“ನನ್ನ ಪಂಚೆ ಕಳಚ್ಕೊಂಡಿದೆ, ಈಶ್ವರಪ್ಪ…” | ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ
ಬೆಂಗಳೂರು: ಸದನದ ಚರ್ಚೆಯ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾಡುವ ಕೆಲವು ಹಾಸ್ಯಗಳು ನಿದ್ದೆಯಲ್ಲಿದ್ದವರನ್ನೂ ಎದ್ದು ಕೂರಿಸುತ್ತದೆ. ಈ ಬಾರಿಯೂ ಸಿದ್ದರಾಮಯ್ಯನವರು ಸದನವನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಸದನದಲ್ಲಿ ತಮ್ಮ ಪಂಚೆಯ ರಹಸ್ಯವನ್ನು ಬಯಲು ಮಾಡುವ ಮೂಲಕ ಇಡೀ ಸದನವನ್ನೇ ನಗೆಗಡಲಲ್ಲಿ ತೇಲಿಸಿದರು.
ಸಿದ್ದರಾಮಯ್ಯನವರು ಸದನವನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗುಟ್ಟಾಗಿ ಬಂದು, ನಿಮ್ಮ ಪಂಚೆ ಕಳಚಿಕೊಳ್ತಿದೆ ಎಂದು ಕಿವಿಯಲ್ಲಿ ಹೇಳಿ ಹೋಗಿದ್ದಾರೆ. ಈ ವೇಳೆ ಪಂಚೆ ಸಡಿಲವಾಗಿರುವುದು ಸಿದ್ದರಾಮಯ್ಯನವರಿಗೆ ತಿಳಿದಿದೆ. ಡಿ.ಕೆ.ಶಿವಕುಮಾರ್ ಯಾರಿಗೂ ಗೊತ್ತಾಗಬಾರದು ಎಂದು ಗುಟ್ಟಾಗಿ ಹೇಳಿದ್ದರೆ, ಇತ್ತ ಸಿದ್ದರಾಮಯ್ಯನವರು, ನನ್ನ ಪಂಚೆ ಕಳಚ್ಕೊಂಡಿದೆ, ಈಶ್ವರಪ್ಪ… ಅಂತ ಹೇಳಿಯೇ ಬಿಟ್ಟರು. ಅಲ್ಲಿಂದ ಪಂಚೆಯ ಮೇಲೆ ಚರ್ಚೆ ಆರಂಭವಾಯ್ತು.
ನನ್ನ ಪಂಚೆ ಕಳಚ್ಕೊಳ್ತಿದೆ ಈಶ್ವರಪ್ಪ, ಇತ್ತೀಚೆಗೆ ಯಾಕೋ ಹೊಟ್ಟೆ ಸ್ವಲ್ಪ ದಪ್ಪ ಆಯ್ತು ಅದಕ್ಕೆ ಪಂಚೆ ಕಳಚ್ಕೊಳ್ತಿದೆ ಎಂದು ಸಿದ್ದರಾಮಯ್ಯ ಈಶ್ವರಪ್ಪನವರ ಹೆಸರು ಪ್ರಸ್ತಾಪಿಸಿ ಹೇಳಿದರು. ಈಗ ಈಶ್ವರಪ್ಪ ಸಹಿತ ಸದನದಲ್ಲಿದ್ದ ಎಲ್ಲ ಸದಸ್ಯರು ಬಿದ್ದು ಬಿದ್ದು ನಕ್ಕರು.
