ಸಾವಿನ ಕೊನೆಯ ಕ್ಷಣದಲ್ಲಿ “ಅಪ್ಪಾ ಬೇಗ ಬನ್ನಿ” ಎಂದು ಮಗ ಹೇಳಿದ್ದ | ಮಗನ ಸಾವು ನೆನೆದು ಬಿಕ್ಕಿಬಿಕ್ಕಿ ಅತ್ತ ರೈತ - Mahanayaka
10:51 PM Wednesday 11 - December 2024

ಸಾವಿನ ಕೊನೆಯ ಕ್ಷಣದಲ್ಲಿ “ಅಪ್ಪಾ ಬೇಗ ಬನ್ನಿ” ಎಂದು ಮಗ ಹೇಳಿದ್ದ | ಮಗನ ಸಾವು ನೆನೆದು ಬಿಕ್ಕಿಬಿಕ್ಕಿ ಅತ್ತ ರೈತ

lakhimpur kheri
06/10/2021

ಲಖೀಂಪುರ್ ಖೇರಿ:  ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ನಡೆದ ರೈತರ ಪ್ರತಿಭಟನೆಯ ವೇಳೆ ಸಚಿವರ ಪುತ್ರ ಕಾರು ಹರಿಸಿದ ಪರಿಣಾಮ ಗಾಯಗೊಂಡು ಮೃತಪಟ್ಟ 19 ವರ್ಷ ವಯಸ್ಸಿನ ಯುವಕನ ತಂದೆ ಬಿಕ್ಕಿಬಿಕ್ಕಿ ಅಳುತ್ತ, ಕೊನೆಯ ಕ್ಷಣದಲ್ಲಿ ತನ್ನ ಮಗನೊಂದಿಗೆ ಆಡಿದ ಮಾತುಗಳನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇನ್ನೂ ಬಾಳಿ ಬದುಕಬೇಕಿದ್ದ ಲವಪ್ರೀತ್ ಸಿಂಗ್ ಸಚಿವರ ಮಗನ ಕಾರು ಡಿಕ್ಕಿಯಾಗಿ ಗಂಭೀರ ಸ್ಥಿತಿಗೆ ತಲುಪಿದ್ದ. ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ತನ್ನ ತಂದೆ ಸತ್ನಾಮ್ ಸಿಂಗ್ ಅವರಿಗೆ ಕರೆ ಮಾಡಿ, “ಅಪ್ಪಾ…  ದಯವಿಟ್ಟು ಬೇಗ ಬನ್ನಿ” ಎಂದು ತನ್ನ ತಂದೆಗೆ ಹೇಳಿದ್ದ. ಇದೇ ವೇಳೆ ತಂದೆ ಸತ್ನಾಮ್ ಸಿಂಗ್ ಅವರು, ಮಗು ನಾನು ಬರುತ್ತಿದ್ದೇನೆ ಎಂದು ಹೇಳಿದ್ದರು. ಆದರೆ, ಅವರು ಲಖೀಂಪುರ್ ಖೇರಿ ತಲುಪಿದಾಗ ಪುತ್ರ ಬಾರದ ಲೋಕಕ್ಕೆ ಪ್ರಯಾಣಿಸಿದ್ದ.

ಗೃಹಸಚಿವ ಅಜಯ್ ಕುಮಾರ ಮಿಶ್ರಾರ ಭೇಟಿಯ ಸಂದರ್ಭದಲ್ಲಿ ತನ್ನ ತಂದೆಯ ವಿರುದ್ಧ ಪ್ರತಿಭಟಿಸಿದವರ ಮೇಲಿನ ಸಿಟ್ಟಿಗೆ ಅವರ ಮೇಲೆ ಕಾರು ಹರಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.  ಈ ಸಂದರ್ಭ ಮೃತಪಟ್ಟವರ ಪೈಕಿ ಲವಪ್ರೀತ್ ಸಿಂಗ್ ಕೂಡ ಒಬ್ಬರಾಗಿದ್ದಾರೆ.

