ಟ್ರಾಫಿಕ್ ಸಿಗ್ನಲ್ ನಲ್ಲಿ ಡಾನ್ಸ್ ಮಾಡಿ ಸಂಕಷ್ಟಕ್ಕೀಡಾದ ಯುವತಿ!
ಇಂದೋರ್: ಟ್ರಾಫಿಕ್ ಸಿಗ್ನಲ್ ನಲ್ಲಿ ರೆಡ್ ಸಿಗ್ನಲ್ ಬಿದ್ದ ವೇಳೆ ಯುವತಿಯೋರ್ವಳು ರಸ್ತೆಯಲ್ಲಿ ಡಾನ್ಸ್ ಮಾಡಿದ್ದು, ಇದೀಗ ಟ್ರಾಫಿಕ್ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ರಸ್ತೆಯಲ್ಲಿ ಡಾನ್ಸ್ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಇದೀಗ ಯುವತಿಯ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ.
ಶ್ರೇಯಾ ಕರ್ಲಾ ಎಂಬ ಯುವತಿ ಇನ್ ಸ್ಟಾಗ್ರಾಮ್ ಗಾಗಿ ರಸ್ತೆಯ ಜೀಬ್ರಾ ಮಾರ್ಕ್ ನಲ್ಲಿ ಡಾನ್ಸ್ ಮಾಡಿದ್ದು, ವಿಡಿಯೋ ಮಾಡಿಸಿಕೊಂಡು ಇನ್ ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಟ್ರಾಫಿಕ್ ಸಿಗ್ನಲ್ ನಲ್ಲಿದ್ದ ವಾಹನ ಪ್ರಯಾಣಿಕರಿಗೆ ಕರ್ಲಾಳ ಡಾನ್ಸ್ ಇಷ್ಟವಾಗಿತ್ತು. ಆಕೆಯ ನೃತ್ಯ ಕೌಶಲ್ಯವನ್ನು ನೋಡಿ ಜನರು ಕೂಡ ಮಾರುಹೋಗಿದ್ದರು. ಆದರೆ, ಕಾನೂನು ಪಾಲಿಸಬೇಕಾಗಿರುವುದು ಎಲ್ಲರ ಧರ್ಮ ಎನ್ನುವುದನ್ನು ಯುವತಿ ಮರೆಯುವ ಮೂಲಕ ಇದೀಗ ವಿವಾದಕ್ಕೀಡಾಗಿದ್ದಾಳೆ.
ಈ ವಿಡಿಯೋ ವ್ಯಾಪಕ ವೈರಲ್ ಆದ ಬಳಿಕ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಪ್ರತಿಕ್ರಿಯಿಸಿ, ಇಂದೋರ್ ನ ರಸೋಮಾ ಚೌಕದಲ್ಲಿ ವಿಡಿಯೋ ಚಿತ್ರೀಕರಿಸಿರುವ ಬಗ್ಗೆ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಆಕೆಯ ಉದ್ದೇಶಗಳು ಏನೇ ಇರಲಿ. ಆದರೆ ಅದು ತಪ್ಪು. ಇಂತಹ ಘಟನೆಗಳು ಇನ್ನು ನಡೆಯಬಾರದು ಹಾಗಾಗಿ ಯುವತಿಯ ವಿರುದ್ಧ ಕ್ರಮಕೈಗೊಳ್ಳಲು ನಾನು ಆದೇಶಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.
ಇನ್ನಷ್ಟು ಸುದ್ದಿಗಳು…
ಯಾದಗಿರಿ ಪ್ರಕರಣಕ್ಕೆ ತಿರುವು: ಮಹಿಳೆಯ ಮೇಲೆ ಹಲ್ಲೆ ಮಾತ್ರವಲ್ಲ, ಸಾಮೂಹಿಕ ಅತ್ಯಾಚಾರವೂ ನಡೆದಿತ್ತು!
ಬಿಗ್ ಬ್ರೇಕಿಂಗ್ ನ್ಯೂಸ್: ಹೈದರಾಬಾದ್ ಅತ್ಯಾಚಾರ ಪ್ರಕರಣದ ಆರೋಪಿ ಆತ್ಮಹತ್ಯೆ
ಮಕ್ಕಳಿಗೆ ಎರಡು ದಿನಗಳಿಗಿಂತ ಹೆಚ್ಚುಕಾಲ ಕೊವಿಡ್ ಲಕ್ಷಣಗಳಿದ್ದರೆ ತಪ್ಪದೇ ಪರೀಕ್ಷೆ ನಡೆಸಿ
ಶಾಕಿಂಗ್ ನ್ಯೂಸ್: ಭಾರತದಲ್ಲಿ ಪ್ರತಿದಿನ 80 ಕೊಲೆ, 77 ಅತ್ಯಾಚಾರ ಪ್ರಕರಣಗಳು ದಾಖಲಾಗ್ತಿವೆ!
6 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ ಆರೋಪಿಯನ್ನು ಎನ್ ಕೌಂಟರ್ ಮಾಡುತ್ತೇವೆ | ತೆಲಂಗಾಣ ಸಚಿವ ಬಹಿರಂಗ ಹೇಳಿಕೆ
ಪ್ರೀತಿಯ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ | ನಾಲ್ವರು ಆರೋಪಿಗಳು ಅರೆಸ್ಟ್
ಅವಸರದಿಂದ ದೇವಸ್ಥಾನಗಳನ್ನು ಒಡೆಯಬೇಡಿ: ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