ಕಾಂಗ್ರೆಸ್ ಮುಂದಿನ ಎರಡು ದಶಕಗಳ ಕಾಲ ಅಧಿಕಾರಕ್ಕೆ ಬರುವ ಕನಸು ಕಾಣುವ ಅಗತ್ಯವಿಲ್ಲ | ನಳಿನ್ ಕುಮಾರ್ ಕಟೀಲ್
ಬೆಳ್ತಂಗಡಿ: ಮುಂದಿನ ಎರಡು ದಶಕಗಳ ಕಾಲ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸ್ಸನ್ನು ಕಾಣುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.
ಧರ್ಮಸ್ಥಳದಲ್ಲಿ 161ನೇ ಬೂತ್ ಸಮಿತಿಯ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸಿದ ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವು ಸಮಾಜದ ಎಲ್ಲ ವರ್ಗದ ಜನರ ಸಮಗ್ರ ಅಭಿವೃದ್ಧಿಯ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಇಂತಹ ಆಡಳಿತ ಬಿಜೆಪಿಯಲ್ಲಿ ಮಾತ್ರವೇ ಕಾಣಬಹುದು ಎಂದರು.
ಇನ್ನೂ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ನಡೆಸಿಕೊಂಡು ಬಂದಿದ್ದ ಕೀಳುಮಟ್ಟದ ರಾಜಕೀಯದಿಂದಾಗಿ ಎಲ್ಲಿಯೂ ಅಭಿವೃದ್ಧಿಯೇ ಆಗಿರಲಿಲ್ಲ ಎಂದು ಆರೋಪಿಸಿದ ಅವರು, ಬೆಳ್ತಂಗಡಿ ತಾಲೂಕಿನಲ್ಲಿ ಈಗಿನ ಬಿಜೆಪಿ ಶಾಸಕರಾದ ಹರೀಶ್ ಪೂಂಜ ಅವರು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇನ್ನಷ್ಟು ಸುದ್ದಿಗಳು…
ನೀರಲ್ಲಿ ಮುಳುಗಿದ ಮಕ್ಕಳು “ಅಪ್ಪಾ… ಕಾಪಾಡು” ಎಂದು ಕರೆದರೂ ಕಾಪಾಡಲಾಗಲಿಲ್ಲ | ನೊಂದ ತಂದೆಯಿಂದ ಆತ್ಮಹತ್ಯೆ
ಮಂಗಳೂರು: ಸಮುದ್ರದ ದಡದಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆ
ಹೇಯ ಕೃತ್ಯ: 6 ವರ್ಷದ ಮಗುವಿನ ಮೇಲೆ ಚಿಕ್ಕಪ್ಪನಿಂದಲೇ ಲೈಂಗಿಕ ದೌರ್ಜನ್ಯ
ಹೃದಯ ವಿದ್ರಾವಕ ಘಟನೆ: ವಾಕಿಂಗ್ ಗೆ ಹೋಗಿದ್ದ ತಾಯಿ ಮಗ ಇಬ್ಬರೂ ಹೊಳೆಗೆ ಬಿದ್ದು ದಾರುಣ ಸಾವು
ಆನ್ ಲೈನ್ ಗೆಳೆಯನ ಭೇಟಿಗೆ ತೆರಳಿದ ಯುವತಿಗೆ ಡ್ರಗ್ಸ್ ನೀಡಿ, ಐದು ಮಂದಿಯಿಂದ ಸಾಮೂಹಿಕ ಅತ್ಯಾಚಾರ!
ದೇವಸ್ಥಾನ ತೆರವು: ಹಿಂದೂ ಭಾವನೆಗಳ ವಿರುದ್ಧದ ಕೃತ್ಯ ಎಂದ ಸಿದ್ದರಾಮಯ್ಯ
ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ | ನಟ ಚೇತನ್