ಮಂಗಳವಾರ ತಮ್ಮ ಪುತ್ರನ ಶವಪೆಟ್ಟಿಗೆಯ ಬಳಿ ರೋದಿಸುತ್ತಿದ್ದ ಲವಪ್ರೀತ್ ನ ಕುಟುಂಬ ಸದಸ್ಯರು ಮರಣೋತ್ತರ ಪರೀಕ್ಷೆ ವರದಿ ಮತ್ತು ಆಶಿಷ್ ಮಿಶ್ರಾ ವಿರುದ್ಧ ಎಫ್‌ ಐ ಆರ್ ಪ್ರತಿಯನ್ನು ತಮಗೆ ನೀಡುವವರೆಗೆ ಶವಸಂಸ್ಕಾರವನ್ನು ನಡೆಸಲು ನಿರಾಕರಿಸಿದರು.

ನನ್ನ ಮಗನನ್ನು ನಿರ್ದಯವಾಗಿ ಕಾರು ಹರಿಸಿಕೊಲ್ಲಲಾಗಿದೆ. ಅದಕ್ಕೆ ಹೊಣೆಗಾರ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇಲ್ಲಿನ ಸರ್ಕಾರ ಗಟ್ಟಿಧ್ವನಿಯಲ್ಲಿ ಉತ್ತರಿಸುತ್ತಿಲ್ಲ ಎಂದು ಸತ್ನಾಮ್ ಸಿಂಗ್ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಲಖೀಂಪುರ್ ಖೇರ್ ಸಚಿವನ ಪುತ್ರ ರೈತರನ್ನು ಕೆಣಕಿ, ಗುಂಡು ಹಾರಿಸಿದ್ದ | ಎಫ್ ಐಆರ್ ನಲ್ಲಿ ಉಲ್ಲೇಖ

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಗನ ಬರ್ಬರ ಹತ್ಯೆ | ತಾಯಿ ಹಾಗೂ ಆಕೆಯ ಪ್ರಿಯಕರ ಅರೆಸ್ಟ್

ಏಕಾಏಕಿ ಮುರಿದು ಬಿದ್ದ ತೂಗು ಸೇತುವೆ | ನದಿಗೆ ಬಿದ್ದ 30 ವಿದ್ಯಾರ್ಥಿಗಳು

ಸಚಿವ ಸಿ.ಸಿ.ಪಾಟೀಲ್ ಕಾರು ಬೈಕ್ ಗೆ ಡಿಕ್ಕಿ | ಬೈಕ್ ಸವಾರನನ್ನು ಬಿಟ್ಟು ಸಚಿವರನ್ನು ರಕ್ಷಿಸಲು ಪೊಲೀಸರಿಂದ ಯತ್ನ!?

ಹಾನಗಲ್, ಸಿಂದಗಿ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್

ಆರೆಸ್ಸೆಸ್ ದೇಶವನ್ನು ಮನುಸ್ಮೃತಿ ಯುಗಕ್ಕೆ ತೆಗೆದುಕೊಂಡು ಹೋಗುವ ಅಜೆಂಡಾ ಹೊಂದಿದೆ | ಹೆಚ್.ಡಿ.ಕುಮಾರಸ್ವಾಮಿ

ಆಸೆ ಪೂರೈಸು ಎಂದು ಪೀಡಿಸಿದ ವಿವಾಹಿತನ ಕಿರುಕುಳ ತಾಳಲಾರದೇ ದುರಂತ ಸಾವಿಗೀಡಾದ ಬಾಲಕಿ!

‘ಮತಾಂತರ ನಿಷೇಧ ಕಾಯ್ದೆ’ ಜಾರಿಗೆ ಒತ್ತಾಯಿಸಿದ ಪ್ರತಿಭಟನೆಯಲ್ಲಿ ನಾನು ಭಾಗವಹಿಸಿಲ್ಲ: ಡಾ.ಶ್ರೀನಿವಾಸ್ ಸ್ಪಷ್ಟನೆ

ಇತ್ತೀಚಿನ ಸುದ್ದಿ