ಶಾರ್ಟ್ಸ್, ಟೀಶರ್ಟ್ ಧರಿಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ | ಆ ಬಳಿಕ ಪರೀಕ್ಷಾ ಕೇಂದ್ರದಲ್ಲಿ ನಡೆದದ್ದೇನು ಗೊತ್ತಾ? - Mahanayaka
11:06 PM Wednesday 11 - December 2024

ಶಾರ್ಟ್ಸ್, ಟೀಶರ್ಟ್ ಧರಿಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ | ಆ ಬಳಿಕ ಪರೀಕ್ಷಾ ಕೇಂದ್ರದಲ್ಲಿ ನಡೆದದ್ದೇನು ಗೊತ್ತಾ?

half pant
17/09/2021

ಅಸ್ಸಾಂ:  ಶಾರ್ಟ್ಸ್ ಧರಿಸಿಕೊಂಡು ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿನಿಗೆ ಕರ್ಟೈನ್ ಸುತ್ತಿಸಿ ಪರೀಕ್ಷೆ ಬರೆಸಿದ ಘಟನೆ ಅಸ್ಸಾಂನ ತೇಜ್ ಪುರ ನಗರದಲ್ಲಿ ನಡೆದಿದ್ದು, ವಿದ್ಯಾರ್ಥಿನಿ ಕಾಲು ಕಾಣಿಸುತ್ತಿದೆ ಎಂದು ಆಕ್ಷೇಪಿಸಿ  ಪರೀಕ್ಷಾ ಕೇಂದ್ರದಲ್ಲಿ ತಗಾದೆ ಎತ್ತಲಾಗಿದೆ ಎಂದು ಹೇಳಲಾಗಿದೆ.

19 ವರ್ಷ ವಯಸ್ಸಿನ ಜುಬ್ಲಿ ತಾಮೂಲಿ ಜೋರ್ಹತ್ ನ ಅಸ್ಸಾಂ ಕೃಷಿ ವಿಶ್ವವಿದ್ಯಾಲಯ(ಎಎಯು)ದ ಪರೀಕ್ಷೆಗೆ ಹಾಜರಾದಾಗ ಈ ಘಟನೆ ನಡೆದಿದೆ. ಯುವತಿಯು ತನ್ನ ತಂದೆಯೊಂದಿಗೆ ತಮ್ಮ ಊರಾದ ಬಿಸ್ವನಾಥ ಚರಿಯಾಲಿಯಿಂದ 70 ಕಿ.ಮೀ.ದೂರದ ತೇಜಪುರಕ್ಕೆ ಬೆಳಗ್ಗೆ ಪರೀಕ್ಷೆ ಬರೆಯಲು ತೆರಳಿದ್ದಾಳೆ.

ಪರೀಕ್ಷಾ ಕೇಂದ್ರಕ್ಕೆ ತಲುಪುತ್ತಿದ್ದಂತೆಯೇ ಆಕೆ ಧರಿಸಿರುವ ಬಟ್ಟೆಯ ಬಗ್ಗೆ ಆಕ್ಷೇಪ ಎತ್ತಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಹೇಳಿದ್ದಾರೆ. ಪ್ಯಾಂಟ್ ಧರಿಸಿಕೊಂಡು ಬಂದರೆ ಮಾತ್ರವೇ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಹೇಳಿದ್ದಾರೆ. ಆ ಬಳಿಕ ವಿಧಿ ಕಾಣದೇ ವಿದ್ಯಾರ್ಥಿನಿಯ ತಂದೆ ಕರ್ಟೈನ್ ತಂದು ಸುತ್ತಿಸಿ ಪರೀಕ್ಷೆ ಬರೆಸಿದ್ದಾರೆ ಎಂದು ವರದಿಯಾಗಿದೆ.

