ಖ್ಯಾತ ಚಿತ್ರಕಲಾ ಶಿಕ್ಷಕ ಯತೀಶ್ ಕುಮಾರ್ ಅವರಿಗೆ ‘ಶಿಕ್ಷಕ ರತ್ನ ಪ್ರಶಸ್ತಿ’ - Mahanayaka
3:03 AM Wednesday 11 - December 2024

ಖ್ಯಾತ ಚಿತ್ರಕಲಾ ಶಿಕ್ಷಕ ಯತೀಶ್ ಕುಮಾರ್ ಅವರಿಗೆ ‘ಶಿಕ್ಷಕ ರತ್ನ ಪ್ರಶಸ್ತಿ’

yathish kumar
16/09/2021

ತುಮಕೂರು: ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ ನೀಡುತ್ತಿರುವ ಶಿಕ್ಷಕ ರತ್ನ ಪ್ರಶಸ್ತಿಗೆ, ಖ್ಯಾತ ಚಿತ್ರಕಲಾ ಶಿಕ್ಷಕ ಯತೀಶ್ ಕುಮಾರ್ ಅವರು ಪಾತ್ರರಾಗಿದ್ದು, ಶಿಕ್ಷಣ ಕ್ಷೇತ್ರಗಳಲ್ಲಿ 10 ವರ್ಷಗಳ ಅವರ ಸಾಧನೆಗೆ ಈ ಪ್ರಶಸ್ತಿ ಸಂದಿದೆ.

2010ರಿಂದ 2013ರವರೆಗೆ(3 ವರ್ಷ) ಕೇಂದ್ರೀಯ ವಿಶ್ವಾವಿದ್ಯಾಲಯ ಹಾಸನ ಹಾಗೂ 2014ರಿಂದ 15ರವರೆಗೆ ಕೇಂದ್ರೀಯ ವಿಶ್ವವಿದ್ಯಾಲಯ ತುಮಕೂರು ಹಾಗೂ 2015ರಿಂದ ಈಗಿನವರೆಗೆ(2021) ಆರು ವರ್ಷಗಳವರೆಗೆ  ವರಿನ್ ಅಂತರಾಷ್ಟ್ರೀಯ ವಸತಿ ಶಾಲೆ ತುಮಕೂರು ಇದರಲ್ಲಿ  ಸೇವೆ ಸಲ್ಲಿಸುವ ಮೂಲಕ 10 ವರ್ಷಗಳ ಚಿತ್ರಕಲಾ ಶಿಕ್ಷಕರಾಗಿ ಯತೀಶ್ ಕುಮಾರ್ ಅವರು ಕಾರ್ಯನಿರ್ವಹಿಸಿದ್ದಾರೆ.

2007ನೇ ಸಾಲಿನಲ್ಲಿ ಗುಬ್ಬಿ ತಾಲೂಕಿನಲ್ಲಿ ಮಕ್ಕಳ ಕಲಾ ಅಕಾಡೆಮಿ ಸ್ಥಾಪಿಸುವ ಮೂಲಕ ಶನಿವಾರ ಮತ್ತು ಭಾನುವಾರದ ರಜಾದಿನಗಳಲ್ಲಿ  ಹಳ್ಳಿಯ ಮಕ್ಕಳಿಗೆ ಕಲೆಯ ಬಗ್ಗೆ ತರಬೇತಿ ನೀಡಿ ಸೇವಾ ಮನೋಭಾವವನ್ನು ಮೆರೆದವರು. ಈ ಅಕಾಡಮಿಯ ಸದುಪಯೋಗ ಪಡೆದ ಮಕ್ಕಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ ಮತ್ತು ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಚಿತ್ರಕಲೆ ಮಾತ್ರವಲ್ಲದೇ ಅಕ್ಷರ ಬರಹ, ಥರ್ಮೋಕೋಲ್ ಕಟ್ಟಿಂಗ್, ಕ್ರಾಫ್ಟ್, ಫ್ಯಾಬ್ರಿಕ್ ಪೈಂಟಿಂಗ್, ಕಸದಿಂದ ಕಲೆ, ಕಥೆ ಹೇಳುವುದು, ಹಾಡು ಹೇಳುವುದು ಇತ್ಯಾದಿ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಿದ್ದಾರೆ.

ಶಿಕ್ಷಕ ರತ್ನ ಪ್ರಶಸ್ತಿಗೆ ಆಯ್ಕೆಯಾದವರು , ಹೆಸರು. ಜಿಲ್ಲೆ,

1.R,ರಂಜನ್, ಧಾರವಾಡ,

2. ಮನೋಜ್ ಸ್ವಾಮಿ ಹಿರೇಮಠ ಗಂಗಾವತಿ.

