ನೀರಲ್ಲಿ ಮುಳುಗಿದ ಮಕ್ಕಳು “ಅಪ್ಪಾ… ಕಾಪಾಡು” ಎಂದು ಕರೆದರೂ ಕಾಪಾಡಲಾಗಲಿಲ್ಲ | ನೊಂದ ತಂದೆಯಿಂದ ಆತ್ಮಹತ್ಯೆ
ಚೆನ್ನೈ: ಮಕ್ಕಳಿಬ್ಬರು ಕಣ್ಣೆದುರೇ ನೀರಲ್ಲಿ ಮುಳುಗಿದರು, ಅಪ್ಪಾ, ಕಾಪಾಡು ಎಂದು ಕೂಗಿದರೂ ತಂದೆಗೆ ಅವರನ್ನು ಕಾಪಾಡಲು ಸಾಧ್ಯವೇ ಆಗಲಿಲ್ಲ. ಮಕ್ಕಳನ್ನು ರಕ್ಷಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಅವರಿಂದ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಈ ಘಟನೆಯನ್ನು ಮರೆಯಲಾಗದೇ, ಮಕ್ಕಳ ಸಾವನ್ನು ಅರಗಿಸಿಕೊಳ್ಳಲಾಗದೆ ತಂದೆ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈ ಬಳಿಯ ಕಲ್ಲೂರು ಗ್ರಾಮದ ಲೋಕೇಶ್ವರನ್ ಅವರು ಚೆನ್ನೈನ ಐಸ್ ಕ್ರೀಂ ಕಂಪೆನಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಇವರ ಪತ್ನಿ ಮೀನಾಕ್ಷಿ ಹಾಗೂ 8 ವರ್ಷ ವಯಸ್ಸಿನ ಪುತ್ರ ಜಸ್ವಂತ್ ಹಾಗೂ 6 ವರ್ಷ ವಯಸ್ಸಿನ ಹರಿಪ್ರೀತಾ ಈ ಪುಟ್ಟ ಸಂಸಾರ ಬಹಳ ಸಂತೋಷ ಸಡಗರದಿಂದ ಬದುಕುತ್ತಿದ್ದರು.
ಈ ಬಾರಿಯ ಗಣೇಶ ಚತುರ್ಥಿಗೂ ಮೊದಲೇ ಮೀನಾಕ್ಷಿ ಅವರು ತಮ್ಮ ಪತಿ ಹಾಗೂ ಮಕ್ಕಳೊಂದಿಗೆ ತನ್ನ ತಾಯಿ ಮನೆಗೆ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ನಿನ್ನೆ ಬೆಳಿಗ್ಗೆ ಲೋಕೇಶ್ವರನ್ ಅವರು ತನ್ನ ಮಕ್ಕಳಾದ ಜಸ್ವಂತ್ ಹಾಗೂ ಹರಿಪ್ರೀತಾ ಜೊತೆಗೆ ಇಲ್ಲಿನ ಕೈಲಾಶ್ ಗಿರಿ ಬೆಟ್ಟಕ್ಕೆ ತೆರಳಿದ್ದಾರೆ.
