ಬೈಕ್ ಸ್ಕಿಡ್ ಆಗಿ ಖ್ಯಾತ ನಟನಿಗೆ ಗಂಭೀರ ಗಾಯ: ಅಪೋಲೊ ಆಸ್ಪತ್ರೆಗೆ ದೌಡಾಯಿಸಿದ ಹಿರಿಯ ನಟರು - Mahanayaka

ಬೈಕ್ ಸ್ಕಿಡ್ ಆಗಿ ಖ್ಯಾತ ನಟನಿಗೆ ಗಂಭೀರ ಗಾಯ: ಅಪೋಲೊ ಆಸ್ಪತ್ರೆಗೆ ದೌಡಾಯಿಸಿದ ಹಿರಿಯ ನಟರು

sai dharma tej
11/09/2021

ಹೈದರಾಬಾದ್: ರಸ್ತೆ ಅಪಘಾತದಲ್ಲಿ ಖ್ಯಾತ ತೆಲುಗು ನಟ ಗಂಭೀರವಾಗಿ ಗಾಯಗೊಂಡಿದ್ದು, ಶುಕ್ರವಾರ ರಾತ್ರಿ ವೇಳೆ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೈದರಾಬಾದ್ ನ ಕೇಬಲ್ ಸೇತುವೆ ಮೇಲೆ ಅಪಘಾತ ಸಂಭವಿಸಿದೆ.

ತೆಲುಗು ನಟ ಸಾಯಿ ಧರ್ಮ ತೇಜ್ ಗಂಭೀರವಾಗಿ ಗಾಯಗೊಂಡಿರುವ ನಟರಾಗಿದ್ದು, ಬೈಕ್ ವೇಗವಾಗಿ ಚಲಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸ್ಕಿಡ್ ಆಗಿದ್ದು, ಇದರಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದ ಸಂದರ್ಭದಲ್ಲಿ ಧರ್ಮತೇಜ್ ಅವರು ಹೆಲ್ಮೆಟ್ ಧರಿಸಿದ್ದರು ಎಂದು ತಿಳಿದು ಬಂದಿದೆ.

ಘಟನೆಯ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಸದ್ಯ ನಟನಿಗೆ ಜ್ಯುಬಿಲಿ ಹಿಲ್ಸ್ ನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತುರ್ತು ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಧರ್ಮರಾಜ್ ಅವರು, ಚಿರಂಜೀವಿ ಕುಟುಂಬದ ಸದಸ್ಯರಾಗಿದ್ದಾರೆ. ಘಟಯ ಮಾಹಿತಿ ತಿಳಿದ ತಕ್ಷಣವೇ ಚಿರಂಜೀವಿ, ಪವನ್ ಕಲ್ಯಾಣ್, ವರುಣ್ ತೇಜ್ ಸೇರಿದಂತೆ ಹಲವರು ಅಪೋಲೊ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಯುವತಿಯನ್ನು ಅತ್ಯಾಚಾರ ಎಸಗಿ ಪರಾರಿಯಾದ ಗ್ರಾಮ ಲೆಕ್ಕಾಧಿಕಾರಿ!

ಮತಾಂತರದ ಸುಳ್ಳು ಆರೋಪ ಹೊರಿಸಿ, ಗುಂಪಿನಿಂದ ದಾಂಧಲೆ: ಕ್ರಮಕ್ಕೆ ಆಗ್ರಹ

ಹುಡುಗಿಯರಿಗೆ ಉಚಿತ ಬ್ಯೂಟಿ ಪಾರ್ಲರ್, ಹಿರಿಯರಿಗೆ ತಂಬಾಕು, ಬೀಡಿ ಫ್ರೀ: ಗ್ರಾಪಂ ಅಭ್ಯರ್ಥಿಯ ಪ್ರಣಾಳಿಕೆ!

ಬಲೆಗೆ ಬಿದ್ದ ವಿಚಿತ್ರ ಬೃಹತ್ ಮೀನನ್ನು ಕಂಡು ಬೆಚ್ಚಿ ಬಿದ್ದ ಮೀನುಗಾರರು !

ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಖಾಸಗಿ ಅಂಗಕ್ಕೆ ರಾಡ್ ನುಗ್ಗಿಸಿದ ದುಷ್ಟರು: ಮಹಿಳೆಯ ಸ್ಥಿತಿ ಚಿಂತಾಜನಕ

ಬಾಗಿಲು ಮುಚ್ಚಿದ ಕಾರು ತಯಾರಿಕಾ ‘ಫೋರ್ಡ್’ ಸಂಸ್ಥೆ | ಎಷ್ಟು ಉದ್ಯೋಗಿಗಳು ನಿರುದ್ಯೋಗಿಗಳಾಗಲಿದ್ದಾರೆ ಗೊತ್ತಾ?

ಆ್ಯಂಕರ್ ಅನುಶ್ರೀ ವಿರುದ್ಧ ದಾಖಲೆ ರಹಿತ ಆರೋಪ | ಪ್ರಶಾಂತ್ ಸಂಬರ್ಗಿಯ ಬೆವರಳಿಸಿದ ಚಕ್ರವರ್ತಿ ಚಂದ್ರಚೂಡ್

ಗಣೇಶೋತ್ಸವದ ಶುಭಾಶಯ ಕೋರಿದ ಗಣ್ಯರು: ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಲು ಕರೆ

ಇತ್ತೀಚಿನ ಸುದ್ದಿ