ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ಹಿಂದೂಗಳಿಗೆ ಅಮಿಷವೊಡ್ಡಿ ಮತಾಂತರ ನಡೆಸುತ್ತಿದ್ದಾರೆ | ಕೆ.ಎಸ್.ಈಶ್ವರಪ್ಪ ಆರೋಪ
ಶಿವಮೊಗ್ಗ: ಬಡತನವನ್ನೇ ಬಂಡವಾಳ ಮಾಡಿಕೊಂಡಿರುವ ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ಹಿಂದೂಗಳಿಗೆ ಅಮಿಷವೊಡ್ಡಿ ಮತಾಂತರ ನಡೆಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದು, ಮತಾಂತರ ತಡೆಗೆ ವಿಶೇಷ ಕಾನೂನು ತರಲಾಗುವುದು ಎಂದು ಅವರು ಹೇಳಿದರು.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತಾಂತರ ತಡೆಗಟ್ಟಲು ದಿಟ್ಟ ಹೆಜ್ಜೆ ಇಡುತ್ತೇವೆ. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಬಲವಂತದ ಮತಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ದೇಶದಲ್ಲಿ ಬಿಜೆಪಿ ಸಾಕಷ್ಟು ಬೆಳೆದಿದೆ. ಕಾರ್ಯಕರ್ತರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಉಪ ಚುನಾವಣೆಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಷಾಗಿರುವುದು ಸ್ವಾಭಾವಿಕ. ಬಿಜೆಪಿ ಕಾರ್ಯಕರ್ತರಲ್ಲಿ ಗೆಲುವಿನ ಹುಮ್ಮಸ್ಸು ಹೆಚ್ಚಾಗಿರುವ ಕಾರಣ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಯಾರೇ ಅಭ್ಯರ್ಥಿಯಾದರೂ ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಎರಡೂ ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಅಸ್ಪೃಶ್ಯತೆಯನ್ನು ಮುಚ್ಚಿಟ್ಟು ಮತಾಂತರದ ಹಿಂದೆ ಬಿದ್ದ ಬಿಜೆಪಿ ಪರಿವಾರ!
ಅತ್ಯಾಚಾರದ ಆರೋಪ ಹೊರಿಸಿ ಯುವಕನ ಬರ್ಬರ ಹತ್ಯೆ: ಆರೋಪಿಗಳ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
ಕ್ರೂಸರ್ ಹಡಗಿನಲ್ಲಿ ರೇವ್ ಪಾರ್ಟಿ: ಎನ್ ಸಿಬಿಯಿಂದ ಶಾರೂಖ್ ಪುತ್ರನ ವಿಚಾರಣೆ
ಅಂಜನಾದ್ರಿ ಬೆಟ್ಟದಿಂದ ಅಂಗಡಿ ತೆರವು ಮಾಡಲು ಅನ್ಯ ಧರ್ಮೀಯರಿಗೆ ಬೆದರಿಕೆ: ಅತುಲ್ ಕುಮಾರ್ ವಿರುದ್ಧ ಎಫ್ ಐಆರ್
ವಾಹನ ಚಲಾಯಿಸುತ್ತಿರುವ ವೇಳೆ ಹೆಡ್ ಫೋನ್, ಬ್ಲೂಟೂತ್ ಬಳಸಿದರೆ ದಂಡ ಖಚಿತ