ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ: ಹೆಡ್ ಕಾನ್ಸ್ ಟೇಬಲ್ ಸಾವು - Mahanayaka
8:16 AM Thursday 12 - December 2024

ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ: ಹೆಡ್ ಕಾನ್ಸ್ ಟೇಬಲ್ ಸಾವು

abubakkar
15/10/2021

ಬಂಟ್ವಾಳ: ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಅವರು ಮೃತಪಟ್ಟ ಘಟನೆ ಇಲ್ಲಿನ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಸಮೀಪದ ನೇರಳಕಟ್ಟೆಯಲ್ಲಿ ನಡೆದಿದೆ.

ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ವೇಣೂರಿನ ಮರೋಳಿ ನಿವಾಸಿ 47 ವರ್ಷ ವಯಸ್ಸಿನ ಅಬೂಬಕರ್ ಅವರು ಮೃತಪಟ್ಟವರು ಎಂದು ಗುರುತಿಸಲಾಗಿದೆ. ವಾಮದಪದವಿನಲ್ಲಿ ನಡೆದ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ನೇರಳಕಟ್ಟೆ ಬಳಿಯಲ್ಲಿ ಅಪಘಾತ ನಡೆದಿದೆ.

ಘಟನೆಯಲ್ಲಿ ಇನ್ನೊಂದು ದ್ವಿಚಕ್ರದ ಸವಾರ ದುರ್ಗಾಪ್ರಸಾದ್ ಎಂಬವರು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು  ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ಡಿ.ಕೆ.ಶಿವಕುಮಾರ್ ಬೇನಾಮಿ ಆಸ್ತಿ: ಮಾಜಿ ಸಚಿವ ಸೊಗಡು ಶಿವಣ್ಣ ಗಂಭೀರ ಆರೋಪ

ಟಿಪ್ಪು ಸುಲ್ತಾನ್ ಇಲ್ಲದ ಮೈಸೂರು ದಸರಾ: ಬಿಜೆಪಿ ಸರಕಾರದ ಕೋಮುವಾದಿ ನಡೆ ಇತಿಹಾಸಕ್ಕೆ ಬಗೆದ ದ್ರೋಹ | ಪಾಪ್ಯುಲರ್ ಫ್ರಂಟ್

ದೇವಸ್ಥಾನದ ಆವರಣದಲ್ಲಿಯೇ ಮುಖ್ಯ ಅರ್ಚಕನನ್ನು ಗುಂಡು ಹಾರಿಸಿ ಕೊಂದ ಯುವಕರು !

ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಆರೋಪ: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅರೆಸ್ಟ್

ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿತ: ಶಿಕ್ಷಕನ ಕೃತ್ಯದ ವಿಡಿಯೋ ವೈರಲ್ ಮಾಡಿದ ವಿದ್ಯಾರ್ಥಿಗಳು

ಇತ್ತೀಚಿನ ಸುದ್ದಿ