RPI: ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಕೀಯ ಚಿಂತನೆ ಮತ್ತು ಪರ್ಯಾಯ ರಾಜಕಾರಣ | ತುಮಕೂರು ಜಿಲ್ಲಾ ಮಟ್ಟದ ಕಾರ್ಯಕರ್ತರ ಕಾರ್ಯಾಗಾರ
ತುಮಕೂರು: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅಠವಳೆ) ತುಮಕೂರು ಜಿಲ್ಲಾ ಸಮಿತಿಯು “ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಕೀಯ ಚಿಂತನೆ ಮತ್ತು ಪರ್ಯಾಯ ರಾಜಕಾರಣ” ತುಮಕೂರು ಜಿಲ್ಲಾ ಮಟ್ಟದ ಕಾರ್ಯಕರ್ತರ ಕಾರ್ಯಾಗಾರ ಸೆಪ್ಟಂಬರ್ 15ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಭವನ ಶ್ರೀರಾಮ್ ನಗರದಲ್ಲಿ ನಡೆಯಲಿದೆ.
ಬೆಳಗ್ಗೆ 10:30ಕ್ಕೆ ಪ್ರತಿನಿಧಿ ನೋಂದಣಿ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 11:30ಕ್ಕೆ ಉದ್ಘಾಟನಾ ಗೋಷ್ಠಿ ನಡೆಯಲಿದೆ. ಆರ್.ಪಿ.ಐ. &ಎಸ್.ಎಸ್.ಡಿ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಉದ್ಘಾಟಿಸಲಿದ್ದಾರೆ. ದಸಂಸ ಹಿರಿಯ ಮುಖಂಡ ಮು.ತಿಮ್ಮಯ್ಯ ಆಶಯ ನುಡಿಗಳನ್ನಾಡಲಿದ್ದಾರೆ. ಪಿವಿಸಿ(ಸಮತಾವಾದ) ರಾಜ್ಯಾಧ್ಯಕ್ಷ ಬಸವರಾಜು ಇಂಡ್ಲವಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸ್ನೇಹ ಕ್ಲಬ್ ಎಂ.ಲಗುಮಯ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಮುನಿಯಪ್ಪ ಭಾಗವಹಿಸಲಿದ್ದಾರೆ. ಪಿವಿಸಿ (ಸಮತಾವಾದ) ರಾಜ್ಯ ಪ್ರಧಾನ ಕಾರ್ಯದರ್ಶಿ ಭವಾನಿ ಪ್ರಸಾದ್ ನಿರೂಪಿಸಲಿದ್ದಾರೆ.
ವಿಷಯ ಮಂಡನಾ ಗೋಷ್ಠಿಗಳು (12:30ರಿಂದ ಆರಂಭ)
ಮತದಾನದ ಮಹತ್ವ ಕುರಿತು ಅಂಬೇಡ್ಕರ್ ಅನಿಸಿಕೆ-ಪ್ರೊ.ಭೀಮ್ ಶಾ ಆರ್ಯ
ಅಧ್ಯಕ್ಷತೆ: ಎಂ ರಾಮಯ್ಯ, ನಿರೂಪಣೆ: ಜಾಲ ಕಿಟ್ಟಿ
ದುಂಡು ಮೇಜಿನ ಸಭೆಯ ನಿರ್ಣಯ ಮತ್ತು ಪೂನಾ ಒಪ್ಪಂದದ ತಾತ್ವಿಕ ಚಿಂತನೆ- ಪ್ರೊ. ಓ. ನಾಗರಾಜ
ಅಧ್ಯಕ್ಷತೆ: ಡಾ.ಜಿ.ಗೋವಿಂದಯ್ಯ, ನಿರೂಪಣೆ: ಡಾ.ಆರ್.ಚಂದ್ರಶೇಖರ್
ಬೌದ್ಧ ಧರ್ಮದಲ್ಲಿನ ಪ್ರಜಾಪ್ರಭುತ್ವದ ನೆಲೆಗಳು ಮತ್ತು ಸಂವಿಧಾನದ ಆಶಯಗಳು- ಕೆ.ವಿ.ಕೃಷ್ಣಮೂರ್ತಿ
ಅಧ್ಯಕ್ಷತೆ: ಎ.ಗೋಪಾಲ್, ನಿರೂಪಣೆ ಚೆನ್ನಕೇಶವ
ಅಂಬೇಡ್ಕರ್ ದೃಷ್ಟಿಯಲ್ಲಿ ಪರ್ಯಾಯ ರಾಜಕೀಯ ಚಿಂತನೆ-ಒಂದು ಅವಲೋಕನ: ಡಾ.ವೆಂಕಟಾಚಲ
ಅಧ್ಯಕ್ಷತೆ: ಹೇಮ ಸುಧಾರೆಡ್ಡಿ, ನಿರೂಪಣೆ: ಅರಳ್ಳಿಮುನಿರಾಜು
ಅಸ್ಪೃಶ್ಯರು ಆಳುವ ವರ್ಗವಾಗುವ ಅನಿವಾರ್ಯತೆ ಮತ್ತು ಆರ್ ಪಿಐ ನಡೆ- ಡಾ.ಮಹಾದೇವಸ್ವಾಮಿ
ಅಧ್ಯಕ್ಷತೆ: ಸಾಯಿಪ್ರಕಾಶ್, ನಿರೂಪಣೆ: ಮುನಿಕೃಷ್ಣ
ರಾಜಕೀಯ ನಿರ್ಣಯ ಮಂಡನೆ- ಡಾ.ಹೆಚ್.ಆರ್.ಸುರೇಂದ್ರ
ಅಧ್ಯಕ್ಷತೆ: ಪಿ.ಎನ್.ರಾಮಯ್ಯ, ನಿರೂಪಣೆ: ಡಿ.ಎಂ.ಅಂಬರೀಷ್
ಸಮಾರೋಪಗೋಷ್ಠಿ(ಸಂಜೆ 5ಕ್ಕೆ)
ಸಮಾರೋಪ ಭಾಷಣ: ಪ್ರೊ.ವಡ್ಡಗೆರೆ ನಾಗರಾಜಯ್ಯ, ಪ್ರಾಧ್ಯಾಪಕರು, ಅಂಬೇಡ್ಕರ್ ಕಾಲೇಜು ಬೆಂಗಳೂರ
ಅಧ್ಯಕ್ಷತೆ: ಪಿ.ಪಿಳ್ಳರಾಜು, ರಾಜ್ಯ ಉಪಾಧ್ಯಕ್ಷರು ಆರ್ ಪಿಐ
ನಿರೂಪಣೆ: ನಟರಾಜ್ ಜಿ.ಎಲ್., ಜಿಲ್ಲಾಧ್ಯಕ್ಷರು, ಆರ್‍ಪಿಐ, ತುಮಕೂರು
ಸಂವಿಧಾನ ಪ್ರಸ್ತಾವಣೆ ಪಠಣ: ಜೆ.ಸಿ.ವೆಂಕಟರಮಣಪ್ಪ, ಜಿಲ್ಲಾಧ್ಯಕ್ಷರು ಚಿಕ್ಕಬಳ್ಳಾಪುರ
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾಧ್ಯಕ್ಷ ನಟರಾಜು ಜಿ.ಎಲ್. ಅವರು ಮನವಿ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು 8088059494 ನಂಬರ್ ನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಸೇರಿಸಿಕೊಳ್ಳಿ