ಆರೆಸ್ಸೆಸ್ ದೇಶವನ್ನು ಮನುಸ್ಮೃತಿ ಯುಗಕ್ಕೆ ತೆಗೆದುಕೊಂಡು ಹೋಗುವ ಅಜೆಂಡಾ ಹೊಂದಿದೆ | ಹೆಚ್.ಡಿ.ಕುಮಾರಸ್ವಾಮಿ - Mahanayaka
12:54 AM Wednesday 11 - December 2024

ಆರೆಸ್ಸೆಸ್ ದೇಶವನ್ನು ಮನುಸ್ಮೃತಿ ಯುಗಕ್ಕೆ ತೆಗೆದುಕೊಂಡು ಹೋಗುವ ಅಜೆಂಡಾ ಹೊಂದಿದೆ | ಹೆಚ್.ಡಿ.ಕುಮಾರಸ್ವಾಮಿ

h d kumaraswamy
05/10/2021

ಬೆಂಗಳೂರು:  ಆರೆಸ್ಸೆಸ್ ದೇಶವನ್ನು ಮನುಸ್ಮೃತಿ ಯುಗಕ್ಕೆ ತೆಗೆದುಕೊಂಡು ಹೋಗುವ ಅಜೆಂಡಾವನ್ನು ಹೊಂದಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದು, ದೇಶದಲ್ಲಿ ಶಾಂತಿಯುತ ಬದುಕು ಸಾಗಿಸುವ ವಾತಾವರಣ ಕಲ್ಪಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಅವರು ಹೇಳಿದರು.

ಬಿಡದಿಯ ತೋಟದ ಮನೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೇಶದ ಆಡಳಿತ ವ್ಯವಸ್ಥೆಯಲ್ಲಿ ಆರೆಸ್ಸೆಸ್ ನ ಆರ್ಭಟ ಹೆಚ್ಚಾಗುತ್ತಿದೆ. ಸುಮಾರು ನಾಲ್ಕು ಸಾವಿರ ಆರೆಸ್ಸೆಸ್ ನ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಕಾರ್ಯಕರ್ತರಿಗೆ  ಯುಪಿಎಸ್ ಸಿ ಪರೀಕ್ಷೆ ಬರೆಯಲು ಆರೆಸ್ಸೆಸ್ ತರಬೇತಿ ನೀಡಿದೆ.. ಇದರಿಂದಾಗಿ 676 ಆರೆಸ್ಸೆಸ್ ಕಾರ್ಯಕರ್ತರು ಒಂದೇ ವರ್ಷದಲ್ಲಿ ಪಾಸ್ ಆಗಿದ್ದಾರೆ. ಆರೆಸ್ಸೆಸ್ ನವರು ಬೇರೆ ಬೇರೆ ಇನ್ ಸ್ಟಿಟ್ಯೂಟ್ ಗಳಲ್ಲಿ ಟೀಮ್ ಇಟ್ಟಿದ್ದಾರೆ ಎಂದು ಅವರು ಆರೋಪಿಸಿದರು.

ಆರೆಸ್ಸೆಸ್ ದೇಶವನ್ನು ಮನುಸ್ಮೃತಿ ಯುಗಕ್ಕೆ ತೆಗೆದುಕೊಂಡು ಹೋಗುವ ಅಜೆಂಡಾ ಹೊಂದಿದೆ. ನಾನು ಕೂಡ ಹಿಂದೂವೇ. ಮೊದಲು ದೇಶದ ಜನತೆಗೆ ಬದುಕನ್ನು ಕಟ್ಟಿಕೊಡುವುದು ಬೇಕಾಗಿದೆ. ಆ ಮೇಲೆ ಹಿಂದೂತ್ವದ ಬಗ್ಗೆ ಚರ್ಚೆ ಮಾಡೋಣ. ಇವರೇನು ಹಿಂದೂತ್ವವನ್ನು ಗುತ್ತಿಗೆ ಪಡೆದುಕೊಂಡಿದ್ದಾರಾ ಎಂದು ಅವರು ಪ್ರಶ್ನಿಸಿದರು.

ಎಷ್ಟು ದಿನ ರಕ್ತದೋಕುಳಿ ಆಡಳಿತ ನಡೆಸುತ್ತೀರಿ? ಪ್ರಧಾನಿಗಳು ರೈತರನ್ನು ಕರೆದು ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿಲ್ಲ. ಸಿಎಂ ರೈತರ ಹೋರಾಟ ಪ್ರಾಯೋಜಿತ ಎಂದು ಹೇಳುತ್ತಿದ್ದಾರೆ? ಬಸವರಾಜ್ ಬೊಮ್ಮಾಯಿ ಹೇಗೆ ಬಂದರು? ಹೋರಾಟ ಮಾಡಿಕೊಂಡೇ ಬಂದಿರುವುದಲ್ಲವೇ? ಎಂದು ಅವರು ಪ್ರಶ್ನಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಆಸೆ ಪೂರೈಸು ಎಂದು ಪೀಡಿಸಿದ ವಿವಾಹಿತನ ಕಿರುಕುಳ ತಾಳಲಾರದೇ ದುರಂತ ಸಾವಿಗೀಡಾದ ಬಾಲಕಿ!

‘ಮತಾಂತರ ನಿಷೇಧ ಕಾಯ್ದೆ’ ಜಾರಿಗೆ ಒತ್ತಾಯಿಸಿದ ಪ್ರತಿಭಟನೆಯಲ್ಲಿ ನಾನು ಭಾಗವಹಿಸಿಲ್ಲ: ಡಾ.ಶ್ರೀನಿವಾಸ್ ಸ್ಪಷ್ಟನೆ

ಶಾಕಿಂಗ್ ನ್ಯೂಸ್: ಒಂದೇ ದಿನದಲ್ಲಿ 40 ಜನರ ಮೇಲೆ ದಾಳಿ ನಡೆಸಿದ ಹುಚ್ಚುನಾಯಿ!

ಮಹಿಳೆಗೆ ಪೆಟ್ರೋಲ್ ಸುರಿದು ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ | “ಪಾಳೆಗಾರಿಕೆ ಮನಸ್ಥಿತಿಯ ಕ್ರಿಮಿಗಳಿಗೆ  ಕಠಿಣ ಶಿಕ್ಷೆಯಾಗಲಿ”

ಪೊಲೀಸರ ಬದಲು ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ  | ಅನೈತಿಕ ಪೊಲೀಸ್ ಗಿರಿ ವಿರುದ್ಧ ಡಿ.ಕೆ.ಶಿವಕುಮಾರ್ ಆಕ್ರೋಶ

75 ಯುವತಿಯರನ್ನು ಮದುವೆಯಾಗಿ, 200 ಯುವತಿಯರನ್ನು ವೇಶ್ಯಾವಾಟಿಕೆಗೆ ದೂಡಿದ ಪಾಪಿ ಅರೆಸ್ಟ್!

ಕಾಂಗ್ರೆಸ್ ಗೆ ಭವಿಷ್ಯವಿಲ್ಲ, ರಾಷ್ಟ್ರಮಟ್ಟದಲ್ಲಿ ಒಡೆದು ಚೂರಾಗುತ್ತಿದೆ | ಸಚಿವ ಅಶ್ವಥ್ ನಾರಾಯಣ್

ಇತ್ತೀಚಿನ ಸುದ್ದಿ