ಗಣೇಶೋತ್ಸವದ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಲೇ ಪ್ರಾಣ ಬಿಟ್ಟ ಯುವಕ! - Mahanayaka
11:17 PM Wednesday 11 - December 2024

ಗಣೇಶೋತ್ಸವದ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಲೇ ಪ್ರಾಣ ಬಿಟ್ಟ ಯುವಕ!

charan
12/09/2021

ಕರ್ನೂಲ್: ಗಣೇಶೋತ್ಸವದಲ್ಲಿ ಡಾನ್ಸ್ ಮಾಡುತ್ತಲೇ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ  ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುತ್ತಿ ಪಟ್ಟಣದ ಗೌತಮಿಪುರ ಕಾಲನಿಯಲ್ಲಿ ನಡೆದಿದ್ದು, ಜೊತೆಯಲ್ಲಿದ್ದ ಸ್ನೇಹಿತರು, ಯುವಕನ ಸಾವಿನಿಂದ ಬೆಚ್ಚಿ ಬಿದ್ದಿದ್ದಾರೆ.

ಗಣೇಶೋತ್ಸವದ ಸಂಭ್ರಮದಲ್ಲಿ ಯುವಕರೆಲ್ಲರೂ ಸೇರಿ ಡಾನ್ಸ್ ಮಾಡುತ್ತಿದ್ದರು. ಈ ವೇಳೆ  ಚರಣ್ ಎಂಬ ಯುವಕ ಕೂಡ ಎಲ್ಲರಂತೆಯೇ ಮೈಮರೆತು ಡಾನ್ಸ್ ಮಾಡುತ್ತಿದ್ದ. ಈ ನಡುವೆ ಏಕಾಏಕಿ ಆತ ನೆಲಕ್ಕೆ ಕುಸಿದು ಬಿದ್ದಿದ್ದು, ಆತನಿಗೆ ಏನಾಯ್ತು ಎಂದು ತಿಳಿಯುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿದೆ.

ಇನ್ನೂ ಚರಣ್ ಗೆ ಏನಾಗಿದೆ ಎನ್ನುವುದು ತಿಳಿಯದೇ ತಕ್ಷಣವೇ ಸ್ಥಳೀಯರು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಪರಿಶೀಲನೆ ನಡೆಸಿದ ವೈದ್ಯರು, ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು….

 

ಲಾರಿಗೆ ಜೀಪು ಡಿಕ್ಕಿ: 7 ಮಂದಿಯ ದಾರುಣ ಸಾವು, 4 ಮಂದಿಗೆ ಗಂಭೀರ ಗಾಯ

ಗುಜರಾತ್ ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಹೆಸರು ಅಧಿಕೃತ ಘೋಷಣೆ

ಹಾಡಹಗಲೇ ಕಾರಿನಲ್ಲಿ ಬಂದ ತಂಡದಿಂದ ಮಹಿಳೆಯನ್ನು ದೋಚಲು ಯತ್ನ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದ ಅಸಲಿಯತ್ತೇನು?

ನಸುಕಿನ ವೇಳೆ ಕಳ್ಳರಂತೆ ಬಂದು ಜಿಲ್ಲಾಡಳಿತ ದೇಗುಲ ತೆರವು ಮಾಡುತ್ತಿದೆ | ಸಂಸದ ಪ್ರತಾಪ್ ಸಿಂಹ ಆಕ್ರೋಶ

ಮಂಗಳ ಗ್ರಹದಲ್ಲಿ ಜೀವಿಗಳಿದ್ದವು ಎನ್ನುವುದಕ್ಕೆ ಸಿಕ್ಕಿದೆ ಬಲವಾದ ಸಾಕ್ಷಿ!

ಕಾಂಗ್ರೆಸ್ ಮುಂದಿನ ಎರಡು ದಶಕಗಳ ಕಾಲ ಅಧಿಕಾರಕ್ಕೆ ಬರುವ ಕನಸು ಕಾಣುವ ಅಗತ್ಯವಿಲ್ಲ | ನಳಿನ್ ಕುಮಾರ್ ಕಟೀಲ್

ಇತ್ತೀಚಿನ ಸುದ್ದಿ