ಅಣಬೆ ಸೇವಿಸಿ ಒಂದೇ ಕುಟುಂಬದ 10 ಮಂದಿ ಅಸ್ವಸ್ಥ | ಮಹಿಳೆಯ ಸ್ಥಿತಿ ಗಂಭೀರ
ಪುತ್ತೂರು: ಅಣಬೆ(Mushroom) ಪದಾರ್ಥ ಸೇವಿಸಿ ಒಂದೇ ಕುಟುಂಬದ 10 ಮಂದಿ ಅಸ್ವಸ್ಥಗೊಂಡ ಘಟನೆ ಪುತ್ತೂರಿನ ಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ ನಡೆದಿದ್ದು, ಅಸ್ವಸ್ಥಗೊಂಡವರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ತಮ್ಮ ಮನೆಯ ಸಮೀಪವೇ ದೊರೆತಿದ್ದ ಅಣಬೆಯನ್ನು ಪದಾರ್ಥ ಮಾಡಿ ಮಧ್ಯಾಹ್ನ ಊಟ ಸೇವಿಸಿದ್ದಾರೆ. ಊಟದ ಬಳಿಕ ಕೆಲವೇ ಸಮಯದಲ್ಲಿ ಮನೆಯಲ್ಲಿದ್ದವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಡಂಗೆ ಸಾಂತಪ್ಪನವರ ಪುತ್ರ ರಾಘವ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ರಾಘವ, ಅವರ ತಾಯಿ ಹೊನ್ನಮ್ಮ, ಪತ್ನಿ ಲತಾ, ಪುತ್ರಿ ತೃಷಾಮ ಸಹೋದರಿ ಬೇಬಿ, ಬಾವಂದಿರಾದ ದೇವಪ್ಪ, ಕೇಶವ ಹಾಗೂ ರಾಘವರವರ ಸಹೋದರಿಯರ ಮಕ್ಕಳಾದ ಸುದೇಶ್, ಧನುಶ್ ಮತ್ತು ಅರ್ಚನಾ ಅವರು ಪುತ್ತೂರಿನ ಖಾಸಗಿ ಆಸ್ಪತ್ರಗೆ ದಾಖಲಾಗಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವವರ ಪೈಕಿ ಹೊನ್ನಮ್ಮ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ದೂರವಾಗಿದ್ದ ಪತ್ನಿಯ ಬಳಿಗೆ ಬಂದು ಅಪ್ಪಿಕೊಂಡ ಪತಿ | ಕ್ಷಣ ಮಾತ್ರದಲ್ಲಿ ಇಬ್ಬರ ದೇಹವೂ ಛಿದ್ರಛಿದ್ರ!
ತಂದೆಯಿಂದಲೇ ಮಗನ ಮೇಲೆ ಗುಂಡೇಟು: ಬಾಲಕನ ಮೆದುಳು ನಿಷ್ಕ್ರಿಯ | ಅಂಗಾಂಗ ದಾನಕ್ಕೆ ಸಿದ್ಧತೆ
ಮನೆಯ ಗೋಡೆ ಕುಸಿದು ಬಿದ್ದು ಒಂದೇ ಕುಟುಂಬದ ಐವರು ಸಾವು!
ಕೇರಳದ ಮೂಲದ ವಿದ್ಯಾರ್ಥಿನಿ ಮಂಗಳೂರಿನ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ!
ಕಾರ್ಮಿಕರ ಮೇಲೆ ಗುಂಡು ಹಾರಾಟ ಪ್ರಕರಣ ದಿಕ್ಕು ತಪ್ಪದ ರೀತಿಯಲ್ಲಿ ಸಮಗ್ರ ತನಿಖೆ ನಡೆಸಿ | ಡಿವೈಎಫ್ ಐ ಆಗ್ರಹ
ಸತ್ಯ ಹೇಳಲು ನನಗೆ ಯಾವ ಹಿಂಜರಿಕೆ, ಭಯವೂ ಇಲ್ಲ | ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು
ಅಮಾನವೀಯ ಘಟನೆ: ರಾತ್ರೋ ರಾತ್ರಿ ಮನೆಯಲ್ಲಿದ್ದವರನ್ನ ಹೊರದಬ್ಬಿ ಬೀಗ ಜಡಿದ ಬ್ಯಾಂಕ್ ಸಿಬ್ಬಂದಿ!
ಮಾಟ ಮಂತ್ರದಿಂದ ನೆಮ್ಮದಿ ಪಡೆಯಲು ಹೋಗಿ 4.41 ಕೋಟಿ ರೂಪಾಯಿ ಕಳೆದುಕೊಂಡ ಮಹಿಳೆ