ಜೆಸಿಬಿ ಅಡಿಗೆ ಸಿಲುಕಿ ಪೌರ ಕಾರ್ಮಿಕ ಸಹಿತ ಇಬ್ಬರು ಸಾವು! - Mahanayaka
1:08 AM Wednesday 11 - December 2024

ಜೆಸಿಬಿ ಅಡಿಗೆ ಸಿಲುಕಿ ಪೌರ ಕಾರ್ಮಿಕ ಸಹಿತ ಇಬ್ಬರು ಸಾವು!

vijayapur
08/09/2021

ವಿಜಯಪುರ: ಜೆಸಿಬಿ ದುರಸ್ತಿ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಜೆಸಿಬಿಯಲ್ಲಿ ಸಿಲುಕಿಕೊಂಡು ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದ ಇಂಡಿ ರಸ್ತೆ ಬಳಿ ಇರುವ ಮಹಾನಗರ ಪಾಲಿಕೆಯ ಘನತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಘಟಕದಲ್ಲಿ ನಡೆದಿದೆ.

35 ವರ್ಷ ವಯಸ್ಸಿನ ರಫೀಕ್ ಹಾಗೂ 50 ವರ್ಷ ವಯಸ್ಸಿನ ಅಯೂಬ್ ಮೃತಪಟ್ಟವರಾಗಿದ್ದಾರೆ. ಮೃತಪಟ್ಟವರ ಪೈಕಿ ಓರ್ವರು ಪೌರ ಕಾರ್ಮಿಕರು ಹಾಗೂ ಮತ್ತೋರ್ವ ವ್ಯಕ್ತಿ ಜೆಸಿಬಿ ಚಾಲಕ ಎಂದು ತಿಳಿದು ಬಂದಿದೆ.  ಜೆಸಿಬಿಯ ಹೈಡ್ರಾಲಿಕ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ  ಇವರಿಬ್ಬರು ದುರಸ್ತಿ ಮಾಡುತ್ತಿದ್ದು, ಈ ವೇಳೆ ಏಕಾಏಕಿ ಜೆಸಿಬಿಯ ಮುಂಭಾಗ ಜಗ್ಗಿದ್ದು, ಹೀಗಾಗಿ ಜೆಸಿಬಿ ಎಡೆಯಲ್ಲಿ ಇಬ್ಬರು ಕೂಡ ಸಿಲುಕಿದ್ದಾರೆ.

ಇನ್ನೂ ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಎಪಿಎಂಸಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ತಾಲಿಬಾನ್ ಉಗ್ರನ ಬಂದೂಕಿಗೆ ಎದೆಯೊಡ್ಡಿದ ಅಫ್ಘಾನಿಸ್ತಾನದ ಮಹಿಳೆಯ ಧೈರ್ಯಕ್ಕೆ ಭೇಷ್ ಎಂದ ನೆಟ್ಟಿಗರು!

ಲಿಫ್ಟ್ ನೀಡುವ ನೆಪದಲ್ಲಿ ಆಹಾರದಲ್ಲಿ ಅಮಲು ಪದಾರ್ಥ ಬೆರೆಸಿ, ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ!

ಶಶಿಕಲಾಗೆ ಮತ್ತೆ ಶಾಕ್: 100 ಕೋಟಿ ರೂಪಾಯಿ ಬೆಲೆ ಬಾಳುವ 11 ಆಸ್ತಿಗಳು ಜಪ್ತಿ

ಅನುಶ್ರೀ ವಿರುದ್ಧ ಮತ್ತೆ ವಿಚಾರಣೆ ನಡೆಯುವ ಸಾಧ್ಯತೆ ಕಡಿಮೆ | ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್

ಜಾತ್ಯತೀತ ಹೆಸರಿನಲ್ಲಿ ಮುಸ್ಲಿಮರನ್ನು ವಂಚಿಸಲಾಗುತ್ತಿದೆ | ಅಸಾದುದ್ದೀನ್ ಓವೈಸಿ ಆಕ್ರೋಶ

ಹೆದ್ದಾರಿಯ ಉದ್ದಕ್ಕೂ ಕಿಲೋ ಮೀಟರ್ ಗಟ್ಟಲೆ ಕಾಂಡಮ್ ಪತ್ತೆ | ಅಷ್ಟಕ್ಕೂ ನಡೆದದ್ದೇನು?

ಅನುಶ್ರೀ ಮುಖವಾಡ ಕಳಚಿದೆ, ಜೈಲಿಗೆ ಹೋಗೋದು ಪಕ್ಕಾ | ಪ್ರಶಾಂತ್ ಸಂಬರ್ಗಿ

ಇತ್ತೀಚಿನ ಸುದ್ದಿ