3. ಡಾ, ಸತ್ಯನಾರಾಯಣ ಬಾಬು BV ,ಬೆಂಗಳೂರು

4.ಸತೀಶ್ ಕುಮಾರ್ ಶೆಟ್ಟಿ ಬೆಂಗಳೂರು.

5.ಪ್ರಭಾಕರ್ ಪಾಟೀಲ ,ವಿಜಯಪುರ.

6. ನಾಗರಾಜ್,MM,ದಾವಣಗೆರೆ,

7.ವಿವೇಕಾನಂದ,MC,ಮಂಡ್ಯ,

8. ಲೋಕೇಶ್ ಪಿ ,ಮೈಸೂರು

9. ಸುರೇಶ್ ಕುಮಾರ್ , ಶಿವಮೊಗ್ಗ,

10. ಚಂದ್ರಶೇಖರ BR ರಾಮನಗರ,

11. ಸಂಪೂರ್ಣ ಕೆ,ಕೆ,  ಕರಿಮಣಿ, ಬೀದರ,

12. ನಾಗರಾಜ ಬಿ, ಮಜ್ಜೆಗುಡ್ಡ, ಗದಗ,

13.  ಕಸ್ತೂರಿ ಎಸ್, ಬಿ,ಚಿಕ್ಕಬಳ್ಳಾಪುರ,

14. ಡಾ, ಸುರೇಶ್ ಸು, ಹಿತ್ತಲ ಮನಿ,ಹಾವೇರಿ,

15. ಯತೀಶ್ ಕುಮಾರ್, ತುಮಕೂರು,

16. ಸದಾನಂದ ಪಾಟೀಲ ,ಕಲಬುರ್ಗಿ,

17. ಚಂದ್ರಶೇಖರ MR ಚಿಕ್ಕಮಗಳೂರು,

18. ಕಾಳಿದಾಸ ಬಸವಂತ ಬಡಿಗೇರ,ಶಿರಸಿ, ಶೈಕ್ಷಣಿಕ,

19. ಉಲ್ಲಾಸ್ ರಾಮದಾಸ್ ನಾಯ್ಕ,ಉ,ಕ,

20. ಮಲ್ಲಿಕಾರ್ಜುನ,ಐ,ಬಡಿಗರ್,ಗಡಿಯಾಚೆ,ಕನ್ನಡಿಗ ಮುಂಬೈ,

21. ಶ್ರೀನಿವಾಸ ದೇ ಕಾಂಬಳೆಕರ್, ಬಾಗಲಕೋಟೆ

22. ಶಿವಾನಂದ ಕಟಕೊಳ ಬೆಳಗಾವಿ,

23. ಮಹೇಶ್ ಹೈಕಾಡಿ, ಉಡುಪಿ,

24. ಸಂಗಮೇಶ್ವರ M,ಪಾಟೀಲ,ಕೊಪ್ಪಳ

25. ಶ್ರೀಮತಿ ಉಮಾರಾಣಿ  ಹುಬ್ಬಳ್ಳಿ,ಧಾರವಾಡ,

26. ಅಚ್ಚುತ ಮಣಿಯಾಣಿ,A ದ,ಕ,

27. ಮನು TJ ಚಿತ್ರದುರ್ಗ,

28.ಗುಂಬಳಿ ಬಸವ ರಾಜ,ಚಾಮರಾಜನಗರ,

29. ವೆಂಕಟೇಶ್,ಬಿ ವಿಜಯನಗರ,

30. ಧರ್ಮೇಶ್, ಹಾಸನ ,

31. ಗೋಪಾಲ ಕೃಷ್ಣ, ಕೋಲಾರ,

32. ಪ್ರತೀಮ್ ಕುಮಾರ್ ,ದ,ಕ,

33.ಶಿವೇಶ್ವರ ಗೌಡಕಲ್ಲುಕಂಬ , ಬಳ್ಳಾರಿ,

34. ಉದಯ ಬಳಕೂರು , ಉಡುಪಿ,

35.ಕೇಶವ ಮೂರ್ತಿ, ವಿಶೇಷ, ಪ್ರತಿಭೆ, ಸಂಗೀತ

nataraju gl
ನಟರಾಜು ಜಿ.ಎಲ್.

ಪ್ರಶಸ್ತಿ ವಿಜೇತ ಶಿಕ್ಷಕರಿಗೆ ತುಮಕೂರು ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ನಟರಾಜು ಜಿ.ಎಲ್. ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