ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಗನ ಬರ್ಬರ ಹತ್ಯೆ | ತಾಯಿ ಹಾಗೂ ಆಕೆಯ ಪ್ರಿಯಕರ ಅರೆಸ್ಟ್ - Mahanayaka
10:59 PM Wednesday 11 - December 2024

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಗನ ಬರ್ಬರ ಹತ್ಯೆ | ತಾಯಿ ಹಾಗೂ ಆಕೆಯ ಪ್ರಿಯಕರ ಅರೆಸ್ಟ್

arrest
05/10/2021

ಬೆಂಗಳೂರು: ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರಿಯಕರನೊಂದಿಗೆ ಸೇರಿ ತಾಯಿಯೇ ಪುತ್ರನನ್ನು ಹತ್ಯೆ ಮಾಡಿಸಿದ ಆತಂಕಕಾರಿ ಘಟನೆಯೊಂದು ಬೆಂಗಳೂರಿನ ಹಲಸೂರು ಠಾಣಾ ವ್ಯಾಪ್ತಿಯ ಮರ್ಫಿ ಟೌನ್ ನಲ್ಲಿ ಬೆಳಕಿಗೆ ಬಂದಿದೆ.

17 ವರ್ಷ ವಯಸ್ಸಿನ ನಂದು ಹತ್ಯೆಗೀಡಾದ ಬಾಲಕನಾಗಿದ್ದು, ತಾಯಿ ಗೀತಾ ಹಾಗೂ 24 ವರ್ಷ ವಯಸ್ಸಿನ ಆಟೋ ಚಾಲಕ ಶಕ್ತಿವೇಲ್ ಎಂಬಾತನ ನಡುವೆ ಅಕ್ರಮ ಸಂಬಂಧವಿದ್ದು, ಇದನ್ನು ಪುತ್ರ ವಿರೋಧಿಸಿದ್ದ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿ ಹತ್ಯೆ ನಡೆದಿದೆ ಎಂದು ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ  ಇಬ್ಬರು ಆರೋಪಿಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

6 ವರ್ಷಗಳ ಹಿಂದೆ ತನ್ನ ಪತಿಯಿಂದ ದೂರವಾಗಿದ್ದ ಗೀತಾಗೆ ಫೇಸ್ ಬುಕ್ ನಲ್ಲಿ ಶಕ್ತಿವೇಲ್ ಪರಿಚಯವಾಗಿದ್ದ ಎನ್ನಲಾಗಿದೆ. ಇವರಿಬ್ಬರ ನಡುವಿನ ಅನೈತಿಕ ಸಂಬಂಧವನ್ನು ಪುತ್ರ ನಂದು ಪ್ರಶ್ನಿಸಿದ್ದ ಎಂದು ಹೇಳಲಾಗಿದೆ.

ಸೋಮವಾರ ಮನೆಯಲ್ಲಿಯೇ ಕುಳಿತು ಗೀತಾ ಹಾಗೂ ಶಕ್ತಿವೇಲ್ ಮನೆಯಲ್ಲಿ ಮದ್ಯ ಸೇವಿಸಿದ್ದು, ನಂದು ಜೊತೆಗೆ ಜಗಳ ನಡೆಸಿದ್ದಾರೆ. ಈ ವೇಳೆ ಶಕ್ತಿವೇಲ್ ಚಾಕುವಿನಿಂದ ಬಾಲಕ ನಂದುವಿನ ಎದೆಗೆ ಇರಿದಿದ್ದು, ಈತನ ಕೃತ್ಯಕ್ಕೆ ತಾಯಿ ಕೂಡ ಸಹಕರಿಸಿದ್ದಾಳೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ನಂದು ತಂದೆ ಪರಮೇಶ್ವರ್ ಅವರು  ದೂರು ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಏಕಾಏಕಿ ಮುರಿದು ಬಿದ್ದ ತೂಗು ಸೇತುವೆ | ನದಿಗೆ ಬಿದ್ದ 30 ವಿದ್ಯಾರ್ಥಿಗಳು

ಸಚಿವ ಸಿ.ಸಿ.ಪಾಟೀಲ್ ಕಾರು ಬೈಕ್ ಗೆ ಡಿಕ್ಕಿ | ಬೈಕ್ ಸವಾರನನ್ನು ಬಿಟ್ಟು ಸಚಿವರನ್ನು ರಕ್ಷಿಸಲು ಪೊಲೀಸರಿಂದ ಯತ್ನ!?

ಹಾನಗಲ್, ಸಿಂದಗಿ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್

ಆರೆಸ್ಸೆಸ್ ದೇಶವನ್ನು ಮನುಸ್ಮೃತಿ ಯುಗಕ್ಕೆ ತೆಗೆದುಕೊಂಡು ಹೋಗುವ ಅಜೆಂಡಾ ಹೊಂದಿದೆ | ಹೆಚ್.ಡಿ.ಕುಮಾರಸ್ವಾಮಿ

‘ಮತಾಂತರ ನಿಷೇಧ ಕಾಯ್ದೆ’ ಜಾರಿಗೆ ಒತ್ತಾಯಿಸಿದ ಪ್ರತಿಭಟನೆಯಲ್ಲಿ ನಾನು ಭಾಗವಹಿಸಿಲ್ಲ: ಡಾ.ಶ್ರೀನಿವಾಸ್ ಸ್ಪಷ್ಟನೆ

ಮಹಿಳೆಗೆ ಪೆಟ್ರೋಲ್ ಸುರಿದು ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ | “ಪಾಳೆಗಾರಿಕೆ ಮನಸ್ಥಿತಿಯ ಕ್ರಿಮಿಗಳಿಗೆ  ಕಠಿಣ ಶಿಕ್ಷೆಯಾಗಲಿ”

ಇತ್ತೀಚಿನ ಸುದ್ದಿ