ಆನ್ ಲೈನ್ ಗೆಳೆಯನ ಭೇಟಿಗೆ ತೆರಳಿದ ಯುವತಿಗೆ ಡ್ರಗ್ಸ್ ನೀಡಿ, ಐದು ಮಂದಿಯಿಂದ ಸಾಮೂಹಿಕ ಅತ್ಯಾಚಾರ!
ಚೆನ್ನೈ: ಆನ್ ಲೈನ್ ಆ್ಯಪ್ ನಲ್ಲಿ ಪರಿಚಯವಾದ ಗೆಳೆಯ ಹಾಗೂ ಆತನ ಸ್ನೇಹಿತರು ಯುವತಿಯೋರ್ವಳಿಗೆ ಡ್ರಗ್ಸ್ ನೀಡಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಚೆನ್ನೈನ ಮೆಲ್ಕತಿರ್ ಪುರ ಗ್ರಾಮದ ಬಳಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಆರೋಪಿಗಳಲ್ಲಿ ಓರ್ವನ ಪರಿಚಯ ಇದ್ದು ಆತ ಆನ್ ಲೈನ್ ಆ್ಯಪ್ ವೊಂದರಲ್ಲಿ ಪರಿಚಯವಾಗಿದ್ದ ಎನ್ನಲಾಗಿದೆ. ಮೊಬೈಲ್ ಅಂಗಡಿಗೆ ಕಾರಿನಲ್ಲಿ ಆಗಮಿಸಿದ ತಂಡ ಯುವತಿಯನ್ನು ಕಾರಿನಲ್ಲಿ ಕರೆದೊಯ್ದಿದ್ದು, ಕಾಂಚೀಪುರಂನಲ್ಲಿರುವ ಆತನ ಫಾರ್ಮ್ ಹೌಸ್ ಗೆ ಕರೆದುಕೊಂಡು ಹೊರಟಿದ್ದ ಎನ್ನಲಾಗಿದೆ.
ಈ ಮಧ್ಯೆ ಕಾರಿನಲ್ಲಿ ಯುವತಿಗೆ ಡ್ರಗ್ಸ್ ಸವರಿದ ಲೇಸ್ ಹಾಗೂ ಸಾಫ್ಟ್ ಡ್ರಿಂಕ್ಸ್ ನೀಡಲಾಗಿದೆ. ಯುವತಿ ನಿದ್ರೆಗೆ ಜಾರುತ್ತಿದ್ದಂತೆಯೇ ಕಾರಿನಲ್ಲಿಯೇ ಆಕೆಯ ಮೇಲೆ ಪ್ರಮುಖ ಆರೋಪಿ ಗುಣಶೀಲನ್ ಸೇರಿದಂತೆ ಇತರರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರ ನಡೆಯುತ್ತಿದ್ದ ವೇಳೆ ಯುವತಿಗೆ ಎಚ್ಚರವಾಗಿದ್ದು, ಆಕೆ ತಪ್ಪಿಸಿಕೊಳ್ಳಲು ಕಾರಿನ ಗಾಜು ಒಡೆಯಲು ಯತ್ನಿಸಿದ್ದಳು ಆದರೆ ಸಾಧ್ಯವಾಗಿರಲಿಲ್ಲ.
ಇನ್ನೂ ಕಾರಿನೊಳಗೆ ಗಲಾಟೆ ಕೇಳುತ್ತಿದ್ದಂತೆ ಸ್ಥಳೀಯರು ಕಾರಿನತ್ತ ಬರುತ್ತಿರುವುದನ್ನು ಕಂಡು ಯುವತಿಯನ್ನು ಅಲ್ಲಿಂದ ಚೆನ್ನೈ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಟ್ಟು ತಂಡ ಪರಾರಿಯಾಗಿದೆ. ಅಲ್ಲಿಂದ ಹೇಗೋ ಸುಧಾರಿಸಿಕೊಂಡ ಯುವತಿ, ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ.
ತಂಡದಲ್ಲಿ ಐದು ಮಂದಿ ಇದ್ದರು ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಗುಣಶೀಲನ್, ಜೆಬನೇಸನ್, ಗುಣಶೇಖರನ್, ಅಜಿತ್ ಎಂಬ ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ತಂಡದಲ್ಲಿದ್ದ ಓರ್ವ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇನ್ನಷ್ಟು ಸುದ್ದಿಗಳು…
ದೇವಸ್ಥಾನ ತೆರವು: ಹಿಂದೂ ಭಾವನೆಗಳ ವಿರುದ್ಧದ ಕೃತ್ಯ ಎಂದ ಸಿದ್ದರಾಮಯ್ಯ
ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ | ನಟ ಚೇತನ್
ಯಡಿಯೂರಪ್ಪ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಗುಜರಾತ್ ಸಿಎಂ ವಿಜಯ್ ರೂಪಾನಿ!
ಇನ್ನು ನಾಲ್ಕು ವರ್ಷಗಳಲ್ಲಿ ಮನೆ ಮನೆಗಳಲ್ಲಿ ಆರೆಸ್ಸೆಸ್: ಮೋಹನ್ ಭಾಗವತ್
33 ತಾಸುಗಳ ಜೀವನ್ಮರಣ ಹೋರಾಟದ ಬಳಿಕ ಸಾವಿಗೀಡಾದ ಅತ್ಯಾಚಾರ ಸಂತ್ರಸ್ತೆ!
ಇಡೀ ತೋಟವನ್ನೇ ನಾಶ ಮಾಡಿದ ಆನೆ, ಪುಟ್ಟ ಹಕ್ಕಿ ಗೂಡು ಇದ್ದ ಬಾಳೆಗಿಡವನ್ನು ಬಿಟ್ಟು ಹೋಯಿತು!
ಬಿಜೆಪಿ ಆಡಳಿತದಲ್ಲಿಯೇ ದೇವಸ್ಥಾನ ನೆಲಸಮ: ಬೇರೆ ಸರ್ಕಾರ ಇದ್ದಿದ್ದರೆ ನಡೆಯುತ್ತಿದ್ದದ್ದೇ ಬೇರೆ!
ಬಾಗಿಲು ಮುಚ್ಚಿದ ಕಾರು ತಯಾರಿಕಾ ‘ಫೋರ್ಡ್’ ಸಂಸ್ಥೆ | ಎಷ್ಟು ಉದ್ಯೋಗಿಗಳು ನಿರುದ್ಯೋಗಿಗಳಾಗಲಿದ್ದಾರೆ ಗೊತ್ತಾ?