ಕೃಷ್ಣ ಬೆಣ್ಣೆ ಕದ್ದರೆ ತುಂಟಾಟ, ಈ ಬಾಲಕ ಹಸಿವಿನಿಂದ ತಿಂಡಿ ಕದ್ದರೆ ಅಪರಾಧವೇ? | ನ್ಯಾಯಾಧೀಶರ ಪ್ರಶ್ನೆ
ಬಿಹಾರ: ಸಿಹಿ ತಿಂಡಿ ಕದ್ದ ಆರೋಪದಲ್ಲಿ ಬಂಧಿತನಾಗಿದ್ದ ಬಾಲ ಆರೋಪಿಯ ವಿಚಾರಣೆ ನಡೆದಿದ್ದು, ಈ ವೇಳೆ ನ್ಯಾಯಧೀಶರು ಹಲವು ಉದಾಹರಣೆಗಳನ್ನು ನೀಡಿ, ಬಾಲಕನನ್ನು ಖುಲಾಸೆಗೊಳಿಸಿದ ಘಟನೆ ಬಿಹಾರದ ಕೋರ್ಟ್ ನಲ್ಲಿ ನಡೆದಿದೆ.
ಬಿಹಾರದ ನಲಂದಾ ಜಿಲ್ಲೆಯ ಹರ್ನೌಟ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಬಾಲಕನೋರ್ವನನ್ನು ಸಿಹಿ ತಿಂಡಿ ಕದ್ದು ತಿಂದ ಆರೋಪದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಬಾಲ ನ್ಯಾಯಮಂಡಳಿ ನ್ಯಾಯಾಧೀಶರಾದ ಮನ್ವೇಂದ್ರ ಮಿಶ್ರಾ, ಶ್ರೀಕೃಷ್ಣ ಪರಮಾತ್ಮ ಬೆಣ್ಣೆ ಕಳ್ಳತನದ ಘಟನೆಯನ್ನು ಉದಾಹರಣೆಯಾಗಿ ನೀಡಿದರು.
ಶ್ರೀಕೃಷ್ಣ ಬೆಣ್ಣೆ ಕದ್ದು ತಿನ್ನುವುದು ತುಂಟತನ ಎಂದು ಒಪ್ಪಲಾಗಿದೆ ಅಂದ ಮೇಲೆ ಬಾಲಕ ಅದರಲ್ಲೂ ಹಸಿವಿನಿಂದ ಬಳಲುತ್ತಿದ್ದ ಬಾಲಕ ಸಿಹಿ ತಿಂಡಿ ಕದ್ದು ತಿಂದಿದ್ದನ್ನು ಅಪರಾಧ ಎಂದು ಹೇಗೆ ಪರಿಗಣಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಶ್ರೀಕೃಷ್ಣನ ಕತೆಯನ್ನು ಒಪ್ಪಿಕೊಳ್ಳುವ ನಾವು ಈ ಬಾಲಕನಿಗೆ ಶಿಕ್ಷೆ ನೀಡಿದರೆ ಅದು ಇಬ್ಭಗೆಯ ನೀತಿ ಆಗುತ್ತದೆ ಎಂದರು.
ಜೊತೆಗೆ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಯ ನಡೆಯ ಬಗ್ಗೆಯೂ ವಿಪರೀತ ಅಸಮಾಧಾನ ಹೊರಹಾಕಿದ ಕೋರ್ಟ್, ಇಂತಹ ಪ್ರಕರಣಗಳಲ್ಲಿ ಎಫ್ ಐಆರ್ ದಾಖಲಿಸುವ ಬದಲು ಠಾಣೆಯಲ್ಲಿಯೇ ಸಂಧಾನ ಕಾರ್ಯ ನಡೆಸುವುದು ಹೆಚ್ಚು ಸೂಕ್ತವಿತ್ತು ಎಂದು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಅಸ್ಪೃಶ್ಯತೆ ಅನಿಷ್ಟ ಪದ್ಧತಿ ಅದನ್ನು ತೊಲಗಿಸೋಣ | ಗ್ರಾಮಸ್ಥರಿಗೆ ಪ್ರತಿಜ್ಞೆ ಮಾಡಿಸಿದ ಪೊಲೀಸರು
ಅ.3ರಿಂದ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಶೇ.100ರಷ್ಟು ಹಾಜರಾತಿಗೆ ಅವಕಾಶ | ಬಸವರಾಜ ಬೊಮ್ಮಾಯಿ
ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು ಎಂದ ಉತ್ತರ ಪ್ರದೇಶ ಸಚಿವ!
ಪೆಟ್ರೋಲ್, ಡೀಸೆಲ್ ಗೆ ನೀರು ಬೆರಕೆ | ಪೆಟ್ರೋಲ್ ಬಂಕ್ ಮಾಲಿಕನ ವಿರುದ್ಧ ಗ್ರಾಹಕರಿಂದ ತೀವ್ರ ಆಕ್ರೋಶ
ನ್ಯಾಯಾಲಯದ ಆವರಣದಲ್ಲಿ ಗುಂಡಿನ ದಾಳಿ: ಗ್ಯಾಂಗ್ ಸ್ಟಾರ್ ಜಿತೇಂದರ್ ಗೋಗಿ ಸಹಿತ ನಾಲ್ವರು ಸಾವು
ಬಿಜೆಪಿ ಚುನಾವಣೆಗೆ ಮಾತ್ರ ಹಿಂದುಳಿದ ವರ್ಗಗಳನ್ನು ಬಳಸುತ್ತಿರುವುದು ಬಯಲಾಗಿದೆ | ಮಾಯಾವತಿ ಆಕ್ರೋಶ
ಬೆಂಗಳೂರಿನಲ್ಲಿ ಮತ್ತೊಂದು ಭಾರೀ ಅಗ್ನಿ ದುರಂತ | ಕೆಮಿಕಲ್ ಫ್ಯಾಕ್ಟರಿಯ ಬಾಯ್ಲರ್ ಸ್ಫೋಟ