ಡಿ.ಕೆ.ಶಿವಕುಮಾರ್ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಗುಸುಗುಸು ಮಾತು: ಕೊನೆಗೂ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ ಉಗ್ರಪ್ಪ
ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಪತ್ರಿಕಾಗೋಷ್ಠಿಗೂ ಮುನ್ನ ಕಾಂಗ್ರೆಸ್ ಮುಖಂಡರಾದ ಉಗ್ರಪ್ಪ ಹಾಗೂ ಸಲೀಂ ಅಹ್ಮದ್ ಅನಧಿಕೃತವಾಗಿ ಮಾತನಾಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ವಿ.ಎಸ್. ಉಗ್ರಪ್ಪ ಈ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ಬಗ್ಗೆ ಸಲೀಂ ಅಹ್ಮದ್ ಅವರು ಹೇಳಿದ್ದು ಅವರ ಹೇಳಿಕೆಯಲ್ಲ, ಬೇರೆಯವರು ಹೇಳಿದ್ದನ್ನು ನನ್ನ ಕಿವಿಯಲ್ಲಿ ಪತ್ರಿಕಾಗೋಷ್ಠಿ ಆರಂಭಕ್ಕೆ ಮುನ್ನ ಹೇಳಿದರು ಅಷ್ಟೆ, ಇದನ್ನು ವೈಭವೀಕರಿಸುವ ಅಗತ್ಯವಿಲ್ಲ. ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ನಾವೆಲ್ಲರೂ ಒಂದೇ ಕುಟುಂಬದಂತಿದ್ದೇವೆ ಎಂದು ಉಗ್ರಪ್ಪ ಸ್ಪಷ್ಟಪಡಿಸಿದ್ದಾರೆ.
ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ ಜಿ ಪರಮೇಶ್ವರ್ ಸೇರಿದಂತೆ ಹಿರಿಯ ನಾಯಕರು ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳನ್ನು ಜೊತೆಯಲ್ಲಿ ಕರೆದುಕೊಂಡು ಕಾಂಗ್ರೆಸ್ ನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ನಾವೆಲ್ಲರೂ ಶ್ರಮಿಸುತ್ತಿದ್ದೇವೆ. ರಾಜ್ಯದಲ್ಲಿ ಡಿ ಕೆಶಿ ಜನಪರ ಕಾಳಜಿ ಹೊಂದಿರುವ ವ್ಯಕ್ತಿ, ಅವರನ್ನು ನಾಲ್ಕು ದಶಕಗಳಿಂದ ಬಲ್ಲೆ, ಉತ್ತಮವಾದ ಕೆಲಸ ಮಾಡುತ್ತಿದ್ದಾರೆ ಎಂದು ಉಗ್ರಪ್ಪ ತಿಳಿಸಿದರು.
ನನ್ನ ಕ್ಷೇತ್ರ ಪಾವಗಡದಲ್ಲಿ ಹಿಂದೆ ವಿದ್ಯುತ್ ಪ್ರಾಜೆಕ್ಟ್ ಒಂದನ್ನು ಮಾಡಿಸಲು ಬಹಳಷ್ಟು ಸಹಾಯ ಮಾಡಿದ್ದರು. ಅದಕ್ಕೆ ಮುಖ್ಯ ಕಾರಣ ಡಿ ಕೆ ಶಿವಕುಮಾರ್. ಅವರು ಇಂಧನ ಇಲಾಖೆಯಲ್ಲಿ ಮತ್ತು ನೀರಾವರಿ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಪರ್ಸೆಂಟೇಜ್ ರಾಜಕಾರಣ ಮಾಡಿಲ್ಲ, ಡಿ ಕೆ ಶಿವಕುಮಾರ್ ಗೂ ಭ್ರಷ್ಟಾಚಾರಕ್ಕೂ ಬಹಳ ದೂರ, ರಾಜಕಾರಣದಲ್ಲಿ ಅವರು ಎಂದಿಗೂ ಆಸ್ತಿ, ಹಣ ಗಳಿಸಿಲ್ಲ, ಬದಲಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ಅವರು ಹೇಳಿದರು.
ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಅವರು ನೀರಾವರಿ ಇಲಾಖೆ ಹಗರಣದ ವಿಚಾರ ಪ್ರಸ್ತಾಪಿಸಿದರು. ಜನ ಮತ್ತು ಬಿಜೆಪಿ ನಾಯಕರು ಹೀಗೆ ಮಾತನಾಡುತ್ತಿದ್ದಾರೆ, ಡಿಕೆಶಿ ಮೇಲೆ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಎಂದು ಸಲೀಂ ಅವರು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು. ಸುದ್ದಿಗೋಷ್ಠಿ ಬಗ್ಗೆ ಸಲೀಂ ಅವರಿಗೆ ಬುದ್ದಿಮಾತು ಹೇಳಿದ್ದೆ ಎಂದು ಉಗ್ರಪ್ಪ ಸ್ಪಷ್ಟಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಇನ್ನಷ್ಟು ಸುದ್ದಿಗಳು…
ಕೆಮಿಕಲ್ ತುಂಬಿದ ಟ್ಯಾಂಕರ್ ಸ್ಫೋಟ: ರಸ್ತೆಯಲ್ಲಿಯೇ ವ್ಯಾಪಿಸಿದ ಬೆಂಕಿ
Uthra murder case: ಪತ್ನಿಯನ್ನು ಹಾವಿನಿಂದ ಕಚ್ಚಿಸಿ ಕೊಂದವನಿಗೆ ಜೀವಾವಧಿ ಶಿಕ್ಷೆ
ನಿರಂತರ ಮಳೆಗೆ ವಾಲಿ ನಿಂತ ಕಟ್ಟಡ: ಯಾವುದೇ ಸಮಯದಲ್ಲಿ ಕಟ್ಟಡ ಕುಸಿಯುವ ಭೀತಿ
ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ್ದು ಕೇವಲ ಒಂದೇ ಮತ | ತನ್ನ ಕುಟುಂಬದ 5 ಮಂದಿಯೂ ಬಿಜೆಪಿಗೆ ವೋಟ್ ಹಾಕಲಿಲ್ಲ!
ಬಾಲಕಿಗೆ ಹೆರಿಗೆಯಾದ ಬಳಿಕ ಬಾಲ್ಯ ವಿವಾಹ ಬಯಲಿಗೆ: ಬಾಲಕಿಯ ಪತಿ ಅರೆಸ್ಟ್
ಮದುವೆ ಆದರೂ ‘ಸಿಂಗಲ್’ ಆಗಿರುವ ಮೋದಿ ಬಗ್ಗೆ ಮಾತನಾಡುವ ಧೈರ್ಯ ನಿಮಗಿದೆಯೇ? | ಸುಧಾಕರ್ ಗೆ ಕುಟುಕಿದ ಕಾಂಗ್ರೆಸ್