ಆರ್ಯನ್ ಖಾನ್ ಜೊತೆಗೆ ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಮಾಡೆಲ್ ಯಾರು ಗೊತ್ತಾ? - Mahanayaka
1:01 AM Wednesday 11 - December 2024

ಆರ್ಯನ್ ಖಾನ್ ಜೊತೆಗೆ ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಮಾಡೆಲ್ ಯಾರು ಗೊತ್ತಾ?

munmun dhamecha
05/10/2021

ಸಿನಿಡೆಸ್ಕ್:  ಕ್ರೂಸ್ ಹಡಗಿಲ್ಲಿ ಡ್ರಗ್ಸ್ ಪಾರ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆಗೆ ಇನ್ನೂ ಕೆಲವರ ಬಂಧನವಾಗಿದ್ದು, ​ ಮುನ್​ ಮುನ್​, ಅರ್ಬಾಜ್ ಎಂಬವರ ಹೆಸರು ಇದೀಗ ಹೈಲೈಟ್ ಆಗ್ತಿವೆ.

ಅರ್ಬಾಜ್​ ಹಾಗೂ ಆರ್ಯನ್​​ ಆಪ್ತ ಗೆಳೆಯರು. ಮುನ್ ​ಮುನ್​ ಗೆ ಅರ್ಬಾಜ್ ಎಂಬಾತನ​​ ಗೆಳೆತನವಿತ್ತು. ಮುನ್ ಮುನ್ ಒಬ್ಬಳು ಮಾಡೆಲ್ ಆಗಿದ್ದು, ಆಕೆಗೆ 39 ವರ್ಷ ವಯಸ್ಸು ಎಂದು ಹೇಳಲಾಗಿದೆ.

ಮುನ್​ ಮುನ್ ಮಧ್ಯಪ್ರದೇಶದ ಸಾಗರ್​ ಜಿಲ್ಲೆಯವರು. ಮುನ್​ಮುನ್​ ತಾಯಿ ಕಳೆದ ವರ್ಷ ನಿಧನ ಹೊಂದಿದ್ದಾರೆ. ಅವರ ಸಹೋದರ ಪ್ರಿನ್ಸ್​ ಧಮೇಚಾ ಅವರು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮುನ್ ​ಮುನ್​ ಮಾಡೆಲ್​ ಆಗಿ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರಿಗೆ ಇನ್​ ಸ್ಟಾಗ್ರಾಮ್​ ನಲ್ಲಿ 13 ಸಾವಿರ ​ ಹಿಂಬಾಲಕರಿದ್ದಾರೆ.

ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ ರಾತ್ರಿ ನಡೆಯುತ್ತಿದ್ದ ರೇವ್​ ಪಾರ್ಟಿಯಲ್ಲಿ ಆರ್ಯನ್​ ಕೂಡ ಇದ್ದರು. ಹೀಗಾಗಿ ಅವರನ್ನು ಮಾದಕ ವಸ್ತು ನಿಯಂತ್ರಣ ಮಂಡಳಿ (NCB) ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಆರ್ಯನ್ ಮೊಬೈಲ್ ನಲ್ಲಿದ್ದ ವಾಟ್ಸಾಪ್ ಚಾಟ್ ಗಳ ಆಧಾರಗಳಲ್ಲಿಟ್ಟುಕೊಂಡು ಎನ್ ಸಿಬಿ ಪರ ವಕೀಲರು ವಾದ ಸಲ್ಲಿಸಿದ್ದಾರೆ. ಆದರೆ, ಆರ್ಯನ್ ಖಾನ್ ಪರ ವಕೀಲರು, ವಾಟ್ಸಾಪ್ ಚಾಟ್ ಗಳು ಸಾಕ್ಷಿಗಳಾಗಿ ಪರಿಗಣಿಸಲ್ಪಡುವುದಿಲ್ಲ ಎಂದು ವಾದಿಸಿದ್ದಾರೆ. ಸದ್ಯ ಸಾಕ್ಷಿ ಸಂಗ್ರಹಿಸಲು ಎನ್ ಸಿಬಿಗೆ ಕೋರ್ಟ್ ಹೆಚ್ಚಿನ ಅವಕಾಶ ನೀಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ವಿಶ್ವಾದ್ಯಂತ ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ಸ್ಥಗಿತ!

ಮೀನುಗಾರರ ಬಲೆಗೆ ಬಿತ್ತು ಬೃಹತ್ ಗಾತ್ರದ ಹೆಲಿಕಾಫ್ಟರ್ ಮೀನು!

ಕಾಂಗ್ರೆಸ್ ಗೆ ಭವಿಷ್ಯವಿಲ್ಲ, ರಾಷ್ಟ್ರಮಟ್ಟದಲ್ಲಿ ಒಡೆದು ಚೂರಾಗುತ್ತಿದೆ | ಸಚಿವ ಅಶ್ವಥ್ ನಾರಾಯಣ್

ಉತ್ತರ ಪ್ರದೇಶದಲ್ಲಿ ರಾಮ ರಾಜ್ಯವಿಲ್ಲ, ಕೊಲೆಗಡುಕ ಸರ್ಕಾರವಿದೆ: ಮಮತಾ ಬ್ಯಾನರ್ಜಿ ಕಿಡಿ

ಈ ಬಾರಿಯೂ ಸಿಗಲಿಲ್ಲ ಬಿಜೆಪಿ ಟಿಕೆಟ್: ಮಹತ್ವದ ತೀರ್ಮಾನ ಕೈಗೊಂಡ ಪ್ರಮೋದ್ ಮುತಾಲಿಕ್

ಅಕ್ಟೋಬರ್ 5ರಂದು ಮೈಸೂರಿನಲ್ಲಿ ‘ಮಹಿಷ ದಸರಾ’ | ಅನುಮತಿ ನೀಡದ ಜಿಲ್ಲಾಡಳಿತ!

ಇತ್ತೀಚಿನ ಸುದ್ದಿ