ಉದನೆ ಗಣಪತಿ ಕಟ್ಟೆ ಧ್ವಂಸ: ಓರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಉದನೆ ಪರಶುರಾಮ್ ಮೈದಾನದ ಗಣಪತಿ ಕಟ್ಟೆಯನ್ನು ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, 50 ರೂ. ನೋಟಿನ ತುಣುಕು ಆರೋಪಿಯನ್ನು ಪತ್ತೆ ಹಚ್ಚಲು ಸಹಕಾರವಾಯಿತು ಎಂದು ವರದಿಯಾಗಿದೆ.
25 ವರ್ಷ ವಯಸ್ಸಿನ ಬಿಹಾರದ ಬಾಗಲ್ ಪುರ ಜಿಲ್ಲೆಯ ಸುದಾಮ್ ಗೋಪಾಲ್ ಪುರ್ ತಾಲೂಕಿನ ಗರ್ನಿಯ ನಿವಾಸಿ ರವೀಂದ್ರ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಉದನೆಯಲ್ಲಿ ಗಣಪತಿ ಕಟ್ಟೆ ಧ್ವಂಸ ಮಾಡಿರುವುದು ಜಿಲ್ಲೆಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಕೋಮು ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಈ ಸಣ್ಣ ಘಟನೆ ಜೋರಾಗಿ ಪ್ರಚಾರ ಕೂಡ ಆಗಿತ್ತು. ಆದರೆ, ಪೊಲೀಸರ ತನಿಖೆಯಿಂದಾಗಿ ಇದೀಗ ಕ್ಷಿಪ್ರವಾಗಿ ಆರೋಪಿಯ ಬಂಧನವಾಗಿದ್ದು, ಎಲ್ಲಾ ಅನುಮಾನಗಳಿಗೂ ತೆರೆ ಬಿದ್ದಿದೆ.
ಗಣಪತಿ ಕಟ್ಟೆ ಧ್ವಂಸವಾಗಿರುವ ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಮಹಜರು ನಡೆಸಿದಾಗ 50 ರೂಪಾಯಿಯ ಹರಿದ ತುಣುಕೊಂದು ಸ್ಥಳದಲ್ಲಿ ದೊರಕ್ಕಿದ್ದು, ಈ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದರು. ಇನ್ನೂ ಸ್ಥಳೀಯರಿಂದ ಈ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದು, ಈ ವೇಳೆ ಆಟೋ ಚಾಲಕರೊಬ್ಬರಿಗೆ ಆರೋಪಿ ರವೀಂದ್ರ ಕುಮಾರ್ ಕಲ್ಲೆಸೆದಿರುವ ವಿಚಾರ ತಿಳಿದು ಬಂದಿದೆ.
ಈ ಮಾಹಿತಿಯನ್ನು ಪಡೆದುಕೊಂಡು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ವೇಳೆ ಆತನ ಜೇಬಿನಲ್ಲಿ ಹರಿದ 50 ರೂ. ನೋಟಿನ ಇನ್ನೊಂದು ತುಣುಕು ಕೂಡ ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ವರದಿಯಾಗಿದೆ.
ಇನ್ನಷ್ಟು ಸುದ್ದಿಗಳು…
ನೀರಲ್ಲಿ ಮುಳುಗಿದ ಮಕ್ಕಳು “ಅಪ್ಪಾ… ಕಾಪಾಡು” ಎಂದು ಕರೆದರೂ ಕಾಪಾಡಲಾಗಲಿಲ್ಲ | ನೊಂದ ತಂದೆಯಿಂದ ಆತ್ಮಹತ್ಯೆ
ಕಾಂಗ್ರೆಸ್ ಮುಂದಿನ ಎರಡು ದಶಕಗಳ ಕಾಲ ಅಧಿಕಾರಕ್ಕೆ ಬರುವ ಕನಸು ಕಾಣುವ ಅಗತ್ಯವಿಲ್ಲ | ನಳಿನ್ ಕುಮಾರ್ ಕಟೀಲ್
ಮಂಗಳೂರು: ಸಮುದ್ರದ ದಡದಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆ
ಆನ್ ಲೈನ್ ಗೆಳೆಯನ ಭೇಟಿಗೆ ತೆರಳಿದ ಯುವತಿಗೆ ಡ್ರಗ್ಸ್ ನೀಡಿ, ಐದು ಮಂದಿಯಿಂದ ಸಾಮೂಹಿಕ ಅತ್ಯಾಚಾರ!
ದೇವಸ್ಥಾನ ತೆರವು: ಹಿಂದೂ ಭಾವನೆಗಳ ವಿರುದ್ಧದ ಕೃತ್ಯ ಎಂದ ಸಿದ್ದರಾಮಯ್ಯ
ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ | ನಟ ಚೇತನ್
ಇಡೀ ತೋಟವನ್ನೇ ನಾಶ ಮಾಡಿದ ಆನೆ, ಪುಟ್ಟ ಹಕ್ಕಿ ಗೂಡು ಇದ್ದ ಬಾಳೆಗಿಡವನ್ನು ಬಿಟ್ಟು ಹೋಯಿತು!