ಪತ್ನಿಯ ಕತ್ತು ಕೊಯ್ದು ತಾನೂ ಆತ್ಮಹತ್ಯೆಗೆ ಶರಣಾದ ಪತಿ: ಕೌಟುಂಬಿಕ ಜಗಳ ದುರಂತ ಅಂತ್ಯ
ಕನಕಪುರ: ಪತಿ ಹಾಗೂ ಪತ್ನಿಯ ನಡುವಿನ ಅಸಮಾಧಾನ ದುರಂತ ಅಂತ್ಯವಾದ ಘಟನೆ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಗುಡ್ಡೆವೀರನಹೊಸಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದ್ದು, ಪತ್ನಿಯನ್ನು ಹತ್ಯೆ ಮಾಡಿದ ಪತಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.
35 ವರ್ಷ ವಯಸ್ಸಿನ ಇಂದ್ರ ಹತ್ಯೆಗೀಡಾಗಿರುವ ಮಹಿಳೆಯಾಗಿದ್ದು, ಗುಡ್ಡೆವೀರನಹೊಸಳ್ಳಿ ಗ್ರಾಮದ 44 ವರ್ಷ ವಯಸ್ಸಿನ ದೇಶಿಗೌಡ ತನ್ನ ಪತ್ನಿಯನ್ನು ಹತ್ಯೆ ಮಾಡಿ, ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಗುಡ್ಡೆವೀರನಹೊಸಳ್ಳಿಯ ದೇಶಿಗೌಡ ಪಕ್ಕದ ಬಾಗಿ ನಾಯ್ಕನಹಳ್ಳಿಯ ಇಂದ್ರ ಅವರನ್ನು 18 ವರ್ಷದ ಹಿಂದೆ ವಿವಾಹವಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದರು. ಕೋವಿಡ್ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಗ್ರಾಮಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ಕೃಷಿ ಚಟುವಟಿಕೆ, ಕೋಳಿ ಅಂಗಡಿ ಮತ್ತು ಚಿಲ್ಲರೆ ಅಂಗಡಿ ವ್ಯಾಪಾರ ಮಾಡುತ್ತಿದ್ದರು. ಆದರೂ ಪತ್ನಿ ಇಂದ್ರ ತಾವು ಇಲ್ಲಿ ಇರುವುದು ಬೇಡ. ಬೆಂಗಳೂರಿಗೆ ಹೋಗೋಣವೆಂದು ಗಂಡನಿಗೆ ಒತ್ತಾಯಿಸುತ್ತಿದ್ದರು. ಇದಕ್ಕೆ ಒಪ್ಪದೆ ಹಳ್ಳಿಯಲ್ಲೇ ಇರಬೇಕೆಂದು ದೇಶಿಗೌಡ ಹಠ ಹಿಡಿದಿದ್ದರಿಂದ ಇಬ್ಬರ ನಡುವೆ ಜಗಳ ನಡೆದಿತ್ತು.
ಅಂಗಡಿ ವ್ಯಾಪಾರ ಮಾಡುತ್ತಿದ್ದ ಪತ್ನಿ ತನಗೆ ಯಾವುದೇ ಹಣ ನೀಡದೆ ತಾನೇ ಇಟ್ಟಿಕೊಳ್ಳುತ್ತಾಳೆ. ತನ್ನನ್ನು ತುಂಬಾ ನಿಕೃಷ್ಟವಾಗಿ ನೋಡುತ್ತಿದ್ದಳು. ಆದ್ದರಿಂದ ಆಕೆಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರ ಬರೆದಿಟ್ಟಿದ್ದಾರೆ. ಮನೆಯಲ್ಲಿ ಮಲಗಿದ್ದ ಮಗ ಅಭಿಷೇಕ್ ಎದ್ದು ನೋಡಿದಾಗ ತಾಯಿ ಕೊಲೆಯಾಗಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ, ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾನೆ. ಹುಡುಕಾಡಿದಾಗ ಜಮೀನಿನಲ್ಲಿ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
BigNews: ಆರೆಸ್ಸೆಸ್ ನ ಹಿರಿಯ ಮುಖಂಡನಿಂದ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ
ಸಿಎಂ ಬೊಮ್ಮಾಯಿ ಅವರನ್ನು ನೋಡಲು ಬಂದ ಬಾಲಕನ ಮೇಲೆ ಪೊಲೀಸರಿಂದ ಹಲ್ಲೆ!
ಭಾರೀ ಮಳೆ, ಭೂಕುಸಿತಕ್ಕೆ ಕೇರಳದಲ್ಲಿ 18 ಮಂದಿ ಬಲಿ: ಕೇರಳದಲ್ಲಿ ಇಂದು ಕೂಡ ರೆಡ್ ಅಲಾರ್ಟ್!
ಬಸ್ – ಮ್ಯಾಕ್ಸಿಕ್ಯಾಬ್ ನಡುವೆ ಭೀಕರ ಅಪಘಾತ ಮೂವರು ರೈತರ ದಾರುಣ ಸಾವು
ಕೇರಳದಲ್ಲಿ ಮತ್ತೆ ಜಲಪ್ರಳಯದ ಭೀತಿ: ಬಿಟ್ಟು ಬಿಡದಂತೆ ಸುರಿಯುತ್ತಿದೆ ಭಾರೀ ಮಳೆ | ಮೂವರು ಬಲಿ
“ಬಸ್ಸಿನಲ್ಲಿ ಓಡಾಡುತ್ತಿದ್ದ ಬಜರಂಗದಳದ ಕಾರ್ಯಕರ್ತ ಸಿ.ಟಿ.ರವಿ ಕೋಟಿ ರವಿ ಆಗಿದ್ದು ಹೇಗೆ?”
ಕದ್ರಿ ಐತಿಹಾಸಿಕ ಬೌದ್ಧ ಸ್ಥಳ ವೀಕ್ಷಣೆ: 54 ಬೌದ್ಧ ಬಿಕ್ಕುಗಳ ಕರಾವಳಿ ಪ್ರವಾಸ
ಉಡುಪಿ: ‘ದುರ್ಗಾ ದೌಡ್’ ಮೆರವಣಿಗೆಯಲ್ಲಿ ಹಿಂದೂ ಜಾಗರಣ ಕಾರ್ಯಕರ್ತರಿಂದ ತಲವಾರು ಪ್ರದರ್ಶನ