ಮಂಗಳೂರು: ಬಾಲಕಿಯನ್ನು ಅಪಹರಿಸಿ ನಿಗೂಢ ಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರ! - Mahanayaka
11:13 PM Wednesday 11 - December 2024

ಮಂಗಳೂರು: ಬಾಲಕಿಯನ್ನು ಅಪಹರಿಸಿ ನಿಗೂಢ ಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರ!

mangalore
09/10/2021

ಬಂಟ್ವಾಳ:  ಬಾಲಕಿಯನ್ನು ನಿಗೂಢ ಸ್ಥಳಕ್ಕೆ ಕರೆದೊಯ್ದ ಸಾಮೂಹಿಕ ಅತ್ಯಾಚಾರ ನಡೆಸಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಈ ಘಟನೆ ಗಂಭೀರವಾಗಿದ್ದು, ಸಾಮೂಹಿಕ ಅತ್ಯಾಚಾರ ಪ್ರಕರಣದಡಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಗಳಿಗೆ ಎಂದು ಹೇಳಲಾಗಿದೆ.

ಆರೋಪಿಗಳು ಯಾವುದೋ ನಿಗೂಢ ಸ್ಥಳಕ್ಕೆ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಲಾಗಿದೆ. ಬಾಲಕಿಯ ಹೇಳಿಕೆಯ ಆಧಾರದಲ್ಲಿ ಪೊಲೀಸರಿಗೆ ಆರೋಪಿಗಳ ಸುಳಿವು ಲಭ್ಯವಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಬಾಲಕಿಯನ್ನು ಯಾವುದೋ ನಿಗೂಢ ಸ್ಥಳಕ್ಕೆ ಕರೆದೊಯ್ದಿದ್ದ ಆರೋಪಿಗಳು ಕೃತ್ಯದ ಬಳಿಕ ಇಲ್ಲಿನ ಬ್ರಹ್ಮರಕೂಟ್ಲು ಬಳಿಯಲ್ಲಿ ಬಿಟ್ಟು ಹೋಗಿದ್ದಾರೆನ್ನಲಾಗಿದೆ. ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ. ಪೊಲೀಸರ ತನಿಖೆಯ ಬಳಿಕ ಸ್ಪಷ್ಟ ಮಾಹಿತಿಗಳು ಹೊರಬೀಳಲಿದೆ ಎನ್ನಲಾಗಿದೆ. ಇನ್ನಷ್ಟು ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ರೈತರ ಮಾರಣಹೋಮ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರ ಪುತ್ರ ಪೊಲೀಸರ ಮುಂದೆ ಹಾಜರು

26 ಬ್ರಾಹ್ಮಣೇತರ ಅರ್ಚಕರ ನೇಮಕ: ತಮಿಳುನಾಡು ಸರ್ಕಾರದ ಐತಿಹಾಸಿಕ ಹೆಜ್ಜೆ

ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯ ಕೈ ಹಿಡಿದೆಳೆದು ಶಿಕ್ಷಕನಿಂದ ಅಸಭ್ಯ ವರ್ತನೆ | ವಿಡಿಯೋ ವೈರಲ್

ನಮ್ಮ ಮನೆಯಲ್ಲಿಯೂ ಹೆಂಡತಿ ಗದರುತ್ತಾರೆ | ಸಿಎಂ ಬಸವರಾಜ್ ಬೊಮ್ಮಾಯಿ

ದಸರ ಮುಗಿದ ತಕ್ಷಣವೇ 1ರಿಂದ 5ರವರೆಗೆ ಶಾಲೆ ಆರಂಭ | ಸಚಿವ ಬಿ.ಸಿ.ನಾಗೇಶ್

ಏರ್ ಇಂಡಿಯಾ ಟಾಟಾ ಸನ್ ಪ್ರೈವೇಟ್ ಲಿಮಿಟೆಡ್ ಪಾಲು | ಶೇ.100ರಷ್ಟು ಷೇರು ಮಾರಾಟ

ಮಕ್ಕಳು ಜ್ಯೂಸ್ ಕುಡಿದ ಬಳಿಕ ಜ್ಯೂಸ್ ಗೆ ವಿಷ ಬೆರೆಸಿದ್ದೇನೆ, ನಾನೂ ವಿಷ ಕುಡಿದ್ದೇನೆ ಎಂದ ತಂದೆ!

ಬಿಜೆಪಿ ನಾಯಕರು ಕಾರಿನಲ್ಲಿ ಬರುವ ವೇಳೆ ಎಚ್ಚರವಾಗಿರಿ | ಸಾರ್ವಜನಿಕರಿಗೆ ಡಿ.ಕೆ.ಶಿವಕುಮಾರ್ ಸಲಹೆ

ಇತ್ತೀಚಿನ ಸುದ್ದಿ