ಮನೆಯ ಒಳಗೆ ನುಗ್ಗಿ ಮಗುವನ್ನು ಹೊತ್ತೊಯ್ಯಲು ಯತ್ನಿಸಿದ ಚಿರತೆ | ಆತಂಕದಲ್ಲಿ ಗ್ರಾಮಸ್ಥರು - Mahanayaka
3:14 PM Thursday 12 - December 2024

ಮನೆಯ ಒಳಗೆ ನುಗ್ಗಿ ಮಗುವನ್ನು ಹೊತ್ತೊಯ್ಯಲು ಯತ್ನಿಸಿದ ಚಿರತೆ | ಆತಂಕದಲ್ಲಿ ಗ್ರಾಮಸ್ಥರು

kumta chirate
10/10/2021

ಕುಮಟಾ: ಆಟವಾಡುತ್ತಿದ್ದ ಮಗುವನ್ನು ಹೊತ್ತೊಯ್ಯಲು ಹೊಂಚು ಹಾಕುತ್ತಿದ್ದ ಚಿರತೆಯನ್ನು ಓಡಿಸಿ ಪಾಲಕರು ಮಗುವನ್ನು ರಕ್ಷಿಸಿದ ಘಟನೆ  ಕುಮಟಾದ ಬರ್ಗಿಯಲ್ಲಿ ನಡೆದಿದ್ದು, ಮಗುವನ್ನು  ಮನೆಯೊಳಗಿನಿಂದಲೇ ಹೊತ್ತೊಯ್ಯಲು ಚಿರತೆ ಯತ್ನಿಸಿತ್ತು ಎಂದು ಹೇಳಲಾಗಿದೆ.

ಬರ್ಗಿ ನಿವಾಸಿ ನಾರಾಯಣ ನಾಯ್ಕ ಎಂಬವರ ಮನೆಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮನೆಯ ಹಿಂಬದಿಯ ತೆರೆದ ಬಾಗಿಲಿನ ಮೂಲಕ ಬಂದ ಚಿರತೆ, ಮನೆ ಒಳಗೆ ಆಟವಾಡುತ್ತಿದ್ದ ಮಗುವನ್ನು ಕಚ್ಚಿಕೊಂಡು ಹೋಗಲು ಹೊಂಚು ಹಾಕಿ ಮೆಲ್ಲಗೆ ನಡೆದುಕೊಂಡು ಬಂದಿದ್ದು, ಈ ವೇಳೆ ಮನೆಯಲ್ಲಿದ್ದ ಯುವಯೊಬ್ಬರು ಕೊನೆಯ ಕ್ಷಣದಲ್ಲಿ ಇದನ್ನು ಗಮನಿಸಿದ್ದು, ಜೋರಾಗಿ ಬೊಬ್ಬೆ ಹಾಕಿ ಮಗುವನ್ನು ಓಡಿ ಬಂದು ಮನೆಯೊಳಗೆ ಎತ್ತಿಕೊಂಡು ಹೋಗಿ ರಕ್ಷಿಸಿದ್ದಾರೆ ಎನ್ನಲಾಗಿದೆ.

ಮನೆಯ ದುರಸ್ತಿ ಕೆಲಸ ನಡೆಯುತ್ತಿದ್ದ ಕಾರಣ ಹಿಂಬದಿ ಬಾಗಿಲು ತೆರೆದೇ ಇತ್ತು. ಚಿರತೆ ಕಳ್ಳ ಹೆಜ್ಜೆಯಿಟ್ಟು ಮಗುವಿನತ್ತ ಬರುವುದ‌ನ್ನು ನೋಡಿದ ನನ್ನ ಮಗಳು ಜೋರಾಗಿ‌ ಕಿರುಚಿ ಮಗುವನ್ನು ಬಾಚಿಕೊಂಡು ಬಂದಳು. ಆದರೆ, ಚಿರತೆ‌ ಮಾತ್ರ ಅಲ್ಲಿಂದ ಕದಲಲಿಲ್ಲ. ನಾವೆಲ್ಲ‌ ದೊಣ್ಣೆ ತೆಗೆದುಕೊಂಡು ಬಂದು ಕೂಗಾಡಿದಾಗ ಚಿರತೆ ನಿಧಾನವಾಗಿ‌ ಹಿಂದೆ ಸರಿದು ಹೊರಗೆ ಹೋಯಿತು ಎಂದು ಮಗುವಿನ ತಂದೆ  ಹೇಳಿದ್ದಾರೆ.

ಘಟನೆಯ ಬಗ್ಗೆ ಸ್ಥಳೀಯರು ಶನಿವಾರ ಮಾಹಿತಿ ನೀಡಿದ್ದಾರೆ. ಬರ್ಗಿಯಿಂದ 5 ಕಿ.ಮೀ. ದೂರದ ಪಡುವಣಿ ಹಾಗೂ ಗೋಕರ್ಣದಲ್ಲೂ ಚಿರತೆ ಬಂದಿದ್ದ ಕಾರಣ ಬೋನು ಸದ್ಯ ಗೋಕರ್ಣದಲ್ಲಿದೆ. ಅದನ್ನು ತಕ್ಷಣ ತಂದು ಬರ್ಗಿಯಲ್ಲಿ ಇಡಲಾಗುವುದು. ಅರಣ್ಯ ಸಿಬ್ಬಂದಿ ಭಾನುವಾರ ರಾತ್ರಿಯಿಡಿ ಸುತ್ತಲೂ ಪಹರೆ ನಡೆಸಲಿದ್ದಾರೆ ಎಂದು ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ನರೇಶ್ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಶಾರುಖ್ ಖಾನ್ ಅಭಿನಯಿಸಿದ್ದ Byju’s ಜಾಹೀರಾತು ತಾತ್ಕಾಲಿಕ ಸ್ಥಗಿತ!

ಮಂಗಳೂರಿನ ಲಾಡ್ಜ್ ನಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ | ಬಾಲಕಿಯ ಮುಗ್ಧತೆ ದುರುಪಯೋಗಪಡಿಸಿ ಕೊಂಡು ಕೃತ್ಯ!

“ಧೈರ್ಯವಿದ್ದರೆ ಗುಡ್ಡೆ ಮೈದಾನಕ್ಕೆ ಬಾ” ಎಂದು ಕರೆದು ಸಹೋದರರಿಬ್ಬರ ಮೇಲೆ 20ಕ್ಕೂ ಅಧಿಕ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ!

ಬಂಟ್ವಾಳ: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳ ಅರೆಸ್ಟ್

ಪೊಲೀಸರ ದುಷ್ಕೃತ್ಯದಿಂದ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಅತ್ಯಾಚಾರ ಸಂತ್ರಸ್ತೆ

ಬೌದ್ಧ ಮೂಲದ ರಥೋತ್ಸವಗಳು | ರಘು ಧರ್ಮಸೇನ

ಏರ್ ಇಂಡಿಯಾ ಟಾಟಾ ಸನ್ ಪ್ರೈವೇಟ್ ಲಿಮಿಟೆಡ್ ಪಾಲು | ಶೇ.100ರಷ್ಟು ಷೇರು ಮಾರಾಟ

ಇತ್ತೀಚಿನ ಸುದ್ದಿ