ಬುಡಕಟ್ಟು ಜನಾಂಗದ ಕಾರ್ಯಕರ್ತನ ಮನೆಯಲ್ಲಿ ಅಮಿತ್ ಶಾ ಭೋಜನ
06/11/2020
ಬಂಕುರಾ: ಗೃಹಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಚತುರ್ದಿಹಿ ಗ್ರಾಮದ ಬುಡಕಟ್ಟು ಜನಾಂಗದ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಊಟ ಮಾಡಿ ಸುದ್ದಿಯಾಗಿದ್ದಾರೆ. ಪಕ್ಷದ ಕಾರ್ಯಕರ್ತ ಬಿಭೀಷಣ್ ಹನ್ಸ್ ಡಾ ಮನೆಯಲ್ಲಿ ಅವರು ಬಾಳೆ ಎಲೆಯಲ್ಲಿ ಊಟ ಮಾಡಿದ್ದಾರೆ.
ಅಮಿತ್ ಶಾ ಅವರಿಗೆ ಬಂಗಾಳಿ ಖಾದ್ಯಗಳಾದ ಅನ್ನ, ರೊಟ್ಟಿ, ದಾಲ್, ಪೋತೋಲ್ ಭಾಜಾ, ಶುಕ್ತೋ, , ಆಲೂ ಪೋಸ್ಟೊ ಹಾಗೂ ಪಾಪಡ್ ಮೊದಲಾದ ಖಾದ್ಯಗಳನ್ನು ಬಿಭೀಷಣ್ ಹನ್ಸ್ ಡಾ ವ್ಯವಸ್ಥೆ ಮಾಡಿಸಿದರು.
ಅಮಿತ್ ಶಾ ಅವರ ಜೊತೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಮತ್ತು ಪಕ್ಷದ ರಾಜ್ಯದ ಮುಖ್ಯಸ್ಥ ದಿಲೀಪ್ ಘೋಷ್ ಮೊದಲಾದವರು ಆಗಮಿಸಿದ್ದರು. ಇಷ್ಟೊಂದು ಅದ್ದೂರಿಯಾದ ಊಟವನ್ನು ಎಲ್ಲಿ ತಯಾರಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ.