ನಿನ್ನೆ ವಿಶ್ವಾದ್ಯಂತ ಫೇಸ್ ಬುಕ್, ವಾಟ್ಸಾಪ್ ಗೆ ಏನಾಗಿತ್ತು?
ನವದೆಹಲಿ: ಪ್ರಮುಖ ಸಾಮಾಜಿಕ ಜಾಲತಾಣಗಳಾಗಿರುವ ವಾಟ್ಸಾಪ್, ಮೆಸೆಂಜರ್, ಫೇಸ್ ಬುಕ್, ಇನ್ಟಾಗ್ರಾಮ್ ಸೋಮವಾರ ರಾತ್ರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಇದರಿಂದಾಗಿ ಸಾಮಾಜಿಕ ಜಾಲತಾಣಗಳ ಬಳಕೆ ಸಾಧ್ಯವಾಗದೇ ಬಳಕೆದಾರರು ಗೊಂದಲಕ್ಕೀಡಾಗಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿದ್ದರೂ, ತಕ್ಷಣದಲ್ಲಿ ಈ ಸಮಸ್ಯೆಗಳನ್ನು ಸರಿಪಡಿಸಲಾಗುತ್ತಿತ್ತು. ಆದರೆ, ಈ ಬಾರಿ ದೀರ್ಘ ಕಾಲದವರೆಗೆ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಬಳಕೆದಾರರು ಆತಂಕ್ಕೀಡಾಗಿದ್ದಾರೆ.
ಇನ್ನೂ ಈ ಸಂಬಂಧ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿರುವ ವಾಟ್ಸಾಪ್, ಕೆಲವರು ಈ ಸಮಯದಲ್ಲಿ ವಾಟ್ಸಾಪ್ ಬಳಕೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ಈ ಸಮಸ್ಯೆಯನ್ನು ಸರಿಪಡಿಸಲು ಕೆಲಸ ಮಾಡುತ್ತಿದ್ದೇವೆ. ಸಾಧ್ಯವಾದಷ್ಟು ಬೇಗ ಅಪ್ ಡೇಟ್ ನೀಡುತ್ತೇವೆ ಎಂದು ಹೇಳಿತ್ತು. ಇದೀಗ ಎಂದಿನಂತೆಯೇ ಫೇಸ್ ಬುಕ್, ವಾಟ್ಸಾಪ್ ಕಾರ್ಯನಿರ್ವಹಿಸುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಮೀನುಗಾರರ ಬಲೆಗೆ ಬಿತ್ತು ಬೃಹತ್ ಗಾತ್ರದ ಹೆಲಿಕಾಫ್ಟರ್ ಮೀನು!
ಕಾಂಗ್ರೆಸ್ ಗೆ ಭವಿಷ್ಯವಿಲ್ಲ, ರಾಷ್ಟ್ರಮಟ್ಟದಲ್ಲಿ ಒಡೆದು ಚೂರಾಗುತ್ತಿದೆ | ಸಚಿವ ಅಶ್ವಥ್ ನಾರಾಯಣ್
ಈ ಬಾರಿಯೂ ಸಿಗಲಿಲ್ಲ ಬಿಜೆಪಿ ಟಿಕೆಟ್: ಮಹತ್ವದ ತೀರ್ಮಾನ ಕೈಗೊಂಡ ಪ್ರಮೋದ್ ಮುತಾಲಿಕ್
ಜ್ಯೂಸ್ ಎಂದು ಭಾವಿಸಿ ತಾತನ ಬ್ರಾಂಡಿ ಕುಡಿದ 5 ವರ್ಷದ ಬಾಲಕ, ತಾತ ಇಬ್ಬರೂ ಸಾವು
ಪ್ರವಾದಿಯ ಅವಹೇಳನಾಕಾರಿ ವ್ಯಂಗ್ಯ ಚಿತ್ರ ಬಿಡಿಸಿದ್ದ ವಿವಾದಿತ ಕಲಾವಿದ ಅಪಘಾತದಲ್ಲಿ ಸಾವು!
ಲಿಖಿಂಪುರ ರೈತರ ಹತ್ಯಾಕಾಂಡ: ಬಿಎಸ್ ಪಿ ನಾಯಕರನ್ನೂ ಗೃಹ ಬಂಧನದಲ್ಲಿರಿಸಲಾಗಿದೆ | ಮಾಯಾವತಿ