12 ವರ್ಷಗಳ ಬಳಿಕ ಒಂದಾದ ತಾಯಿ ಮಗ | ವಿಶ್ವಾಸದ ಮನೆಯಲ್ಲೊಂದು ಭಾವನಾತ್ಮಕ ಸನ್ನಿವೇಶ - Mahanayaka
3:30 PM Wednesday 5 - February 2025

12 ವರ್ಷಗಳ ಬಳಿಕ ಒಂದಾದ ತಾಯಿ ಮಗ | ವಿಶ್ವಾಸದ ಮನೆಯಲ್ಲೊಂದು ಭಾವನಾತ್ಮಕ ಸನ್ನಿವೇಶ

udupi press club
18/09/2021

ಉಡುಪಿ: 12 ವರ್ಷಗಳ ಹಿಂದೆ ಮನೆಯವರಿಂದ ದೂರವಾಗಿದ್ದ ತಾಯಿಯೊಬ್ಬರು, ತಮ್ಮ ಕುಟುಂಬವನ್ನು ಸೇರಿಕೊಂಡಿದ್ದು, ಉಡುಪಿಯ ‘ವಿಶ್ವಾಸದ ಮನೆ’ ಕುಟುಂಬಸ್ಥರಿಂದ ದೂರವಾಗಿದ್ದ ತಾಯಿಯನ್ನು ತನ್ನ ಕುಟುಂಬಕ್ಕೆ ಸೇರಿಸಿದೆ.

ಮಾನಸಿಕ ಸ್ಥಿಮಿತತೆ ಕಳೆದುಕೊಂಡು 12 ವರ್ಷಗಳ ಹಿಂದೆ ಅಸ್ಸಾಂನ ದುಬ್ರಿಯಿಂದ ಮಂಗಳೂರಿಗೆ ಬಂದಿದ್ದ ಮಹಿಳೆ ಕೊನೆಗೂ ಅವರ ಕುಟುಂಬ ಸೇರಿಕೊಂಡಿದ್ದಾರೆ ಎಂದು ವಿಶ್ವಾಸದ ಮನೆ ಅನಾಥಾಶ್ರಾಮಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಪಾಸ್ಟರ್ ಸುನಿಲ್ ಜಾನ್ ಡಿಸೋಜಾ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.14, 2009ರಂದು ಮಂಗಳೂರಿನಲ್ಲಿ ಮಾನಸಿಕ ಅಸ್ವಸ್ಥೆಯಾಗಿ ಬೀದಿಯಲ್ಲಿ ಅಲೆಯುತ್ತಿದ್ದ ಮಲ್ಲಿಕಾ ಖುತೂನ್‌ ಅವರನ್ನು ವಿಶ್ವಾಸದ ಮನೆಯ ಸಂಸ್ಥಾಪಕ ಸುನಿಲ್ ಜಾನ್ ಡಿಸೋಜಾ ವಿಶ್ವಾಸದ ಮನೆ ಅನಾಥಾಲಯಕ್ಕೆ ಕರೆತಂದು ಆರೈಕೆ ಮಾಡಿದ್ದರು. ಪರಿಣಾಮ, ತಿಂಗಳಲ್ಲಿ ಅವರು ಗುಣಮುಖರಾಗಿದ್ದರು. ಗುಣಮುಖರಾದ ಬಳಿಕ ತಮ್ಮ ಮನೆಗೆ ಹೋಗಬೇಕು ಎಂದು ಅವರು ಒತ್ತಾಯಿಸುತ್ತಿದ್ದರು ಎಂದು ಸುನಿಲ್ ಜಾನ್ ಡಿಸೋಜಾ ತಿಳಿಸಿದರು.

