ಯುವತಿ ಮೇಲೆ ಶಿಕ್ಷಕನಿಂದ ಪದೇ ಪದೇ ಅತ್ಯಾಚಾರ: ಗರ್ಭಪಾತಕ್ಕೆ ಒತ್ತಡ
ಶೀಶ್ ಘರ್: ಮದ್ರಸ ಶಿಕ್ಷಕನ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಸಂತ್ರಸ್ತೆಯ ದೂರಿನನ್ವಯ ಆರೋಪಿ ಶಿಕ್ಷಕನ ವಿರುದ್ಧ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಯುವತಿ ಮದ್ರಸಕ್ಕೆ ಬಂದಿದ್ದಳು. ಈ ಸಂದರ್ಭದಲ್ಲಿ ಆರೋಪಿ ಕೂಡ ಅದೇ ಮದ್ರಸದಲ್ಲಿ ಕಲಿಯುತ್ತಿದ್ದ ಎನ್ನಲಾಗಿದೆ. ಇದಾದ ಬಳಿಕ ಆರೋಪಿಯು ಆ ಮದ್ರಸದಲ್ಲಿ ಶಿಕ್ಷಕನಾಗಿದ್ದ ಎಂದು ಹೇಳಲಾಗಿದೆ.
ಶಿಕ್ಷಕ ಹಾಗೂ ಸಂತ್ರಸ್ತೆ ಇಬ್ಬರು ಕೂಡ ಪ್ರೀತಿಸುತ್ತಿದ್ದು, ಈ ಸಂದರ್ಭದಲ್ಲಿ ಶಿಕ್ಷಕ ಸಂತ್ರಸ್ತೆಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದು, ಇದರ ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ.
ತಾನು ಗರ್ಭಿಣಿಯಾಗಿರುವ ವಿಚಾರವನ್ನು ಸಂತ್ರಸ್ತೆ ಶಿಕ್ಷಕನಿಗೆ ಹೇಳಿದಾಗ ನೀನು ಗರ್ಭಪಾತ ಮಾಡಿಸು ಎಂದು ಆತ ಒತ್ತಡ ಹಾಕಿದ್ದಾನೆ. ಹೀಗಾಗಿ ಆತನ ಮನೆಗೆ ಸಂತ್ರಸ್ತೆ ಹೋಗಿ ಮನವಿ ಮಾಡಿದಾಗ, ನೀನು ಊರು ಬಿಟ್ಟು ಹೋಗು ಎಂದು ಅವರು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ಸಂತ್ರಸ್ತೆಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರಗಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಇನ್ನಷ್ಟು ಸುದ್ದಿಗಳು…
ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಬರ್ಬರ ಹತ್ಯೆ!
ತಗಡಿನ ಶೆಡ್ ಗೆ ತಗಲಿದ ವಿದ್ಯುತ್: ಸಹೋದರರಿಬ್ಬರ ದಾರುಣ ಸಾವು
ಜೋರು ಮಳೆಯ ವೇಳೆ ಮರದಡಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಬಡಿದ ಸಿಡಿಲು | ತಂದೆಯ ದಾರುಣ ಸಾವು
KSRTC ಬಸ್ ಮತ್ತು ಆಟೋ ಡಿಕ್ಕಿ: ಮದುಮಗ ಸೇರಿದಂತೆ ಮೂವರ ದಾರುಣ ಸಾವು
ಮೋದಿ ಸರ್ಕಾರ ಕಾರ್ಮಿಕ, ರೈತ ಕಾನೂನುಗಳನ್ನು ದುರ್ಬಲಗೊಳಿಸುತ್ತಿದೆ | CPIM ಮುಖಂಡ ವಸಂತ ಆಚಾರಿ
ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಐವರು ಸಾವು | ಇಬ್ಬರು ಮಕ್ಕಳ ಸ್ಥಿತಿ ಗಂಭೀರ
ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ನಲ್ಲಿ ಕರೆದೊಯ್ದು ಯುವಕನ ಮೇಲೆ ಅತ್ಯಾಚಾರ!