ಹಬ್ಬದ ದಿನವೇ ಘೋರ ಕೃತ್ಯ: ಸಾಂಬರ್ ಚೆನ್ನಾಗಿಲ್ಲ ಎಂದು ತಾಯಿ, ತಂಗಿಯನ್ನು ಗುಂಡು ಹಾರಿಸಿಕೊಂಡ ಪಾಪಿ!
ಕಾರವಾರ: ಸಾಂಬರ್ ಸರಿಯಾಗಿ ಮಾಡಿಲ್ಲ ಎಂಬ ಕೋಪದಿಂದ ತಾಯಿ ಹಾಗೂ ತಂಗಿಯನ್ನು ಯುವಕನೋರ್ವ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಕಾರವಾರದ ದೊಡ್ಡಮನೆ ಗ್ರಾಮದ ಕುರುಗೋಡು ಬಳಿಯಲ್ಲಿ ನಡೆದಿದ್ದು, ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕುರುಗೋಡು ನಿವಾಸಿ ಪಾರ್ವತಿ ನಾರಾಯಣ ಹಸ್ಲರ್, ರಮ್ಯಾ ನಾರಾಯಣ ಹತ್ಯೆಗೀಡಾದವರು ಎಂದು ಗುರುತಿಸಲಾಗಿದೆ. ಮಂಜುನಾಥ ಎಂಬಾತ ಹತ್ಯೆ ಆರೋಪಿಯಾಗಿದ್ದು, ತನ್ನ ತಾಯಿ ಹಾಗೂ ತಂಗಿಯನ್ನೇ ಬಲಿ ಪಡೆದಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಆರೋಪಿ ಮಂಜುನಾಥನನ್ನು ಬಂಧಿಸಿದ್ದಾರೆ. ಮದ್ಯದ ನಶೆಯಲ್ಲಿ ಈ ಕೃತ್ಯ ನಡೆಸಿದ್ದಾನೆ ಎಂದು ಸದ್ಯ ಹೇಳಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಇನ್ನಷ್ಟು ಸುದ್ದಿಗಳು…
ಅದೇ ವಿಡಿಯೋದಲ್ಲಿ ಬಿ.ವೈ.ವಿಜಯೇಂದ್ರ ಬಗ್ಗೆಯೂ ಮಾತನಾಡಿದ್ರಂತೆ ಸಲೀಂ | ವಿಡಿಯೋ ಕಟ್ ಮಾಡಿ ತೋರಿಸಲಾಗಿದೆ ಎಂಬ ಆರೋಪ
ಕೋಟಿಗೊಬ್ಬ-3: ಬಿಡುಗಡೆ ದಿನವೇ ಸುದೀಪ್ ಅಭಿಮಾನಿಗಳಿಗೆ ಭಾರೀ ನಿರಾಸೆ
12 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿ ಅರೆಸ್ಟ್
ಕಂತ್ರಿ ನಾಯಿಗಳು ನೀವು, ಹೊಟ್ಟೆಗೆ ಏನ್ ತಿಂತೀರಾ? | ಉಗ್ರಪ್ಪಗೆ ಉಗ್ರರೂಪ ತೋರಿಸಿದ ಕಾಂಗ್ರೆಸ್ ಕಾರ್ಯಕರ್ತೆ
ಬಿಜೆಪಿಯ ಭ್ರಷ್ಟಾಚಾರವನ್ನು ಶಾಸಕರೊಬ್ಬರು ಮಂಚದ ಮೇಲೆಯೂ ಕನವರಿಸಿದ್ದರು | ಬಿಜೆಪಿಗೆ ಕಾಂಗ್ರೆಸ್ ತಿರುಗೇಟು
ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ: ಸಿಎಂ ಹೇಳಿಕೆ ಕಾನೂನು ಸುವ್ಯವಸ್ಥೆಯನ್ನು ಗಂಡಾಂತರಕ್ಕೆ ತಳ್ಳಲಿದೆ | SDPI