26 ಬ್ರಾಹ್ಮಣೇತರ ಅರ್ಚಕರ ನೇಮಕ: ತಮಿಳುನಾಡು ಸರ್ಕಾರದ ಐತಿಹಾಸಿಕ ಹೆಜ್ಜೆ - Mahanayaka
12:58 AM Thursday 19 - September 2024

26 ಬ್ರಾಹ್ಮಣೇತರ ಅರ್ಚಕರ ನೇಮಕ: ತಮಿಳುನಾಡು ಸರ್ಕಾರದ ಐತಿಹಾಸಿಕ ಹೆಜ್ಜೆ

non brahmin priests
09/10/2021

ಚೆನ್ನೈ: ತಮಿಳುನಾಡು ಸರ್ಕಾರದ ವ್ಯಾಪ್ತಿಯಲ್ಲಿರುವ ದೇಗುಲಗಳಲ್ಲಿ 26 ಬ್ರಾಹ್ಮಣೇತರ ಅರ್ಚಕರನ್ನು ನೇಮಕ ಮಾಡುವ ಮೂಲಕ ತಮಿಳುನಾಡಿನಲ್ಲಿ ಐತಿಹಾಸಿಕ ಕ್ರಮವನ್ನು ಸಿಎಂ ಎಂ.ಕೆ.ಸ್ಟ್ಯಾಲಿನ್ ಕೈಗೊಂಡಿದ್ದು, ಈ ಮೂಲಕ ಜಾತಿ ಬೇಧಕ್ಕೆ ಕಡಿವಾಣ ಹಾಕಲು ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಇನ್ನು ಮುಂದೆ ತಮಿಳುನಾಡಿನಲ್ಲಿ ಎಲ್ಲ ಜಾತಿಯವರು ಕೂಡ ಅರ್ಚಕ ಹುದ್ದೆಯನ್ನು ಪಡೆಯಬಹುದಾಗಿದೆ. ಅರ್ಚಕ ಹುದ್ದೆಗೆ ಕೋರ್ಸ್ ಆರಂಭವಾಗಿದ್ದು, ಈ ಕೋರ್ಸ್ ಪೂರ್ಣಗೊಳಿಸಿದ ಯಾವುದೇ ಜಾತಿಗೆ ಸೇರಿದವರು ಅರ್ಚಕರಾಗಿ ನೇಮಕಗೊಳ್ಳಬಹುದಾಗಿದೆ.

ಎಲ್ಲ ರಾಜ್ಯಗಳಲ್ಲಿಯೂ ಕೇವಲ ಬ್ರಾಹ್ಮಣರು ಮಾತ್ರವೇ ಅರ್ಚಕರ ಹುದ್ದೆಗೆ ನೇಮಕಗೊಳ್ಳುತ್ತಿದ್ದಾರೆ. ಎಲ್ಲ ಜಾತಿಯ ಜನರು ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಬ್ರಾಹ್ಮಣರಿಗೆ ಮಾತ್ರವೇ ದೇವಸ್ಥಾನದಲ್ಲಿ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಜನರ ಹಣದಿಂದಲೇ ಅರ್ಚಕರುಗಳಿಗೆ ಸರ್ಕಾರ ವೇತನ ನೀಡುವಾಗ ಕೇವಲ ಒಂದೇ ಜಾತಿಗೆ ಅರ್ಚಕರ ಹುದ್ದೆಯನ್ನು ಅನಧಿಕೃತವಾಗಿ ಮೀಸಲಿಡುವುದು ಸಾಮಾಜಿಕ ಅನ್ಯಾಯ ಕೂಡ ಆಗಿದೆ. ಈ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯ ಕೈ ಹಿಡಿದೆಳೆದು ಶಿಕ್ಷಕನಿಂದ ಅಸಭ್ಯ ವರ್ತನೆ | ವಿಡಿಯೋ ವೈರಲ್

ನಮ್ಮ ಮನೆಯಲ್ಲಿಯೂ ಹೆಂಡತಿ ಗದರುತ್ತಾರೆ | ಸಿಎಂ ಬಸವರಾಜ್ ಬೊಮ್ಮಾಯಿ

ದಸರ ಮುಗಿದ ತಕ್ಷಣವೇ 1ರಿಂದ 5ರವರೆಗೆ ಶಾಲೆ ಆರಂಭ | ಸಚಿವ ಬಿ.ಸಿ.ನಾಗೇಶ್

ರೈತರ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸದಿದ್ದರೆ, ಪ್ರಧಾನಿ ನಿವಾಸಕ್ಕೆ ಮುತ್ತಿಗೆ | ಭೀಮ್ ಆರ್ಮಿ ಎಚ್ಚರಿಕೆ

ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ: 100ಕ್ಕೂ ಅಧಿಕ ಮಂದಿ ಸಾವು

ಏರ್ ಇಂಡಿಯಾ ಟಾಟಾ ಸನ್ ಪ್ರೈವೇಟ್ ಲಿಮಿಟೆಡ್ ಪಾಲು | ಶೇ.100ರಷ್ಟು ಷೇರು ಮಾರಾಟ

ಮಕ್ಕಳು ಜ್ಯೂಸ್ ಕುಡಿದ ಬಳಿಕ ಜ್ಯೂಸ್ ಗೆ ವಿಷ ಬೆರೆಸಿದ್ದೇನೆ, ನಾನೂ ವಿಷ ಕುಡಿದ್ದೇನೆ ಎಂದ ತಂದೆ!

ವಿದ್ಯಾರ್ಥಿನಿ ನೀನಾಳ ಆತ್ಮಹತ್ಯೆಯ ಹಿಂದಿದೆ ಹಲವು ಅನುಮಾನಗಳು | ಸೂಕ್ತ ತನಿಖೆಗೆ ಆಗ್ರಹ

ಇತ್ತೀಚಿನ ಸುದ್ದಿ