ಮಕ್ಕಳೊಂದಿಗೆ ಖುಷಿಯಿಂದಲೇ ಆಟವಾಡಿ, ಸೆಲ್ಫಿ ತೆಗೆದುಕೊಂಡಿದ್ದಾರೆ. ಬಳಿಕ ಇಲ್ಲಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕೆರೆಗೆ ಮೀನು ಹಿಡಿಯಲು ಇಳಿದಿದ್ದಾರೆ. ಇವರಿಗೆ ನೀರಿನ ಆಳ ತಿಳಿದಿರಲಿಲ್ಲ. ಹೀಗಾಗಿ ಇಬ್ಬರು ಮಕ್ಕಳು ಕೆರೆಯಲ್ಲಿ ಮುಳುಗಿದ್ದಾರೆ. ಅವರನ್ನು ರಕ್ಷಿಸಲು ಲೋಕೇಶ್ವರನ್ ತಮ್ಮ ಶಕ್ತಿ ಮೀರಿ ಪ್ರಯತ್ನಿಸಿಯೂ ವಿಫಲರಾಗಿದ್ದರು. ಹೀಗಾಗಿ ಇಬ್ಬರು ಮಕ್ಕಳು ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಮಕ್ಕಳ ಮೃತದೇಹವನ್ನು ಹೊರ ತೆಗೆಯಲಾಗಿದೆ. ಬಳಿಕ ಮೃತದೇಹಗಳನ್ನು ಅಂಬೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿದ್ದ ಲೋಕೇಶ್ವರನ್ ಅವರು ಕಣ್ಣ ಮುಂದೆಯೇ ನಡೆದ ಮಕ್ಕಳ ಸಾವನ್ನು ನೆನೆದು ತೀವ್ರವಾಗಿ ಖಿನ್ನತೆಗೊಳಗಾಗಿದ್ದರು. ಇದೇ ದುಃಖದಲ್ಲಿ ಇದ್ದಕ್ಕಿದ್ದಂತೆಯೇ ಕೀಟನಾಶಕ ಸೇವಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಮುದ್ದಾದ ಇಬ್ಬರು ಮಕ್ಕಳು ಹಾಗೂ ತಮ್ಮ ಪತಿಯನ್ನು ಕಳೆದುಕೊಂಡು ಇದೀಗ ಪತ್ನಿ ಮೀನಾಕ್ಷಿ ತೀವ್ರವಾಗಿ ದುಃಖಿತರಾಗಿದ್ದು, ಅವರ ನೋವನ್ನು ಹೇಳಲು ಪದಗಳೇ ಸಾಲದು ಎಂಬಂತಾಗಿದೆ. ಇನ್ನೂ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.
ಇನ್ನಷ್ಟು ಸುದ್ದಿಗಳು…
ಹೇಯ ಕೃತ್ಯ: 6 ವರ್ಷದ ಮಗುವಿನ ಮೇಲೆ ಚಿಕ್ಕಪ್ಪನಿಂದಲೇ ಲೈಂಗಿಕ ದೌರ್ಜನ್ಯ
ಹೃದಯ ವಿದ್ರಾವಕ ಘಟನೆ: ವಾಕಿಂಗ್ ಗೆ ಹೋಗಿದ್ದ ತಾಯಿ ಮಗ ಇಬ್ಬರೂ ಹೊಳೆಗೆ ಬಿದ್ದು ದಾರುಣ ಸಾವು
ಆನ್ ಲೈನ್ ಗೆಳೆಯನ ಭೇಟಿಗೆ ತೆರಳಿದ ಯುವತಿಗೆ ಡ್ರಗ್ಸ್ ನೀಡಿ, ಐದು ಮಂದಿಯಿಂದ ಸಾಮೂಹಿಕ ಅತ್ಯಾಚಾರ!
ದೇವಸ್ಥಾನ ತೆರವು: ಹಿಂದೂ ಭಾವನೆಗಳ ವಿರುದ್ಧದ ಕೃತ್ಯ ಎಂದ ಸಿದ್ದರಾಮಯ್ಯ
ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ | ನಟ ಚೇತನ್
ಬಿಜೆಪಿ ಆಡಳಿತದಲ್ಲಿಯೇ ದೇವಸ್ಥಾನ ನೆಲಸಮ: ಬೇರೆ ಸರ್ಕಾರ ಇದ್ದಿದ್ದರೆ ನಡೆಯುತ್ತಿದ್ದದ್ದೇ ಬೇರೆ!
ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿರುವ ಪ್ರಿಯಾಂಕ ಟಿಬ್ರೆವಾಲ್ ಹಿನ್ನೆಲೆ ಏನು ಗೊತ್ತೆ?
ಪೆಟ್ರೋಲ್ ತುಂಬುತ್ತಿದ್ದ ವೇಳೆ ಕಾರಿಗೆ ಬೆಂಕಿ: ಬಾಲಕಿ ಸಹಿತ 9 ಮಹಿಳೆಯರು ಸುಟ್ಟು ಕರಕಲು
ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಗೆ ಲಾರಿ ಡಿಕ್ಕಿ: ನಾಲ್ವರು ಮಹಿಳೆಯರು ಸಾವು, 15 ಮಂದಿಗೆ ಗಾಯ