ಕಾವೂರಿನ ಮುಸ್ಲಿಮ್ ಸಹೋದರರಿಬ್ಬರ ಕೊಲೆ ಯತ್ನ ಪ್ರಕರಣ: ಆರೋಪಿಗಳ ಮೇಲೆ 307 ಪ್ರಕರಣ ದಾಖಲು: ಪಾಪ್ಯುಲರ್ ಫ್ರಂಟ್ ಶ್ಲಾಘನೆ - Mahanayaka
10:18 AM Thursday 12 - December 2024

ಕಾವೂರಿನ ಮುಸ್ಲಿಮ್ ಸಹೋದರರಿಬ್ಬರ ಕೊಲೆ ಯತ್ನ ಪ್ರಕರಣ: ಆರೋಪಿಗಳ ಮೇಲೆ 307 ಪ್ರಕರಣ ದಾಖಲು: ಪಾಪ್ಯುಲರ್ ಫ್ರಂಟ್ ಶ್ಲಾಘನೆ

popular front of india
12/10/2021

ಮಂಗಳೂರು: ಕಾವೂರಿನಲ್ಲಿ ಮುಸ್ಲಿಮ್ ಸಹೋದರರಿಬ್ಬರ ಮೇಲೆ ಸಂಘಪರಿವಾರದ ಗೂಂಡಾಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಕೊಲೆ ಯತ್ನ (307) ಅನ್ವಯ ಪ್ರಕರಣ ದಾಖಲಿಸಿರುವುದನ್ನು ಪಾಪ್ಯುಲರ್ ಫ್ರಂಟ್(PFI) ಮಂಗಳೂರು ಗ್ರಾಮಾಂತರ ಅಧ್ಯಕ್ಷ ನವಾಝ್ ಕಾವೂರು ಶ್ಲಾಘಿಸಿದ್ದಾರೆ.

ಇತ್ತೀಚಿಗೆ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯಲ್ಲಿ ಸಂಘಪರಿವಾರದ ಅಟ್ಟಹಾಸ ಮಿತಿ ಮೀರುತ್ತಿದ್ದು, ದಿನನಿತ್ಯ ಒಂದಿಲ್ಲೊಂದು ನೆಪವಾಗಿಟ್ಟುಕೊಂಡು ಬಿಜೆಪಿ- ಸಂಘಪರಿವಾರ ಕಾರ್ಯಕರ್ತರು ಮುಸ್ಲಿಮ್ ಯುವಕರ ಮೇಲೆ ದಾಳಿ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಲ್ಪಟ್ಟ ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿದ್ದು, ಇನ್ನುಳಿದ ಅರೋಪಿಗಳನ್ನು ಕೂಡಲೇ ಬಂಧಿಸಬೇಕು. ಪೊಲೀಸ್ ಇಲಾಖೆ ಇಂತಹ ಕ್ರಿಮಿನಲ್  ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯ ಶಾಂತಿ, ಸೌಹಾರ್ದತೆ ಮತ್ತು ಏಕತೆಗೆ ಅಪಾಯಕಾರಿ ಯಾಗಿರುವ ಸಂಘಪರಿವಾರ(Sangh pariwar)ದ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಅಧ್ಯಕ್ಷ ನವಾಝ್ ಕಾವೂರು ಒತ್ತಾಯಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆ!

ತರಕಾರಿ ವ್ಯಾಪಾರಿಯ ಹನಿಟ್ರ್ಯಾಪ್: ಯುವತಿ ಸಹಿತ ಮೂವರು ಆರೋಪಿಗಳ ಅರೆಸ್ಟ್

ಬೊಮ್ಮಾಯಿ ಸಂಪುಟದ 4 ಹಾಲಿ ಸಚಿವರಿಗೆ ಕೋಕ್ ನೀಡುವ ಸಾಧ್ಯತೆ | 8 ಶಾಸಕರಿಗೆ ಶೀಘ್ರವೇ ಸಚಿವ ಸ್ಥಾನ!

ರಾಜಕೀಯ ಅಂದ್ರೆ, ಜನರ ಮೇಲೆ ಫಾರ್ಚುನರ್‌ ಕಾರು ಹರಿಸುವುದಲ್ಲ | ತನ್ನ ಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡ!

ಲಾಕಪ್ ನ ಚಿಲಕ ತೆಗೆದು ಪರಾರಿಯಾದ ಅತ್ಯಾಚಾರ ಆರೋಪಿ!

ಭೂಮಿ ಕಂಪಿಸಿದ ಭಯಾನಕ ಅನುಭವ: ರಾತ್ರಿ ಇಡೀ ನಿದ್ದೆ ಮಾಡದೇ ದಿನ ಕಳೆದ ಜನ

ಮೋದಿ ಸರ್ಕಾರ ಕಾರ್ಮಿಕ, ರೈತ ಕಾನೂನುಗಳನ್ನು ದುರ್ಬಲಗೊಳಿಸುತ್ತಿದೆ | CPIM ಮುಖಂಡ ವಸಂತ ಆಚಾರಿ

ಇತ್ತೀಚಿನ ಸುದ್ದಿ