ಅಜ್ಜಿಯ ಮನೆಗೆ ಬಂದ ಮಹಿಳೆ, ತನ್ನ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ!
ಬಾಗಲಕೋಟೆ: ಒಂದು ವರ್ಷ ವಯಸ್ಸಿನ ಪುಟ್ಟ ಕಂದಮ್ಮನೊಂದಿಗೆ ತಾಯಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ರಾಘಾಪುರದಲ್ಲಿ ನಡೆದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
26 ವರ್ಷ ವಯಸ್ಸಿನ ಫಕೀರವ್ವ ತನ್ನ ಒಂದು ವರ್ಷ ವಯಸ್ಸಿನ ಮಗು ಶಿವಾನಿ ಜೊತೆಗೆ ಆತ್ಮಹತ್ಯೆಗೆ ಶರಣಾಗಿರುವವರು ಎಂದು ಗುರುತಿಸಲಾಗಿದೆ. ಹೆರಿಗೆಗಾಗಿ ಮಹಿಳೆ ತನ್ನ ಅಜ್ಜಿ ಊರಾದ ರಾಘಾಪುರಕ್ಕೆ ಬಂದಿದ್ದು, ಇಂದು ಗಂಡನ ಮನೆಯವರು ಮಹಿಳೆಯನ್ನು ಕರೆದುಕೊಂಡು ಹೋಗಲು ಆಗಮಿಸಿದ್ದಾರೆ.
ಆದರೆ ಫಕೀರವ್ವ ತನ್ನ ಮಗುವನ್ನು ಎತ್ತಿಕೊಂಡು ಅಜ್ಜಿಯ ಜಮೀನಿನಲ್ಲಿರುವ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೂ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮಗುವಿನ ಮೃತದೇಹವನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಮಹಿಳೆಗಾಗಿ ಶೋಧ ಮುಂದುವರಿದಿದೆ.
ಮಹಿಳೆಯ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಮಹಿಳೆಯ ಆತ್ಮಹತ್ಯೆ ಹಿನ್ನೆಲೆಯಲ್ಲಿ ಹಲವಾರು ಅನುಮಾನಗಳು ಸೃಷ್ಟಿಯಾಗಿವೆ ಎಂದು ವರದಿಯಾಗಿದೆ.
ಇನ್ನಷ್ಟು ಸುದ್ದಿಗಳು…
“ಮಗಳನ್ನು ಹೇಗಾದರೂ ಬದುಕಿಸಿ” ಎಂದು ಅತ್ತು ಗೋಗರೆದರೂ ಬಾಗಿಲು ತೆರೆಯದ ಆಸ್ಪತ್ರೆ | 5 ವರ್ಷದ ಬಾಲಕಿ ಸಾವು
ಗಣಪತಿ ಮೂರ್ತಿ ವಿಸರ್ಜನೆ ವೇಳೆ ಘರ್ಷಣೆ: ಯುವಕನ ಹತ್ಯೆ
ಅಡಿಕೆ ಬೇಯಿಸುವ ಹಂಡೆಗೆ ಬಿದ್ದು ನಾಲ್ಕು ವರ್ಷ ವಯಸ್ಸಿನ ಬಾಲಕನ ದಾರುಣ ಸಾವು!
ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಮುಂದೆ ಬಳೆ ಇಟ್ಟು, ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ]\
ಜಾತಿ ಜನಗಣತಿ ಸಮೀಕ್ಷೆಯನ್ನು ಕೊಂದದ್ದು ಸಿದ್ದರಾಮಯ್ಯ, ಹೂತದ್ದು ಡಿ.ಕೆ.ಶಿವಕುಮಾರ್ | ಕೆ.ಎಸ್.ಈಶ್ವರಪ್ಪ
ಬಿರಿಯಾನಿ ತಿಂದ ಕೆಲವೇ ಹೊತ್ತಿನಲ್ಲಿ ಬಾಲಕಿ ಸಾವು: 15 ದಿನಗಳ ಹಳೆಯ ಕೋಳಿ ಮಾಂಸದಲ್ಲಿ ಬಿರಿಯಾನಿ ತಯಾರಿಕೆ!