ಹಾಡಹಗಲೇ ಕಾರಿನಲ್ಲಿ ಬಂದ ತಂಡದಿಂದ ಮಹಿಳೆಯನ್ನು ದೋಚಲು ಯತ್ನ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದ ಅಸಲಿಯತ್ತೇನು?
ಮಂಗಳೂರು: ಕಾರಿನಲ್ಲಿ ಬಂದ ಗ್ಯಾಂಗೊಂದು ಮಹಿಳೆಯೊಬ್ಬರ ಬ್ಯಾಗ್ ನ್ನು ಕಸಿದುಕೊಳ್ಳಲು ಪ್ರಯತ್ನಿಸಿ ವಿಫಲವಾದ ವಿಡಿಯೋವೊಂದು ಮಂಗಳೂರಿನಾದ್ಯಂತ ವೈರಲ್ ಆಗಿದೆ. ಇನ್ನೂ ಈ ವಿಡಿಯೋದ ಅಸಲಿಯತ್ತೇನು ಎನ್ನುವುದನ್ನು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ತಿಳಿಸಿದ್ದಾರೆ.
ಕಳ್ಳತನದ ಸನ್ನಿವೇಶಗಳಲ್ಲಿ ಸಾರ್ವಜನಿಕರು ಹೇಗೆ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎನ್ನುವುದನ್ನು ತಿಳಿಯಲು ಪೊಲೀಸರು ನಡೆಸಿರುವ ಅಣಕು ಕಾರ್ಯಾಚರಣೆ ಇದಾಗಿದ್ದು, ಇದಕ್ಕಾಗಿ ಸೈಂಟ್ ಆಗ್ನೇಸ್ ಕಾಲೇಜಿನ ಗೇಟ್ ಬಳಿಯಲ್ಲಿಯಲ್ಲಿ ಮಹಿಳೆಯಿಂದ ಬ್ಯಾಗ್ ಕಸಿದುಕೊಳ್ಳುವ ಮತ್ತು ಮಹಿಳೆ ಅದನ್ನು ಎದುರಿಸುವ ಅಣಕು ಕಾರ್ಯಾಚರಣೆ ಇದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಡಿಯೋದಲ್ಲಿರುವ ಮಹಿಳೆಯ ಹೆಸರು ಶೋಭ ಲತಾ ಕಟೀಲ್ ಎಂದಾಗಿದ್ದು, ಇವರು ಸುರಕ್ಷಾ ಫಾರ್ ವುಮನ್ ಟ್ರಸ್ಟ್ ನಲ್ಲಿ ಆತ್ಮ ರಕ್ಷಣೆಯ ಬಗ್ಗೆ ತರಬೇತಿ ನೀಡುತ್ತಾರೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ. ಇನ್ನೂ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಜನರು ಈ ಘಟನೆಯನ್ನು ಸತ್ಯ ಎಂದೇ ತಿಳಿದುಕೊಂಡಿದ್ದರು. ಇದೀಗ ಪೊಲೀಸರು ಅಣಕು ಕಾರ್ಯಾಚರಣೆ ಎನ್ನುವುದು ತಿಳಿಯುತ್ತಿದ್ದಂತೆಯೇ ಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರ ನೇತೃತ್ವದಲ್ಲಿ ಇದೀಗ ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಅಪರಾಧ ತಡೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾಗಿದೆ. ಈ ಅಣಕು ಕಾರ್ಯಾಚರಣೆ ಯಶಸ್ವಿಯಾಗಿದ್ದು, ಸಾರ್ವಜನಿಕರಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ಪ್ರಜ್ಞೆಯನ್ನು ಎಚ್ಚರಿಸುವಂತೆ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಳು…
ನಸುಕಿನ ವೇಳೆ ಕಳ್ಳರಂತೆ ಬಂದು ಜಿಲ್ಲಾಡಳಿತ ದೇಗುಲ ತೆರವು ಮಾಡುತ್ತಿದೆ | ಸಂಸದ ಪ್ರತಾಪ್ ಸಿಂಹ ಆಕ್ರೋಶ
ರಸ್ತೆಯಲ್ಲಿ ಮಹಿಳೆಯ ಕೈ ಹಿಡಿದೆಳೆದ ಜೆಡಿಎಸ್ ಮುಖಂಡ!
ಸಿಗರೇಟ್ ನ ಕಪಿ ಮುಷ್ಠಿಯಲ್ಲಿ ಸಿಲುಕಿ ಒದ್ದಾಡಿ ಬಿಟ್ಟಿದ್ದೆ | ಮರೆಯಲಾರದ ಘಟನೆ
ಜೈಲಿನಲ್ಲಿ ಮಹಿಳಾ ಪೊಲೀಸ್ ಮುಂದೆ ಬಟ್ಟೆ ಬಿಚ್ಚಿ ನಿಂತು ಕೈದಿಯಿಂದ ಅನುಚಿತ ವರ್ತನೆ!
ಹೃದಯ ವಿದ್ರಾವಕ ಘಟನೆ: ವಾಕಿಂಗ್ ಗೆ ಹೋಗಿದ್ದ ತಾಯಿ ಮಗ ಇಬ್ಬರೂ ಹೊಳೆಗೆ ಬಿದ್ದು ದಾರುಣ ಸಾವು