ಪರೀಕ್ಷೆ ಕೇಂದ್ರದಲ್ಲಿ ನಡೆದ ಘಟನೆಯಿಂದಾಗಿ ನನ್ನ ಪರೀಕ್ಷಾ ವೇಳೆ ಹೋಗಿದೆ. ಹಾಲ್ ಟಿಕೆಟ್ ನಲ್ಲಿ ಡ್ರೆಸ್ ಕೋಡ್ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ. ಅಲ್ಲದೇ ಪರೀಕ್ಷಾ ಸಮಯದಲ್ಲಿ ನನಗೆ ಮಾನಸಿಕವಾಗಿ ಘಾಸಿ ಮಾಡಲಾಗಿದೆ. ನಾನು ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಕೊವಿಡ್ ಮಾರ್ಗ ಸೂಚಿಯನ್ನು ಕೇಳಲಿಲ್ಲ, ಮಾಸ್ಕ್ ಹಾಕದಿರುವ ಬಗ್ಗೆಯೂ ಯಾರೂ ಆಕ್ಷೇಪ ಎತ್ತಿಲ್ಲ, ಟೆಂಪರೇಚರ್ ಚೆಕ್ ಮಾಡುವ ವ್ಯವಸ್ಥೆಯೇ ಇರಲಿಲ್ಲ. ಆದರೆ ಅವರು ಡ್ರೆಸ್ ನ್ನು ಮಾತ್ರವೇ ನೋಡುತ್ತಿದ್ದರು ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಇದರ ಬಗ್ಗೆ ನಾನು ಶಿಕ್ಷಣ ಸಚಿವರಿಗೆ ದೂರು ನೀಡುತ್ತೇನೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ಇನ್ನಷ್ಟು ಸುದ್ದಿಗಳು…

ಸಿಲಿಕಾನ್ ಸಿಟಿ ಫ್ಲೈಓವರ್ ನಲ್ಲಿ ಆಕ್ಸಿಡೆಂಡ್ ಆದ ಜಾಗದಲ್ಲಿಯೇ ಕಾರು ನಿಲ್ಲಿಸಿ ಯುವಕ, ಯುವತಿಯರ ಡಾನ್ಸ್!

ಮೋದಿಜಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದವರಿಗಿಂತ ಉದ್ಯೋಗ ಕೇಳಿದವರ ಸಂಖ್ಯೆಯೇ ಹೆಚ್ಚು!

ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಮುತ್ತಿಟ್ಟವನಿಗಾಗಿ ಶೋಧ ನಡೆಸುತ್ತಿರುವ ಪೊಲೀಸರು!

ಭಯಾನಕ ಘಟನೆ: ಜೋಡಿಯನ್ನು ದೆಹಲಿಯಿಂದ ಅಪಹರಿಸಿ, ಮಧ್ಯಪ್ರದೇಶದಲ್ಲಿ ಹತ್ಯೆ ಮಾಡಿ ವಿಭಿನ್ನ ರಾಜ್ಯಗಳಲ್ಲಿ ಎಸೆದ ಪಾಪಿಗಳು

ಅತ್ಯಾಚಾರ ಯತ್ನ ವಿಫಲವಾದಾಗ ವೃದ್ಧೆಯನ್ನು ಕೊಂದು ಮೃತದೇಹದ ಮೇಲೆಯೇ ಹೇಯ ಕೃತ್ಯ

2023ರಲ್ಲಿ ಎರಡೂ ಪಕ್ಷಗಳು ಜೆಡಿಎಸ್ ಮನೆ ಬಾಗಿಲಿಗೆ ಬರುತ್ತದೆ: ಹೆಚ್.ಡಿ.ದೇವೇಗೌಡ ಗುಡುಗು

ಯಾದಗಿರಿ ಪ್ರಕರಣಕ್ಕೆ ತಿರುವು: ಮಹಿಳೆಯ ಮೇಲೆ ಹಲ್ಲೆ ಮಾತ್ರವಲ್ಲ, ಸಾಮೂಹಿಕ ಅತ್ಯಾಚಾರವೂ ನಡೆದಿತ್ತು!

ಇತ್ತೀಚಿನ ಸುದ್ದಿ