ಯಡಿಯೂರಪ್ಪ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಗುಜರಾತ್ ಸಿಎಂ ವಿಜಯ್ ರೂಪಾನಿ!
ಅಹ್ಮದಾಬಾದ್: ಕರ್ನಾಟಕ ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಇದೀಗ ಗುಜರಾತ್ ನಲ್ಲಿಯೂ ಮಹತ್ವದ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾದ ವಿಜಯ್ ರೂಪಾನಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಸುವ ಸಂದರ್ಭದಲ್ಲಿ ಆರೆಸ್ಸೆಸ್ ನಾಯಕ ಬಿ.ಎಲ್.ಸಂತೋಷ್ ಕೂಡ ಜೊತೆಗಿದ್ದರು.
ರಾಜೀನಾಮೆಯ ಬಳಿಕ ಮಾತನಾಡಿದ ರೂಪಾನಿ, ಬಿಜೆಪಿ ಒಂದು ಪಕ್ಷವಾಗಿ ಅಗತ್ಯಕಕೆ ತಕ್ಕಂತೆ ಬದಲಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ತನಗೆ ನೀಡಿರುವ ಕೆಲಸವನ್ನು ಪೂರ್ಣ ಮಾಡುವುದು ನಮ್ಮ ಪಕ್ಷದ ವಿಶೇಷತೆಯಾಗಿದೆ. ಪಕ್ಷಕ್ಕಾಗಿ ನಾನು ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ವಯಸ್ಸಿನ ಆಧಾರದಲ್ಲಿ ರಾಜೀನಾಮೆ ಕೊಡಲಾಗಿತ್ತು ಎಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ, ರೂಪಾನಿ ಅವರನ್ನು ಯಾವ ಆಧಾರದಲ್ಲಿ ರಾಜೀನಾಮೆ ಕೊಡಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಹಿರಿಯ ನಾಯಕರನ್ನು ಗುರಿಯಾಗಿಸಿಕೊಂಡು ಬಿಜೆಪಿ ಕಾರ್ಯಾಚರಿಸುತ್ತಿದ್ದು, ಹಿರಿಯರನ್ನು ಗಂಟೂ ಮೂಟೆ ಕಟ್ಟಿ ಮನೆಗೆ ಕಳುಹಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮುಖ್ಯಮಂತ್ರಿ ರಾಜೀನಾಮೆಯಿಂದಾಗಿ ಸದ್ಯ ಗುಜರಾತ್ ಸಚಿವರ ಸ್ಥಿತಿ ಹೇಳತೀರದಂತಾಗಿದೆ.
ಇನ್ನಷ್ಟು ಸುದ್ದಿಗಳು…
ಇನ್ನು ನಾಲ್ಕು ವರ್ಷಗಳಲ್ಲಿ ಮನೆ ಮನೆಗಳಲ್ಲಿ ಆರೆಸ್ಸೆಸ್: ಮೋಹನ್ ಭಾಗವತ್
33 ತಾಸುಗಳ ಜೀವನ್ಮರಣ ಹೋರಾಟದ ಬಳಿಕ ಸಾವಿಗೀಡಾದ ಅತ್ಯಾಚಾರ ಸಂತ್ರಸ್ತೆ!
ಇಡೀ ತೋಟವನ್ನೇ ನಾಶ ಮಾಡಿದ ಆನೆ, ಪುಟ್ಟ ಹಕ್ಕಿ ಗೂಡು ಇದ್ದ ಬಾಳೆಗಿಡವನ್ನು ಬಿಟ್ಟು ಹೋಯಿತು!
ಬಿಜೆಪಿ ಆಡಳಿತದಲ್ಲಿಯೇ ದೇವಸ್ಥಾನ ನೆಲಸಮ: ಬೇರೆ ಸರ್ಕಾರ ಇದ್ದಿದ್ದರೆ ನಡೆಯುತ್ತಿದ್ದದ್ದೇ ಬೇರೆ!
ಬೈಕ್ ಸ್ಕಿಡ್ ಆಗಿ ಖ್ಯಾತ ನಟನಿಗೆ ಗಂಭೀರ ಗಾಯ: ಅಪೋಲೊ ಆಸ್ಪತ್ರೆಗೆ ದೌಡಾಯಿಸಿದ ಹಿರಿಯ ನಟರು
ಹುಡುಗಿಯರಿಗೆ ಉಚಿತ ಬ್ಯೂಟಿ ಪಾರ್ಲರ್, ಹಿರಿಯರಿಗೆ ತಂಬಾಕು, ಬೀಡಿ ಫ್ರೀ: ಗ್ರಾಪಂ ಅಭ್ಯರ್ಥಿಯ ಪ್ರಣಾಳಿಕೆ!
ಮತಾಂತರದ ಸುಳ್ಳು ಆರೋಪ ಹೊರಿಸಿ, ಗುಂಪಿನಿಂದ ದಾಂಧಲೆ: ಕ್ರಮಕ್ಕೆ ಆಗ್ರಹ