ಪಂಜಾಬ್ ನಲ್ಲಿ ಪ್ರಥಮ ದಲಿತ ಸಿಎಂ ಆಗಿ ಚರಣಜಿತ್ ಸಿಂಗ್ ಆಯ್ಕೆ | ದೇಶದ್ಯಾದ್ಯಂತ ‘ದಲಿತ ಸಿಎಂ’ ಚರ್ಚೆ
ಪಂಜಾಬ್: ಕ್ಯಾಪ್ಟನ್ ಅಮರಿಂದರ್ ಸಿಂಗ್ (Charanjit Singh Channi) ಪಂಜಾಬ್ ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ನೂತನ ಸಿಎಂ ಆಗಿ ಇಂದು ಚರಣಜಿತ್ ಸಿಂಗ್ ಆಯ್ಕೆಯಾಗಿದ್ದಾರೆ. ಈ ಮೂಲಕ ಪಂಜಾಬ್ ಪ್ರಥಮ ದಲಿತ ಸಿಎಂ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
49 ವರ್ಷ ವಯಸ್ಸಿನ ಚರಣಜಿತ್ ಸಿಂಗ್ ಅವರು, ಅಮರಿಂದರ್ ಸಿಂಗ್ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಹಾಗೂ ಕೈಗಾರಿಕಾ ತರಬೇತಿ ಸಚಿವರಾಗಿದ್ದರು. ಸಿಎಂ ರೇಸ್ ನಲ್ಲಿ ಘಟಾನುಘಟಿಗಳಿದ್ದರೂ ಚರಣಜಿತ್ ಸಿಂಗ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಅಚ್ಚರಿ ಸೃಷ್ಟಿಸಿತು.
ದೇಶಾದ್ಯಂತ ಸದ್ಯ ಜಾತಿಯ ಲೆಕ್ಕಚಾರದ ರಾಜಕೀಯ ಆರಂಭವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಜಾತಿಯೇ ಅಧಿಕಾರವನ್ನು ನಿರ್ಧರಿಸುವ ಸಾಧ್ಯತೆಗಳಿವೆ. ಮುಖ್ಯವಾಗಿ ‘ದಲಿತ ಸಿಎಂ’ ಎನ್ನುವ ವಿಚಾರಗಳು ದೇಶಾದ್ಯಂತ ಚರ್ಚೆಗೀಡಾಗುತ್ತಿದೆ. ಈ ನಡುವೆ ಕಾಂಗ್ರೆಸ್ ದಲಿತ ಸಿಎಂ ದಾಳವನ್ನು ಪಂಜಾಬ್ ನಲ್ಲಿ ಉರುಳಿಸಿದೆ. ಈ ಮೂಲಕ ಎಲ್ಲ ರಾಜ್ಯಗಳಲ್ಲಿಯೂ ದಲಿತ ಸಿಎಂ ನಿರೀಕ್ಷೆಯನ್ನು ಹುಟ್ಟು ಹಾಕಿದೆ ಎನ್ನಲಾಗುತ್ತಿದೆ.
ಪಂಜಾಬ್ ನಲ್ಲಿ ಶೇ.33ರಷ್ಟು ದಲಿತ ಜನಸಂಖ್ಯೆ ಹೊಂದಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ದಲಿತರ ಮತ ಕಾಂಗ್ರೆಸ್ ಗೆ ಮುಖ್ಯವಾಗಿದೆ. ಈ ನಡುವೆ ಅಕಾಲಿದಳ ಬಿಎಸ್ ಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು, ಹೀಗಾಗಿ ಪಂಜಾಬ್ ನಲ್ಲಿ ದಲಿತ ಸಿಎಂ ಮಾಡುವುದು ಕಾಂಗ್ರೆಸ್ ಗೆ ಕೂಡ ಅನಿವಾರ್ಯವಾಗಿದೆ. ಹೀಗಾಗಿ ಚರಣಜಿತ್ ಸಿಂಗ್ ಅವರನ್ನು ಸಿಎಂ ಮಾಡುವ ಮೂಲಕ ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ಇನ್ನಷ್ಟು ಸುದ್ದಿಗಳು…
ವಿಡಿಯೋದಲ್ಲಿರುವುದು ನಾನಲ್ಲ, ಅದೊಂದು ನಕಲಿ ವಿಡಿಯೋ: ಸದಾನಂದ ಗೌಡ ಸ್ಪಷ್ಟನೆ
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊಲೆ ಬೆದರಿಕೆ: ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅರೆಸ್ಟ್
ಬೈಕ್ ನಲ್ಲಿ ಜೊತೆಯಾಗಿ ಪ್ರಯಾಣಿಸಿದ ಅನ್ಯಧರ್ಮೀಯ ಯುವಕ, ಯುವತಿಯ ಮೇಲೆ ದುಷ್ಕರ್ಮಿಗಳಿಂದ ದಾಳಿ
‘ಕಾರ್ಯಕ್ರಮ ಮುಗಿಯಿತು’: ಮೋದಿ ಜನ್ಮದಿನಾಚರಣೆ ಕೊವಿಡ್ ಲಸಿಕೆ ಬಗ್ಗೆ ರಾಹುಲ್ ಕಿಡಿ
ಸ್ವಯಂಕೃತ ಅಪರಾಧಗಳಿಂದ ಕಾಂಗ್ರೆಸ್ ವಿನಾಶದ ಅಂತಿಮ ಕಾಲಘಟ್ಟದಲ್ಲಿದೆ | ಅರುಣ್ ಸಿಂಗ್
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮುಖ್ಯೋಪಾಧ್ಯಾಯನಿಗೆ ಪೊಲೀಸರ ಎದುರೇ ಹಿಗ್ಗಾಮುಗ್ಗಾ ಥಳಿಸಿದ ಜನರು!
ಯಾವುದೇ ಸಮುದಾಯ ಅಥವಾ ಧರ್ಮಗಳಿಗೆ ನೋವುಂಟು ಮಾಡಿದರೆ ಒಳ್ಳೆಯದಾಗುವುದಿಲ್ಲ | ಶೋಭಾ ಕರಂದ್ಲಾಜೆ