ಅಮೆರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ ಆದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಮೂರು ದಿನಗಳ ಅಮೆರಿಕಾ ಪ್ರವಾಸ ಮುಗಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಭಾರತಕ್ಕೆ ವಾಪಾಸ್ಸಾದರು. ಇಂದು ಮಧ್ಯಾಹ್ನ 12: 15ಕ್ಕೆ ದೆಹಲಿಯ ವಿಮಾನನಿಲ್ದಾಣದಲ್ಲಿ ವಿಶೇಷ ವಿಮಾನದಲ್ಲಿ ಪ್ರಧಾನಿ ಮೋದಿ ಭಾರತಕ್ಕೆ ಆಗಮಿಸಿದರು.
ಕೋವಿಡ್ ಆರಂಭವಾದ ಬಳಿಕ ಮೋದಿ ಅವರು ತಮ್ಮ ವಿದೇಶ ಪ್ರವಾಸಕ್ಕೆ ಕಡಿವಾಣ ಹಾಕಿದ್ದರು. ಕಳೆದ ಎರಡು ವರ್ಷದಲ್ಲಿ ಒಮ್ಮೆ ಮಾತ್ರ ಬಾಂಗ್ಲದೇಶಕ್ಕೆ ಪ್ರವಾಸ ಮಾಡಿದ್ದನ್ನು ಹೊರತು ಪಡಿಸಿ ಉಳಿದ ಯಾವ ದೇಶಗಳಿಗೂ ಭೇಟಿ ನೀಡಿರಲಿಲ್ಲ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಕಳೆದ ಮೂರು ದಿನಗಳ ಹಿಂದೆ ಮೋದಿ ಅವರು ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ಅಲ್ಲಿ ಚತುಷ್ಠ ರಾಷ್ಟ್ರಗಳ ಮುಖ್ಯಸ್ಥರ ನಡುವೆ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ನಿನ್ನೆ ಸಂಜೆ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.
ಮೂರು ದಿನಗಳ ಪ್ರವಾಸದ ವೇಳೆ ಅಮೆರಿಕಾ ಹಾಗೂ ಇತರ ರಾಷ್ಟ್ರಗಳ ಜೊತೆಗೆ ಮಿಲಿಟರಿ ಸೇರಿ ಅನೇಕ ಒಪ್ಪಂದಗಳಿಗೆ ಪ್ರಧಾನಿ ಸಹಿ ಹಾಕಿದ್ದಾರೆ.ವಿದೇಶಿ ಪ್ರವಾಸ ಮುಗಿಸಿ ಮರಳಿದ ಪ್ರಧಾನಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬಿಜೆಪಿ ನಾಯಕರು ಅದ್ಧೂರಿ ಸ್ವಾಗತ ಕೋರಿದರು. ಪಲಮಾ ತಾಂತ್ರಿಕ ವಿಮಾನ ನಿಲ್ದಾಣದ ದ್ವಾರದ ಮುಂಭಾಗದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರತ್ತ ಮೋದಿ ಕೈ ಬೀಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಪುರುಷರ ಒಳ ಉಡುಪು ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ: ಸೃಷ್ಟಿಯಾಯ್ತು ಹೊಸ ವಿವಾದ
ಪ್ರೇಯಸಿಯ ಕೈಕಾಲು ಕಟ್ಟಿ ಸೂಟ್ ಕೇಸ್ ನಲ್ಲಿ ತುಂಬಿಸಿ ಕಾಡಿಗೆಸೆದ ಪ್ರಿಯಕರ!
ಪ್ರತಿಭಟನೆ ಹೆಸರಲ್ಲಿ ಜನರಿಗೆ ತೊಂದರೆ ಕೊಡುವುದು ಬೇಡ | ಭಾರತ್ ಬಂದ್ ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
‘ತಾಲಿಬಾನಿ ಬಿಜೆಪಿ’ ಭಾರತವನ್ನು ಆಳಲು ಸಾಧ್ಯವಿಲ್ಲ | ಮಮತಾ ಬ್ಯಾನರ್ಜಿ ಕಿಡಿ
ಕಿತ್ತು ತಿನ್ನುವ ಬಡತನ, ಉದ್ಯೋಗವೂ ಇಲ್ಲ | ನೊಂದ ಅಣ್ಣ ತಮ್ಮ ಆತ್ಮಹತ್ಯೆಗೆ ಶರಣು
ಅಕ್ಷರಸ್ಥರೇ ಇವತ್ತು ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಮೋಸ ಮಾಡುತ್ತಿದ್ದಾರೆ | ಡಾ.ಎಚ್.ಟಿ. ಪೋತೆ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಬೆಳ್ತಂಗಡಿಯಲ್ಲಿ ಕ್ಯಾಂಪಸ್ ಫ್ರಂಟ್ ತಹಶೀಲ್ದಾರ್ ಕಚೇರಿಗೆ ಮಾರ್ಚ್