ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ: ಸಂಕಷ್ಟ ಸಿಲುಕಿದ ಸಿಎಂ ಬಸವರಾಜ್ ಬೊಮ್ಮಾಯಿ - Mahanayaka
8:09 AM Thursday 12 - December 2024

ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ: ಸಂಕಷ್ಟ ಸಿಲುಕಿದ ಸಿಎಂ ಬಸವರಾಜ್ ಬೊಮ್ಮಾಯಿ

basavaraj bommai
18/10/2021

ಬೆಂಗಳೂರು:  ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿ ಸಿಎಂ ಬಸವರಾಜ್ ಬೊಮ್ಮಾಯಿ ನೀಡಿರುವ ಹೇಳಿಕೆ ಇದೀಗ ತೀವ್ರತೆ ಪಡೆದುಕೊಂಡಿದ್ದು, ಅವರ ಹೇಳಿಕೆಯನ್ನು ಹಿಂಪಡೆದುಕೊಳ್ಳಬೇಕು ಎಂದು  ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್ (AILAJ ) ಕಾನೂನು ನೋಟೀಸ್ ನೀಡಿದೆ.

ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಂಗಳೂರು ಪ್ರವಾಸದ ವೇಳೆ ಅನೈತಿಕ ಪೊಲೀಸ್ ಗಿರಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, ಆಕ್ಷನ್ ಗೆ ರಿಯಾಕ್ಷನ್ ಇದ್ದೇ ಇರುತ್ತದೆ. ನೈತಿಕತೆ ಎನ್ನುವುದು ಇರಬೇಕಲ್ವಾ? ಎಂದು ಹೇಳುವ ಮೂಲಕ ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿಕೊಂಡಿರುವ ಬಗ್ಗೆ ವರದಿಯಾಗಿತ್ತು ಈ ವರದಿ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ವರದಿಗಳಲ್ಲಿಯೂ ಸದ್ದು ಮಾಡಿತ್ತು.

ಇನ್ನೂ ಈ ಸಂಬಂಧ ಸಿಎಂಗೆ ಕಾನೂನು ನೋಟಿಸ್ ಕಳುಹಿಸಿರುವ AILAJ, ನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸುವ ಮೂಲಕ ಸಿಎಂ ತಮ್ಮ ಪ್ರಮಾಣ ವಚನ ಉಲ್ಲಂಘಿಸಿದ್ದಾರೆ.  ಅವರ ಹೇಳಿಕೆ ಸಾಂವಿಧಾನಿಕ ಶಪಥಗಳನ್ನು  ಉಲ್ಲಂಘಿಸಿದೆ. ನಿಮ್ಮ ಹೇಳಿಕೆ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಪೊಲೀಸ್ ಗಿರಿಗೆ ನಿಮ್ಮ ಬೆಂಬಲವಿದೆ ಎನ್ನುವುದನ್ನು ಸೂಚಿಸುತ್ತಿದೆ ಎಂದು AILAJ ಹೇಳಿದೆ.

ಧಾರ್ಮಿಕ ದ್ವೇಷದ ಸಂತ್ರಸ್ತರಿಗೆ  ಸಾಂತ್ವನದ ಮಾತುಗಳನ್ನು ಹೇಳುವ ಬದಲು ಕಾನೂನು ಕೈಗೆತ್ತಿಕೊಳ್ಳುವ ಖಾಸಗಿ ವ್ಯಕ್ತಿಗಳನ್ನು ಸಮರ್ಥಿಸಿಕೊಂಡಿದ್ದೀರಿ. ಸಂತ್ರಸ್ತರಿಗೆ ನೆರವು ಮತ್ತು ರಕ್ಷಣೆಯನ್ನೂ ನಿರಾಕರಿಸಿರುವುದು ಮಾತ್ರವಲ್ಲದೇ ಅವರನ್ನು ಕಾನೂನು ಬಾಹಿರ ಶಕ್ತಿಗಳಿಗೆ ಬಿಟ್ಟುಕೊಟ್ಟಿದ್ದೀರಿ. ಈ ಮೂಲಕ ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿಕೊಂಡಿದ್ದೀರಿ ಎಂದು AILAJ ಹೇಳಿದೆ.

ನಿಮ್ಮ ಹೇಳಿಕೆಯು ಗುಂಪು ಹಿಂಸಾಚಾರವನ್ನು ನಿಯಂತ್ರಿಸಲು ಮತ್ತು ನಿಗ್ರಹಿಸಲು ಸವೋಚ್ಚ ನ್ಯಾಯಾಲಯವು ನೀಡಿರುವ ನಿರ್ದೇಶಗಳಿಗೆ ವಿರುದ್ಧವಾಗಿವೆ. ನಿಮ್ಮ ಹೇಳಿಕೆಗಳನ್ನು ತಕ್ಷಣವೇ ಹಿಂದೆಗೆದುಕೊಳ್ಳುವಂತೆ ಸಿಎಂಗೆ AILAJ ಹೇಳಿದ್ದು, ಇದಕ್ಕೆ ವಿಫಲವಾದರೆ, ಸೂಕ್ತ ಕಾನೂನು ಕ್ರಮಕೈಗೊಳ್ಳುವುದು ಅನಿವಾರ್ಯ ಎಂದು ಎಚ್ಚರಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ರಾಜ್ಯದಲ್ಲಿ ಅ.25ರಿಂದ 1ರಿಂದ 5ನೇ ತರಗತಿವರೆಗೆ ಶಾಲೆ ಆರಂಭ

ಮಧ್ಯಪ್ರದೇಶ: 12 ಲಕ್ಷ ಎತ್ತುಗಳ ‘ವೃಷಣ ಬೀಜ’ ಒಡೆಯುವ ಯೋಜನೆಗೆ ಬಿಜೆಪಿ ಸಂಸದೆಯಿಂದಲೇ ವಿರೋಧ

Police Officer’s Car Runs Over 2 Girls At Jalandhar–Phagwara Highway

“ತ್ರಿಶೂಲ ಕೊಟ್ರೆ ಮೊದಲ ಬೇಟೆ ನೀನೇ” | ಮಾಜಿ ಸಿಎಂ ಸಿದ್ದರಾಮಯ್ಯಗೆ ಜೀವ ಬೆದರಿಕೆ

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಪಡೆದು ಮನೆಗೆ ಬಂದ ಬಳಿಕ ಸಾವು!

ಜಾತಿನಿಂದನೆ ಪ್ರಕರಣ: ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ನಡು ಬೀದಿಯಲ್ಲಿ ತಲ್ವಾರ್ ಝಳಪಿಸುತ್ತಾ ಡಿಜೆಗೆ ಸ್ಟೆಪ್ ಹಾಕಿದ ಹಿಂದುತ್ವ ಕಾರ್ಯಕರ್ತರು!

ಇತ್ತೀಚಿನ ಸುದ್ದಿ