ಈ ವೇಳೆ ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್ ಅವರು ಮಧ್ಯೆ ಮಾತನಾಡಿ, ನಮ್ಮ ಅಧ್ಯಕ್ಷರು(ಡಿಕೆಶಿ) ಪಂಚೆಯ ಬಗ್ಗೆ ಗುಟ್ಟಾಗಿ ಕಿವಿಯಲ್ಲಿ ಹೇಳಿ ಹೋದರು. ಆದ್ರೆ, ಸಿದ್ದರಾಮಯ್ಯನವರು ಪಂಚೆ ಕಳಚ್ಕೊಳ್ತಿದೆ ಎಂದ ಎಲ್ಲರಿಗೂ ಹೇಳಿ, ಅವರ ಶ್ರಮವೆಲ್ಲ ವ್ಯರ್ಥ ಮಾಡಿದರು ಎಂದು ನಗೆ ಚಟಾಕಿ ಸಿಡಿಸಿದರು. ಅಲ್ಲದೇ ಆಡಳಿತ ಪಕ್ಷದವರು ನಮ್ಮ ಪಂಚೆ ಕಳಚ್ತಾ ಇದ್ದಾರೆ ಎಂದೂ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಸಿದ್ದರಾಮಯ್ಯ, ಅವರು ಪಾಪಾ ಟ್ರೈ ಮಾಡ್ತಿದ್ದಾರೆ. ಆದರೆ ಅವರಿಂದ ಅದು ಸಾಧ್ಯ ಆಗ್ತಿಲ್ಲ. ನನ್ನ ಪಂಚೆ ತಾನಾಗಿಯೇ ಕಳಚ್ಕೊಳ್ತು ಎಂದರು.
ನನ್ನ ಪಂಚೆ ಕಳಚ್ಕೊಳ್ತಿರ್ಲಿಲ್ಲ, ಇತ್ತೀಚೆಗೆ ಕೊರೊನಾ ರೋಗ ಬಂದ ಮೇಲೆ ನನ್ನ ದೇಹದ ತೂಕ ಹೆಚ್ಚಾಯ್ತು ಹಾಗಾಗಿ ಹೊಟ್ಟರ ದಪ್ಪ ಆಗಿದೆ. ಹಾಗಾಗಿ ಪಂಚೆ ನಿಂತ್ಕೊಳ್ತಿಲ್ಲ ಎಂದು ಹೇಳಿದರು. ಈ ವೇಳೆ ಕೆಲವು ಸದಸ್ಯರ ಸಹಾಯ ಮಾಡಬೇಕೇ? ಎಂದು ಪ್ರಶ್ನಿಸಿದರು. ಈ ವೇಳೆ, ಇಲ್ಲ, ಇಂತಹ ಕೆಲಸಕ್ಕೆ ನಿಮ್ಮ ಸಹಾಯ ಕೇಳುವುದಿಲ್ಲ ಎಂದರು. ಒಟ್ಟಿನಲ್ಲಿ ಸಿದ್ದರಾಮಯ್ಯನವರ ಪಂಚೆ ವಿಚಾರ ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on
ಇನ್ನಷ್ಟು ಸುದ್ದಿಗಳು…
ಬೆಂಗಳೂರು: ಅಪಾರ್ಟ್ಮೆಂಟ್ ಅಗ್ನಿ ಅವಘಡ ಪ್ರಕರಣಕ್ಕೆ ಹೊಸ ತಿರುವು: ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿಲ್ಲ!
ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದ ತಾಯಿ, ಮಗ ದಾರುಣ ಸಾವು
ಯುವತಿಯೊಂದಿಗಿನ ಫೋಟೋ ಲೀಕ್ ಆಗುವ ಭೀತಿಯಿಂದ ಸ್ವಾಮೀಜಿ ಆತ್ಮಹತ್ಯೆ? | ಡೆತ್ ನೋಟ್ ನಲ್ಲಿ ಏನಿತ್ತು ಗೊತ್ತಾ?
ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್ ಶುಲ್ಕ ಮನ್ನಾ | ತಮಿಳುನಾಡು ಸಿಎಂ ಸ್ಟಾಲಿನ್ ಘೋಷಣೆ
ವಿಷ ಸೇವಿಸಿದ್ದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಬಾಲಕಿ ಚಿಕಿತ್ಸೆ ಫಲಿಸದೇ ಸಾವು
2 ವರ್ಷದ ದಲಿತ ಮಗು ದೇವಸ್ಥಾನ ಪ್ರವೇಶಿಸಿದಕ್ಕೆ ದಂಡ: ಕ್ರಮಕೈಗೊಳ್ಳುವ ತಾಕತ್ ಇಲ್ಲದೇ ಭಾಷಣ ಬಿಗಿದು ಹೋದ ಅಧಿಕಾರಿಗಳು