ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊಲೆ ಬೆದರಿಕೆ: ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅರೆಸ್ಟ್ - Mahanayaka

ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊಲೆ ಬೆದರಿಕೆ: ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅರೆಸ್ಟ್

dharmendra
19/09/2021

ಮಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹಾಗೂ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ದೇವಸ್ಥಾನಗಳ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಹೊಟೇಲೊಂದರಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ ಸ್ವಾಮೀ… ನೀವ್ಯಾವ ಲೆಕ್ಕ? ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ಗಾಂಧೀಜಿಯನ್ನೇ ಹತ್ಯೆ ಮಾಡಲಾಗುತ್ತದೆ ಎಂದಾದರೆ, ನಿಮ್ಮ ವಿಚಾರದಲ್ಲಿ ನಾವು ಆಲೋಚನೆ ಮಾಡಲು ಸಾಧ್ಯವಿಲ್ಲ  ಎಂದು ಅಂದುಕೊಂಡಿದ್ದೀರಾ ನೀವು? ಎಂದು ಪ್ರಶ್ನಿಸಿದ್ದರು.

ಧರ್ಮೇಂದ್ರ ಅವರ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ ಎಂದು ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದ್ದರು. ಧರ್ಮೇಂದ್ರ ಸೇರಿದಂತೆ ಹಲವರ ವಿರುದ್ಧ ಬಿಜೆಪಿ ಪ್ರಕರಣ ದಾಖಲಿಸಿಕೊಂಡಿದೆ. ಇದು ಖಂಡನೀಯ. ಸುದ್ದಿಗೋಷ್ಠಿಯಲ್ಲಿಯೇ ಇಲ್ಲದ ನನ್ನಂತಹ ಹಲವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ರಾಜೇಶ್ ಪವಿತ್ರನ್ ವಿಡಿಯೋ ಮೂಲಕ ಹೇಳಿದ್ದರು. ಇದಾದ ಕೆಲವೇ ಗಂಟೆಗಳೊಳಗೆ  ರಾಜೇಶ್ ಪವಿತ್ರನ್ ನನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಬೈಕ್ ನಲ್ಲಿ ಜೊತೆಯಾಗಿ ಪ್ರಯಾಣಿಸಿದ ಅನ್ಯಧರ್ಮೀಯ ಯುವಕ, ಯುವತಿಯ ಮೇಲೆ ದುಷ್ಕರ್ಮಿಗಳಿಂದ ದಾಳಿ

‘ಕಾರ್ಯಕ್ರಮ ಮುಗಿಯಿತು’: ಮೋದಿ ಜನ್ಮದಿನಾಚರಣೆ ಕೊವಿಡ್ ಲಸಿಕೆ ಬಗ್ಗೆ ರಾಹುಲ್ ಕಿಡಿ

ಸ್ವಯಂಕೃತ ಅಪರಾಧಗಳಿಂದ ಕಾಂಗ್ರೆಸ್ ವಿನಾಶದ ಅಂತಿಮ ಕಾಲಘಟ್ಟದಲ್ಲಿದೆ | ಅರುಣ್ ಸಿಂಗ್

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮುಖ್ಯೋಪಾಧ್ಯಾಯನಿಗೆ ಪೊಲೀಸರ ಎದುರೇ ಹಿಗ್ಗಾಮುಗ್ಗಾ ಥಳಿಸಿದ ಜನರು!

ಅಮಾನವೀಯ ಘಟನೆ: ಮಕ್ಕಳ ಹೆಸರಿಗೆ ಆಸ್ತಿ ಬರೆದ ಬಳಿಕ ತಂದೆಯನ್ನು ಕೋಣೆಯೊಳಗೆ ಬಂಧಿಸಿಟ್ಟ ಮಕ್ಕಳು!

ಪತಿಯ ಇನ್ನೊಂದು ಮುಖ ಬಯಲಾಗುತ್ತಿದ್ದಂತೆಯೇ ನೇಣಿಗೆ ಶರಣಾದ 4 ತಿಂಗಳ ಗರ್ಭಿಣಿ

ಬೋರ್ ವೇಲ್ ಗೆ ಬಿದ್ದು ಮಗು ಸಾವು ಪ್ರಕರಣಕ್ಕೆ ತಿರುವು: ತಂದೆಯಿಂದಲೇ ನಡೆದಿತ್ತು ಹೀನ ಕೃತ್ಯ

ಇತ್ತೀಚಿನ ಸುದ್ದಿ