ಉಪ ಚುನಾವಣೆ ಮುಗಿದ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ್ ಬೊಮ್ಮಾಯಿ - Mahanayaka
10:53 PM Wednesday 11 - December 2024

ಉಪ ಚುನಾವಣೆ ಮುಗಿದ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ್ ಬೊಮ್ಮಾಯಿ

petrol diesel price
18/10/2021

ಹುಬ್ಬಳ್ಳಿ:  ತೈಲ ಬೆಲೆ ಏರಿಕೆ (Petrol Diesel Price) ಯಿಂದ ಜನರು ತತ್ತರಿಸಿದ್ದಾರೆ. ಈ ನಡುವೆ ರಾಜ್ಯ ಸರ್ಕಾರ ಬೆಲೆ ಕಡಿಮೆ ಮಾಡುವ ಅವಕಾಶಗಳಿದ್ದರೂ, ಇನ್ನೂ ಬೆಲೆ ಇಳಿಕೆ ಮಾಡಿಲ್ಲ. ತಮಿಳುನಾಡಿನಲ್ಲಿ ಈಗಾಗಲೇ ರಾಜ್ಯ ಸರ್ಕಾರವೇ ಪೆಟ್ರೋಲ್ ಬೆಲೆ ಏರಿಕೆಯ ದರವನ್ನು ಇಳಿಸಿದೆ. ಈ ನಡುವೆ ಉಪ ಚುನಾವಣೆಯ ಬಳಿಕ ತೈಲ ಬೆಲೆ ಇಳಿಸುವ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.

ತೈಲ ಬೆಲೆಯು ರಾಜ್ಯದ ಆರ್ಥಿಕತೆಯ ಮೇಲೆ ಅವಲಂಬಿತವಾಗಿದೆ. ದರ ಇಳಿಸುವ ಬಗ್ಗೆ ಉಪ ಚುನಾವಣೆಯ ಬಳಿಕ ಪುನರವಲೋಕನ ಮಾಡುತ್ತೇನೆ. ಆರ್ಥಿಕ ಸುಧಾರಣೆಯಾದರೆ, ತೈಲದ ಮೇಲಿನ ಕರ ಇಳಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಆರೆಸ್ಸೆಸ್ ಹೊಗಳಿಕೆ ವಿಚಾರದ ಬಗ್ಗೆ ಈಗಾಗಲೇ ಉತ್ತರಿಸಿದ್ದೇನೆ. ಇನ್ನೂ ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಹಾನಗಲ್–ಸಿಂದಗಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅತೀ ಹೆಚ್ಚು ಮತಗಳಿಂದ ಆಯ್ಕೆಯಾಗುತ್ತಾರೆ ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಜಾತಿನಿಂದನೆ ಪ್ರಕರಣ: ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ಧಾರ್ಮಿಕ ಬಲಾತ್ಕಾರ:  ಚರ್ಚ್ ಗೆ ನುಗ್ಗಿ ದುರ್ನಡತೆ ತೋರಿದ ಬಿಜೆಪಿ ಪರಿವಾರ

ಮಹಿಳೆಯೊಂದಿಗಿನ ತನ್ನ ಖಾಸಗಿ ಚಿತ್ರವನ್ನು ವಾಟ್ಸಾಪ್ ಗ್ರೂಪ್ ಗೆ ಶೇರ್ ಮಾಡಿದ ಶಿಕ್ಷಕ!

ಪತ್ನಿಯ ಕತ್ತು ಕೊಯ್ದು ತಾನೂ ಆತ್ಮಹತ್ಯೆಗೆ ಶರಣಾದ ಪತಿ: ಕೌಟುಂಬಿಕ ಜಗಳ ದುರಂತ ಅಂತ್ಯ

BigNews: ಆರೆಸ್ಸೆಸ್ ನ ಹಿರಿಯ ಮುಖಂಡನಿಂದ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ

ಕದ್ರಿ ಐತಿಹಾಸಿಕ ಬೌದ್ಧ ಸ್ಥಳ ವೀಕ್ಷಣೆ: 54 ಬೌದ್ಧ ಬಿಕ್ಕುಗಳ ಕರಾವಳಿ ಪ್ರವಾಸ

ಇತ್ತೀಚಿನ ಸುದ್ದಿ