ಮಮತಾ ಬ್ಯಾನರ್ಜಿಯ ಸಾಧನೆಯನ್ನು ತನ್ನ ಸಾಧನೆ ಎಂದು ಜಾಹೀರಾತು ನೀಡಿದ ಯೋಗಿ ಆದಿತ್ಯನಾಥ್
ಲಕ್ನೋ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ತನ್ನ ಸರ್ಕಾರದ ಸಾಧನೆಯ ಜಾಹೀರಾತಿನಲ್ಲಿ ಪಶ್ಚಿಮ ಬಂಗಾಳದ ಪ್ಲೈಓವರ್ ಚಿತ್ರವನ್ನು ಬಳಸಿದ ಘಟನೆ ನಡೆದಿದ್ದು, ಮಮತಾ ಬ್ಯಾನರ್ಜಿ ಸಾಧನೆಯನ್ನು ತನ್ನ ಸಾಧನೆ ಎಂಬಂತೆ ಬಿಂಬಿಸಿ ಜಾಹೀರಾತು ನೀಡಿ ಇದೀಗ ವಿವಾದ ಸೃಷ್ಟಿಸಿದ್ದಾರೆ.
ಯೋಗಿ ಸರ್ಕಾರ ಜನರಿಗೆ ಉತ್ತಮವಾದ ರಸ್ತೆಯನ್ನು ನೀಡಿದೆ, ಮೂಲ ಸೌಕರ್ಯ ನೀಡಿದೆ ಎಂಬ ಜಾಹೀರಾತಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ನಿರ್ಮಿಸಿರುವ ರಸ್ತೆಯ ಚಿತ್ರವನ್ನು ಬಳಸಿಕೊಂಡು ಇದೀಗ ಯೋಗಿ ಟ್ರೋಲಿಗೊಳಗಾಗಿದ್ದಾರೆ.
ಇನ್ನೂ ಯೋಗಿ ಸರ್ಕಾರ ನೀಡಿರುವ ಜಾಹೀರಾತನ್ನು ಪೋಸ್ಟ್ ಮಾಡಿರುವ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, ಯೋಗಿಯವರ ಅಭಿವೃದ್ಧಿ ಕೆಲಸಗಳ ಜಾಹೀರಾತಿನಲ್ಲಿ ಪಶ್ಚಿಮ ಬಂಗಾಳದ ಪ್ಲೈ ಓವರ್ ಇರುವುದರಿಂದ, ಬಿಜೆಪಿ ಸರ್ಕಾರ ಟಿಎಂಸಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎನ್ನುವುದನ್ನು ಒಪ್ಪಿಕೊಂಡಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಳು…
ಗಣೇಶೋತ್ಸವದ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಲೇ ಪ್ರಾಣ ಬಿಟ್ಟ ಯುವಕ!
ಲಾರಿಗೆ ಜೀಪು ಡಿಕ್ಕಿ: 7 ಮಂದಿಯ ದಾರುಣ ಸಾವು, 4 ಮಂದಿಗೆ ಗಂಭೀರ ಗಾಯ
ಗುಜರಾತ್ ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಹೆಸರು ಅಧಿಕೃತ ಘೋಷಣೆ
ನಸುಕಿನ ವೇಳೆ ಕಳ್ಳರಂತೆ ಬಂದು ಜಿಲ್ಲಾಡಳಿತ ದೇಗುಲ ತೆರವು ಮಾಡುತ್ತಿದೆ | ಸಂಸದ ಪ್ರತಾಪ್ ಸಿಂಹ ಆಕ್ರೋಶ
ಜೈಲಿನಲ್ಲಿ ಮಹಿಳಾ ಪೊಲೀಸ್ ಮುಂದೆ ಬಟ್ಟೆ ಬಿಚ್ಚಿ ನಿಂತು ಕೈದಿಯಿಂದ ಅನುಚಿತ ವರ್ತನೆ!
ಸಿಗರೇಟ್ ನ ಕಪಿ ಮುಷ್ಠಿಯಲ್ಲಿ ಸಿಲುಕಿ ಒದ್ದಾಡಿ ಬಿಟ್ಟಿದ್ದೆ | ಮರೆಯಲಾರದ ಘಟನೆ