ಅವರು ಬಂಗಾಳಿ ಭಾಷೆಯಲ್ಲಿ ಮಾತನಾಡುತ್ತಿದ್ದ ಕಾರಣ ಮಹಿಳೆಯ ವಾಸ ಸ್ಥಳದ ಪತ್ತೆ ಸಮಸ್ಯೆಯಾಗಿತ್ತು. ಬಳಿಕ ಮಹಿಳೆ ಅಸ್ಸಾಂನ ದುಬ್ರಿಯಲ್ಲಿ ಮನೆ ಇರುವುದಾಗಿ ಸ್ಪಷ್ಟಪಡಿಸಿದ ಬಳಿಕ, ಅಲ್ಲಿನ ಪೊಲೀಸ್ ಠಾಣೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಮಹಿಳೆಯ ಪತ್ತೆಗೆ ನೆರವು ಕೋರಲಾಗಿತ್ತು. ಆದರೂ, ಅವರ ಕುಟುಂಬಸ್ಥರ ಪತ್ತೆ ಸಾಧ್ಯವಾಗಿರಲಿಲ್ಲ.ಬಳಿಕ ಮಣಿಪಾಲದ ವೈದ್ಯರಾದ ಡಾ.ಶರ್ಮಾ ನೇತೃತ್ವದ ತಂಡ ಅನಾಥಾಶ್ರಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ಮಾಡುವಾಗ ಮಹಿಳೆಯ ಪೂರ್ವಾಪರಗಳನ್ನು ವಿಚಾರಿಸಿ, ಅಸ್ಸಾಂನ ದುಬ್ರಿಯಲ್ಲಿರುವ ಪರಿಚಿತರ ಮೂಲಕ ಮಹಿಳೆಯ ಕುಟುಂಬ ಸದಸ್ಯರನ್ನು ಪತ್ತೆ ಹಚ್ಚಲಾಯಿತು ಎಂದು ಸುನಿಲ್ ಜಾನ್ ಡಿಸೋಜ ಮಾಹಿತಿ ನೀಡಿದರು.

ಸೆ.19ರಂದು ಮಲ್ಲಿಕಾ ಖುತೂನ್‌ ಅವರ ಮಗ ತಹಜುದ್ದೀನ್ ಅಸ್ಸಾಂನಿಂದ ಉಡುಪಿಗೆ ಬಂದು ತಾಯಿಯನ್ನು ಭೇಟಿಯಾದರು. 12 ವರ್ಷಗಳ ಬಳಿಕ ತಮ್ಮ ತಾಯಿಯನ್ನು ನೋಡಿ ಖುಷಿಪಟ್ಟರು. ಇದೊಂದು ಭಾವನಾತ್ಮಕ ಸನ್ನಿವೇಶವಾಗಿತ್ತು ಎಂದು ಡಿಸೋಜಾ ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಶಾರ್ಟ್ಸ್, ಟೀಶರ್ಟ್ ಧರಿಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ | ಆ ಬಳಿಕ ಪರೀಕ್ಷಾ ಕೇಂದ್ರದಲ್ಲಿ ನಡೆದದ್ದೇನು ಗೊತ್ತಾ?

ಸಿಲಿಕಾನ್ ಸಿಟಿ ಫ್ಲೈಓವರ್ ನಲ್ಲಿ ಆಕ್ಸಿಡೆಂಡ್ ಆದ ಜಾಗದಲ್ಲಿಯೇ ಕಾರು ನಿಲ್ಲಿಸಿ ಯುವಕ, ಯುವತಿಯರ ಡಾನ್ಸ್!

ಸಿನಿಮಾ, ನಾಟಕ ಪ್ರದರ್ಶನಗಳಿಗೆ ಪೂರ್ಣ ಪ್ರಮಾಣದ ಅವಕಾಶ ನೀಡಿ | ದೇವದಾಸ್ ಕಾಪಿಕಾಡ್ ಒತ್ತಾಯ

ಸೆ.19ರಂದು ರಾಷ್ಟ್ರೀಯ ಶಿಕ್ಷಣ ನೀತಿ(NEP) 2020ರ ಕಾರ್ಯಾಗಾರ ಮತ್ತು ದೃಶ್ಯಕಲಾ ಶಿಕ್ಷಣದ ಬೆಳವಣಿಗೆಯ ಚಿಂತನ, ಮಂಥನ

JCI: “ಕ್ಷಯ ಮುಕ್ತ ಭಾರತ” ಜಾಗೃತಿ ಮೂಡಿಸಲಿರುವ ‘ಹೆಜ್ಜೆ ಬದಲಾದಾಗ’ ಕಿರುಚಿತ್ರ

ಇತ್ತೀಚಿನ ಸುದ್ದಿ