅಮಲು ಪದಾರ್ಥ ಬೆರೆಸಿ, ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ!

ಶಶಿಕಲಾಗೆ ಮತ್ತೆ ಶಾಕ್: 100 ಕೋಟಿ ರೂಪಾಯಿ ಬೆಲೆ ಬಾಳುವ 11 ಆಸ್ತಿಗಳು ಜಪ್ತಿ

ಅನುಶ್ರೀ ವಿರುದ್ಧ ಮತ್ತೆ ವಿಚಾರಣೆ ನಡೆಯುವ ಸಾಧ್ಯತೆ ಕಡಿಮೆ | ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್

ಹೆದ್ದಾರಿಯ ಉದ್ದಕ್ಕೂ ಕಿಲೋ ಮೀಟರ್ ಗಟ್ಟಲೆ ಕಾಂಡಮ್ ಪತ್ತೆ | ಅಷ್ಟಕ್ಕೂ ನಡೆದದ್ದೇನು?

ಜಾತ್ಯತೀತ ಹೆಸರಿನಲ್ಲಿ ಮುಸ್ಲಿಮರನ್ನು ವಂಚಿಸಲಾಗುತ್ತಿದೆ | ಅಸಾದುದ್ದೀನ್ ಓವೈಸಿ ಆಕ್ರೋಶ

ಅನುಶ್ರೀ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ನಾನು ಹೇಳಿಲ್ಲ | ಉಲ್ಟಾ ಹೊಡೆದ ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿ!

ಐದು ರಾಜ್ಯಗಳ ಚುನಾವಣಾ ಉಸ್ತುವಾರಿಗಳ ಹೆಸರು ಪ್ರಕಟಿಸಿದ ಬಿಜೆಪಿ: ಶೋಭಾ ಕರಂದ್ಲಾಜೆಗೂ ಸ್ಥಾನ

ಅನುಶ್ರೀ ಮುಖವಾಡ ಕಳಚಿದೆ, ಜೈಲಿಗೆ ಹೋಗೋದು ಪಕ್ಕಾ | ಪ್ರಶಾಂತ್ ಸಂಬರ್ಗಿ

ಇತ್ತೀಚಿನ ಸುದ್ದಿ