ನೀರು ಎಂದು ಭಾವಿಸಿ ಪೆಟ್ರೋಲ್ ಕುಡಿದ ವೃದ್ಧೆ ಸಾವು!

ಬಂಟ್ವಾಳ: ನೀರು ಎಂದು ಭಾವಿಸಿ ಪೆಟ್ರೋಲ್ ಕುಡಿದ ವೃದ್ಧೆಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಸಂಪದ ಕೊಡಿ ಎಂಬಲ್ಲಿ ನಡೆದಿದ್ದು, ತಮ್ಮ ಮಗಳ ಮನೆಯಲ್ಲಿದ್ದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
79 ವರ್ಷ ವಯಸ್ಸಿನ ವೃದ್ಧೆ ಪದ್ಮಾವತಿ ಮೃತಪಟ್ಟ ವೃದ್ಧೆಯಾಗಿದ್ದು, ಮಗಳ ಮನೆಯಲ್ಲಿ ಹುಲ್ಲು ಕತ್ತರಿಸುವ ಯಂತ್ರಕ್ಕೆಂದು ಬಾಟಲಿಯಲ್ಲಿ ತುಂಬಿದ ಪೆಟ್ರೋಲ್ ಇಡಲಾಗಿತ್ತು. ವಯೋಸಹಜ ದೃಷ್ಟಿ ದೋಷ ಹೊಂದಿದ್ದ ಪದ್ಮಾವತಿ ಅವರು, ಪೆಟ್ರೋಲ್ ನ್ನು ನೀರು ಎಂದು ಭಾವಿಸಿ ಸೇವಿಸಿದ್ದರು.
ಪೆಟ್ರೋಲ್ ಸೇವನೆಯಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣವೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಮೃತರ ಅಳಿಯ ಉಮಾನಾಥ್ ಅವರು ನೀಡಿದ ದೂರಿನನ್ವಯ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಸುಳ್ಯ: ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯಿಂದ ಅಂಬೇಡ್ಕರ್ ಅವರ ಜೀವನ ಕುರಿತ ಹಾಡು ಬಿಡುಗಡೆ
ಯತೀಶ್ ಕುಮಾರ್ ರವರಿಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ ರವಿ ಡಿ. ಚೆನ್ನಣ್ಣನವರ್
ಕಾಂಗ್ರೆಸ್ ಇಲ್ಲದೇ ದೇಶ ಉಳಿಯಲ್ಲ ಅನ್ನೋದು ಅಸತ್ಯ, ಭಟ್ಟಂಗಿತನ: ಕನ್ಹಯ್ಯ ಕುಮಾರ್ ವಿರುದ್ಧ ನಟ ಚೇತನ್ ಆಕ್ರೋಶ
ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬಂದರೆ, ಮಹಿಳೆಯರ ಸಾಲ ಮನ್ನಾ | ಅನಿತಾ ಕುಮಾರಸ್ವಾಮಿ
ವ್ಯಕ್ತಿಗೆ ಕೊವಿಡ್ ಲಸಿಕೆಯ ಬದಲು ರೇಬಿಸ್ ನಿರೋಧಕ ಚುಚ್ಚು ಮದ್ದು ನೀಡಿದ ನರ್ಸ್!
ರಾಜ್ಯದಲ್ಲಿ ಮತ್ತೊಂದು ದಲಿತ ದೌರ್ಜನ್ಯ: ಬೆಳ್ಳಂಬೆಳಗ್ಗೆ ದಲಿತರ ಗುಡಿಸಲುಗಳನ್ನು ಧ್ವಂಸ ಮಾಡಿದ ಅಧಿಕಾರಿಗಳು