ವರದಕ್ಷಿಣೆ ತರಲಿಲ್ಲ ಎಂದು ಮಹಿಳೆಗೆ ವಿಷ ಉಣಿಸಿ ಕೊಂದ ಪಾಪಿಗಳು! - Mahanayaka
6:20 AM Thursday 12 - December 2024

ವರದಕ್ಷಿಣೆ ತರಲಿಲ್ಲ ಎಂದು ಮಹಿಳೆಗೆ ವಿಷ ಉಣಿಸಿ ಕೊಂದ ಪಾಪಿಗಳು!

dowry
15/09/2021

ಮುಜಫ್ಫರ್ ನಗರ: ತವರಿನಿಂದ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ವಿಷವುಣಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದ್ದು, ವರದಕ್ಷಿಣೆ ತರುವಂತೆ ಮಹಿಳೆಗೆ ತೀವ್ರವಾಗಿ ಕಿರುಕುಳ ಕೂಡ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

ಮುಜಫ್ಫರ್ ನಗರದ ಆಜಾದ್ ಚೌಕ್ ನಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಮಹಿಳೆಯ ಪತಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೇ ತಿಂಗಳಿನಲ್ಲಿ ಸಂತ್ರಸ್ತೆ ಮುಸ್ಕಾನ್ ಅವರು ಕಾಸಿಫ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯಾಗಿ ಕೆಲವೇ ದಿನಗಳಲ್ಲಿ ಗಂಡನ ಮನೆಯವರು ವರದಕ್ಷಿಣೆಗಾಗಿ ವಧುವನ್ನು ಪೀಡಿಸಲು ಆರಂಭಿಸಿದ್ದಾರೆ. ಗಂಡನ ಮನೆಯಲ್ಲಿ ನಿರಂತರವಾಗಿ ಕಿರುಕುಳವಾಗುತ್ತಿದ್ದರೂ, ಮುಸ್ಕಾನ್ ಸಹಿಸಿಕೊಂಡಿದ್ದರು.

ಕೆಲವು ತಿಂಗಳುಗಳಿಂದ ಕಾಸಿಫ್ ಕಿರುಕುಳ ನೀಡುವುದನ್ನು ಹೆಚ್ಚಿದ್ದಾನೆ. ಆದರೂ ಮುಸ್ಕಾನ್ ವರದಕ್ಷಿಣೆ ತರದೇ ಇದ್ದಾಗ ಅತ್ತೆ ಮನೆಯರು ಸೇರಿಕೊಂಡು ಆಕೆಗೆ ವಿಷವುಣಿಸಿ ಹತ್ಯೆ ಮಾಡಿದ್ದಾರೆ ಎಂದು ಮುಸ್ಕಾನ್ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಮಂಗಳೂರು: ನಿಫಾ ವೈರಸ್ ಶಂಕೆ ಇದ್ದ ಯುವಕನ ಪರೀಕ್ಷೆ ವರದಿ ನೆಗೆಟಿವ್ | ಆರೋಗ್ಯಾಧಿಕಾರಿ

ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್ ಗೆ ಹೋಗಿದ್ದ ವೈದ್ಯೆ ಕೃಷಿ ಹೊಂಡದಲ್ಲಿ ಮುಳುಗಿ ಸಾವು!

ಫ್ಲೈಓವರ್ ಮೇಲೆ ಬೈಕ್ ಗೆ ಡಿಕ್ಕಿ ಹೊಡೆದ ಕಾರು: 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಬೈಕ್ ಸವಾರರು

ಮಸೀದಿ, ಚರ್ಚ್, ದೇವಸ್ಥಾನ ಅಂತ ಇಲ್ಲ,  ಯಾವುದೇ ಇದ್ದರೂ ತೆರವು ಮಾಡುತ್ತೇವೆ | ರಾಮನಗರ ಡಿಸಿ

ನೀವು ಲಿಂಬೆ ಸೋಡಾವನ್ನು ಅತೀಯಾಗಿ ಕುಡಿಯುತ್ತೀರಾ? | ಹಾಗಿದ್ದರೆ, ಈ ವಿಚಾರ ನೀವು ತಿಳಿಯಲೇ ಬೇಕು

ಆಸ್ತಿಗಾಗಿ ಸಹೋದರರ ಜಗಳ: ಕಟ್ಟಡದ ಮೇಲಿನಿಂದ ಓರ್ವ ಸಹೋದರನನ್ನು ಕೆಳಕ್ಕೆಸೆಯಲು ಯತ್ನ

ತಂದೆಯನ್ನು ಕೊಂದು, ಕುಡಿದು ಬಿದ್ದು ಸತ್ತ ಎಂದು ನಂಬಿಸಿದ ಪುತ್ರ | ಪುತ್ರನ ಹೈಡ್ರಾಮ ಬಯಲಾಗಿದ್ದು ಹೇಗೆ ಗೊತ್ತಾ?

ಇತ್ತೀಚಿನ ಸುದ್ದಿ