ದೆವ್ವ ಬಿಡಿಸುವ ನೆಪದಲ್ಲಿ ಕಾಡಿಗೆ ಕರೆದೊಯ್ದು 16ರ ಬಾಲಕಿಯ ಮೇಲೆ ಸಾಧುವಿನಿಂದ ಅತ್ಯಾಚಾರ!
ಥಾಣೆ: ಬಾಲಕಿಯ ದೇಹದಲ್ಲಿ ಆಕೆಯ ಚಿಕ್ಕಪ್ಪನ ದೆವ್ವ ಸೇರಿಕೊಂಡಿದೆ. ಅದನ್ನು ಬಿಡಿಸಬೇಕು ಎಂದು ನೆಪ ಹೇಳಿದ ದೇವಮಾನವನೋರ್ವ 16 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಥಾಣೆಯ ಭೀವಂಡಿಯಲ್ಲಿ ನಡೆದಿದೆ.
ಆರೋಪಿ ದೇವಮಾನವನಿಗೆ ಬಾಲಕಿಯ ತಾಯಿ ಪರಿಚಯಸ್ಥಳಾಗಿದ್ದಳು ಎಂದು ಹೇಳಲಾಗಿದೆ. ಬಾಲಕಿಯು ಅನಾರೋಗ್ಯದಿಂದ ಬಳಲುತ್ತಿದ್ದು, ಈ ಬಗ್ಗೆ ಸಲಹೆ ಕೇಳಲು ಬಾಲಕಿಯ ತಾಯಿ ದೇವಮಾನವ ಸಾಧುವೊಬ್ಬನ ಬಳಿಗೆ ಹೋಗಿದ್ದಾಳೆ. ಈ ವೇಳೆ ಆತ, ನಿನ್ನ ಮಗಳ ದೇಹದಲ್ಲಿ ಆಕೆಯ ಚಿಕ್ಕಪ್ಪನ ದೆವ್ವ ಇದೆ ಅದನ್ನು ಬಿಡಿಸಬೇಕು ಎಂದು ಹೇಳಿದ್ದಾನೆ.
ಆತನ ಮಾತಿಗೆ ಒಪ್ಪಿದ್ದ ಬಾಲಕಿಯ ತಾಯಿ ಮಗಳನ್ನು ಆತನೊಂದಿಗೆ ಕಳುಹಿಸಿದ್ದಾಳೆ. ಬಾಲಕಿಯನ್ನು ಕಾಡು ಪ್ರದೇಶಕ್ಕೆ ಕರೆದೊಯ್ದ ಸಾಧು, ಪೂಜೆಯ ನೆಪದಲ್ಲಿ ಆಕೆಯ ಮೇಲೆ ಕ್ರೂರವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಬಾಲಕಿ ಹೇಳಿದ್ದಾಳೆ.
ಘಟನೆಯಿಂದ ತೀವ್ರವಾಗಿ ಝರ್ಜರಿತಳಾದ ಬಾಲಕಿಯು, ನಂಬಿಕೆಯ ಹೆಸರಿನಲ್ಲಿ ತನ್ನ ಮೇಲಾದ ಅತ್ಯಾಚಾರವನ್ನು ಸಹಿಸಲು ಸಾಧ್ಯವಾಗದೇ ನೇರವಾಗಿ ಇಲ್ಲಿನ ನಾರ್ಪೋಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನೆ ಸಂಬಂಧ ಆರೋಪಿ ದೇವಮಾನವ ಸಾಧು ಹಾಗೂ ತನ್ನ ಮೂಢ ನಂಬಿಕೆಯಿಂದ ತನ್ನ ಮಗಳ ಮೇಲೆಯೇ ಅತ್ಯಾಚಾರಕ್ಕೆ ನೆರವಾದ ಬಾಲಕಿಯ ತಾಯಿ ಹಾಗೂ ಆಕೆಗೆ ಸಹಕರಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on
ಇನ್ನಷ್ಟು ಸುದ್ದಿಗಳು…
2 ವರ್ಷದ ದಲಿತ ಮಗು ದೇವಸ್ಥಾನ ಪ್ರವೇಶಿಸಿದಕ್ಕೆ ದಂಡ: ಕ್ರಮಕೈಗೊಳ್ಳುವ ತಾಕತ್ ಇಲ್ಲದೇ ಭಾಷಣ ಬಿಗಿದು ಹೋದ ಅಧಿಕಾರಿಗಳು
ಸುಳ್ಳು ಜಾತಿ ಪ್ರಮಾಣ ಪತ್ರ: ತಹಶೀಲ್ದಾರ್ ಸೇರಿದಂತೆ ಐವರ ವಿರುದ್ಧ ಎಫ್ ಐಆರ್
ಹಿಂದೂ ಧರ್ಮಕ್ಕೆ ಅಪಾಯ ಇದೆ ಎನ್ನುವುದು ಕಾಲ್ಪನಿಕ: ಕೇಂದ್ರ ಸರ್ಕಾರ ಸ್ಪಷ್ಟನೆ
ಗಣೇಶ ವಿಸರ್ಜನೆಗೆ ಸಮುದ್ರಕ್ಕೆ ಹಾರಿದ ಮೂವರು ಮಕ್ಕಳು ನೀರುಪಾಲು!
ಬೈಕ್ ನಲ್ಲಿ ಜೊತೆಯಾಗಿ ಪ್ರಯಾಣಿಸಿದ ಅನ್ಯಧರ್ಮೀಯ ಯುವಕ, ಯುವತಿಯ ಮೇಲೆ ದುಷ್ಕರ್ಮಿಗಳಿಂದ ದಾಳಿ