ಪೆಟ್ರೋಲ್ ತುಂಬುತ್ತಿದ್ದ ವೇಳೆ ಕಾರಿಗೆ ಬೆಂಕಿ: ಬಾಲಕಿ ಸಹಿತ 9 ಮಹಿಳೆಯರು ಸುಟ್ಟು ಕರಕಲು - Mahanayaka
1:08 AM Wednesday 11 - December 2024

ಪೆಟ್ರೋಲ್ ತುಂಬುತ್ತಿದ್ದ ವೇಳೆ ಕಾರಿಗೆ ಬೆಂಕಿ: ಬಾಲಕಿ ಸಹಿತ 9 ಮಹಿಳೆಯರು ಸುಟ್ಟು ಕರಕಲು

amethi
10/09/2021

ಅಮೇಥಿ: ಪೆಟ್ರೋಲ್ ತುಂಬುತ್ತಿದ್ದ ವೇಳೆ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಪರಿಣಾಮವಾಗಿ ನಾಲ್ಕು ವರ್ಷ ವಯಸ್ಸಿನ ಬಾಲಕಿ ಸೇರಿದಂತೆ 9 ಮಂದಿ ಮಹಿಳೆಯರು ಸುಟ್ಟು ಕರಕಲಾದ ಘಟನೆ ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಪಿಪಾರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಯಾಗ್ ರಾಜ್, ಅಯೋಧ್ಯೆ ಹೆದ್ದಾರಿ ಬಳಿಯ ದುರ್ಗಾಪುರ್ ಬಳಿ ನಡೆದಿದೆ.

ಸುಲ್ತಾನಪುರ ದರ್ಗಾಕ್ಕೆ ಹೋಗಿ ವಾಪಸ್ಸಾಗುತ್ತಿದ್ದ ವೇಳೆ ದುರ್ಗಾಪುರ ಬಳಿಯಲ್ಲಿ ಕಾರಿಗೆ ಪೆಟ್ರೋಲ್ ತುಂಬುತ್ತಿದ್ದ ವೇಳೆ ಏಕಾಏಕಿ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ಒಟ್ಟು 9 ಮಂದಿಗೆ ಬೆಂಕಿಯ ಕೆನ್ನಾಲಿಗೆ ಸೋಕಿದೆ. ಪರಿಣಾಮವಾಗಿ 4 ವರ್ಷ ವಯಸ್ಸಿನ ಬಾಲಕಿ ಸೇರಿದಂತೆ 9 ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಮಾರುತಿ ಕಾರಿಗೆ ಅಕ್ರಮವಾಗಿ ಸಿಎನ್ ಜಿ  ಕಿಟ್ ಅಳವಡಿಸಲಾಗಿದ್ದು, ಇದರಿಂದಾಗಿ ಹಠಾತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಸದ್ಯ ಗಾಯಾಳುಗಳನ್ನು ಸುಲ್ತಾನ್ ಪುರ ಆಸ್ಪತ್ರೆಯಿಂದ ಲಕ್ನೋದ ಟ್ರಾಮಾ ಸೆಂಟರ್ ಗೆ ಹೆಚ್ಚಿನ ಚಿಕಿತ್ಸೆಗಾಗಿ  ಸಾಗಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರು, ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ: ವ್ಯಾಪಕ ಆಕ್ರೋಶ

ಪೊಲೀಸರ ಎದುರೇ ಬೆತ್ತಲಾಗಿ ಗಾಲ್ಫ್ ಕಾರ್ಟ್ ಓಡಿಸಿ ಶಾಕ್ ನೀಡಿದ ಯುವತಿ!

ಗಣೇಶೋತ್ಸವದ ಶುಭಾಶಯ ಕೋರಿದ ಗಣ್ಯರು: ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಲು ಕರೆ

ಸಾಬಿಯಾ ಸೈಫಿ ಅತ್ಯಾಚಾರ, ಬರ್ಬರ ಹತ್ಯೆ ವಿರುದ್ಧ ಎಸ್ ಡಿಪಿಐ ಬೃಹತ್ ಹಕ್ಕೊತ್ತಾಯ

ಸಹೋದರಿಗೆ ಬಾಗಿನ ನೀಡಿ ಪುತ್ರಿಯೊಂದಿಗೆ ಬೈಕ್ ನಲ್ಲಿ ಬರುತ್ತಿದ್ದ ಸಹೋದರ, ಪುತ್ರಿ ಇಬ್ಬರೂ ಅಪಘಾತಕ್ಕೆ ಬಲಿ

ಬಸ್ ನಿಂದ ಇಳಿದು ರಸ್ತೆ ದಾಟುವಷ್ಟರಲ್ಲೇ ತಾಯಿ, ಮಗಳಿಗೆ ಡಿಕ್ಕಿ ಹೊಡೆದಿತ್ತು ಕಾರು! | ಕೆಲವೇ ಕ್ಷಣಗಳಲ್ಲಿ ಹಾರಿ ಹೋಗಿತ್ತು ಪ್ರಾಣ!

ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಗೆ ಲಾರಿ ಡಿಕ್ಕಿ: ನಾಲ್ವರು ಮಹಿಳೆಯರು ಸಾವು, 15 ಮಂದಿಗೆ ಗಾಯ

ವಾನರ ಸೇನೆಯ ದಾಳಿ: ಎರಡನೇ ಮಹಡಿಯಿಂದ ಬಿದ್ದು ಬಿಜೆಪಿ ನಾಯಕನ ಪತ್ನಿ ಸಾವು

 

ಇತ್ತೀಚಿನ ಸುದ್ದಿ